ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗದ ಬೇಡಿಕೆ ನಟಿಯರ ಪೈಕಿ ಮೇಘನಾ ರಾಜ್ ಕೂಡ ಒಬ್ಬರು ನಟಿ ಮೇಘನ ರಾಜ್ ರಾಜ್ ಚಿಕ್ಕವಯಸ್ಸಿನಿಂದಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೌದು ಮೇಘನಾ ರಾಜ್ ಅವರ ತಂದೆ ತಾಯಿ ಇಬ್ಬರೂ ಸಿನಿಮಾರಂಗಕ್ಕೆ ಸೇರಿದವರು.
ನಟಿ ಪ್ರಮೀಳಾ ಜೋಷಾಯಿ ಹಾಗೂ ಸುಂದರ್ ರಾಜ್ ಮಗಳಾದ ಮೇಘನಾ ರಾಜ್ ಚಿಕ್ಕವಯಸ್ಸಿನಿಂದಲೂ ಬಣ್ಣದ ಲೋಕದ ಜೊತೆಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ಸದ್ಯ ನಟಿ ಕನ್ನಡ ಹಾಗೂ ಮಲಯಾಳಂ ಚಿತ್ರರಂಗದ ಟಾಪ್ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಕೋವಿಡ್ ಸಮಯ ಎಲ್ಲರಿಗೂ ಬಹಳ ಕಸ್ತಕರವಾಗಿತ್ತು, ಇನ್ನು ಈ ಸಮಯ ಮೇಘನಾ ರಾಜ್ ಕುಟುಂಬಕ್ಕೆ ಇನ್ನಷ್ಟು ಕಷ್ಟಕರವಾಗಿತ್ತು. ಹೌದು ಈ ಸಮಯದಲ್ಲಿ ಮೇಘನಾ ರಾಜ್ ಪತಿ ಚಿರು ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೋದರು.
ಇನ್ನು ಈ ವೇಳೆ ನಟಿ ಮೇಘನಾ ರಾಜ್ ರಾಯನ್ ಗೆ ಜನ್ಮ ನೀಡಿದ್ದರು. ಇನ್ನು ಈ ವೇಳೆ ಅವರು ಪಟ್ಟ ಕಷ್ಟಗಳನ್ನು ಇದೀಗ ಮೇಘನಾ ರಾಜ್ ತಂದೆ ಸುಂದರ್ ರಾಜ್ ಅವರು ವೇದಿಕೆ ಮೇಲೆ ಹೇಳಿದ್ದಾರೆ. ಅಷ್ಟಕ್ಕೂ ಸುಂದರ್ ರಾಜ್ ಹೇಳಿದ್ದೇನು ನೋಡಿಣ ಬನ್ನಿ…
ಕೋ-ವಿಡ್ ಸಮಯದಲ್ಲಿ ನಮ್ಮ ಇಡೀ ಕುಟುಂಬಕ್ಕೆ ಕೋ-ವಿಡ್ ಕಾಣಿಸಿಕೊಂಡಿತ್ತು, ನನಗೆ, ಪ್ರಮೀಳಾ ಹಾಗೂ ಮೇಘನಾ ರಾಜ್ ಜೊತೆಗೆ ಪುಟ್ಟ ಕಂದ ರಾಯನ್ ಗೂ ಕೂಡ ಕೋ-ವಿಡ್ ಸೋಂ-ಕಿತ್ತು. ಈ ವೇಳೆ ನಾವೆಲ್ಲರೂ ಕಾಸಗಿ ಅಸ್ಪತ್ರೆಗೆ ಧಾಖಲಾದೆವು, ಇನ್ನು ನಾವೆಲ್ಲರೂ ಒಬ್ಬರಿಂದ ಒಬ್ಬರು ದೂರವಾದೆವು,
ಒಂದು ಕಡೆ ಮೇಘನಾ ರಾಜ್ ನನಗೆ ಕರೆ ಮಾಡಿ ಅಪ್ಪ ಮಗುಗೂ ಕೂಡ ಕೋ-ವಿಡ್ ಸೋಂ-ಕಿದೆ ಎನ್ನುತ್ತಿದ್ದಾರೆ. ಅವನನ್ನು ಮುಟ್ಟಲು ಬಿಡುತ್ತಿಲ್ಲ ಎಂದು ಆಳುತ್ತಿದ್ದರು. ಇನ್ನೊಂದು ಕಡೆ ಪ್ರಮೀಳಾ ಅವರು ಉಸಿರಾಟಕ್ಕೆ ತೊಂದರೆಯಾಗಿ ನರಳುತ್ತಿದ್ದರು.
ಕೆಲವರು ಅವರು ಉಳಿಯುವುದಿಲ್ಲ ಎಂದು ಬಿಟ್ಟರು, ಆಗ ನಾನು ಆ ದೇವರಲ್ಲಿ ಸಾಕಷ್ಟು ಕೇಳಿಕೊಂಡೆ. ನಮ್ಮ ಅದೃಷ್ಟವಶಾತ್ ವೈದ್ಯರು ಸರಿಯಾದ ಟ್ರೀಟ್ಮೆಂಟ್ ನೀಡಿ ನಮ್ಮನ್ನು ಉಳಿಸಿ ಬಿಟ್ಟರು ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.