ಕನ್ನಡ ಚಿತ್ರರಂಗದ ಟಾಪ್ ಹೀರೋಗಳಲ್ಲಿ ನಟ ಧೃವ ಸರ್ಜಾ ಕೂಡ ಒಬ್ಬರು. ಧೃವ ಸರ್ಜಾ ಮಾಡಿರುವುದು ಕೇವಲ ಕೆಲವೇ ಕೆಲವು ಸಿನಿಮಾಗಳು, ಆದರೂ ಸಹ ಅವರ ಬೇಡಿಕೆ ಹಾಗೂ ಫ್ಯಾನ್ ಬೆಸ್ ಯಾವ ನಟನಿಗೂ ಸಹ ಕಡಿಮೆ ಇಲ್ಲದಂತಿದೆ. ಇನ್ನು ಧೃವ ಸರ್ಜಾ ಅವರ ನಟನೆಯ ಬಗ್ಗೆ ಹೇಳಲು ಒಂದು ಮಾತಿಲ್ಲ.
ಏಕೆಂದರೆ ಸರ್ಜಾ ಕುಟುಂಬದಲ್ಲಿ ಸಾಕಷ್ಟು ಕಲಾವಿದರಿದ್ದು, ಸರ್ಜಾ ಕುಟುಂಬವನ್ನು ಕಲಾಕ್ಷೇತ್ರದಲ್ಲಿ ಯಾರಿಂದಲೂ ಸಹ ಮೀರಿಸಲು ಆಗುವುದಿಲ್ಲ. ಅಣ್ಣ ಚಿರಂಜೀವಿ ಸರ್ಜಾ ಹಾಗೂ ಚಿಕ್ಕಪ್ಪ ಅರ್ಜುನ್ ಸರ್ಜಾ ರೀತಿಯೇ ನಟ ಧೃವ ಸರ್ಜಾ ಕೂಡ ಅದ್ಭುತ ನಟ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಇನ್ನು ನಟ ಧೃವ ಸರ್ಜಾ ಅವರ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್, ಜೋಗಿ ಪ್ರೇಮ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಈಗಾಗಲೆ ವೀಕ್ಷಕರಲ್ಲಿ ಬಹಳ ಕುತೂಹಲ ಮೂಡಿಸಿದೆ. ಇನ್ನು ನಟ ಧೃವ ಸರ್ಜಾ ಅವರ ಈ ಸಿನಿಮಾದ ಲುಕ್ ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚೆಗೆ ಬಹಳ ವೈರಲ್ ಆಗಿತ್ತು.
ನಟ ಧೃವ ಸರ್ಜಾ ಅವರ ಮಾರ್ಟಿನ್ ಸಿನಿಮಾಗಾಗಿ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಇನ್ನು ಇದೆ ವೇಳೆ ಧೃವ ಸರ್ಜಾ ಅವರ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಧೃವ ಸರ್ಜಾ ಅವರಿಗೆ ಮೇಘನಾ ರಾಜ್ ಹಾಗೂ ಅವರ ಕುಟುಂಬದ ಜೊತೆಗೂ ಕೂಡ ಉತ್ತಮ ಒಡನಾಟ ಇದೆ. ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಾಯಿ ಹಾಗೂ ಅವರ ತಂದೆ ಸುಂದರ್ ರಾಜ್ ಅವರಿಗೂ ಸಹ ಧೃವ ಸರ್ಜಾ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ.
ಇನ್ನು ಇದೀಗ ಧೃವ ಸರ್ಜಾ ಹಾಗೂ ಸುಂದರ್ ರಾಜ್ ಇದೀಗ ಒಂದೇ ವೇದಿಕೆ ಮೇಲೆ ಸಿಕ್ಕಿದ್ದಾರೆ. ಈ ವೇಳೆ ಒಬ್ಬರನೊಬ್ಬರು ನೋಡಿ ನಕ್ಕಿದ್ದಾರೆ. ಹಾಗೂ ಸುಂದರ್ ರಾಜ್ ಅವರು ಧೃವ ಸರ್ಜಾ ಅವರನ್ನು ನೋಡಿ ಅವರ ಕಿವಿಯಲ್ಲಿ ಏನೋ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಧೃವ ಸರ್ಜಾ ಹಾಗೂ ಸುಂದರ್ ರಾಜ್ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಸಹ ಮೂಡಿದೆ. ಸದ್ಯ ಈ ವಿಷಯ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ..