ಮೇಘನಾ ರಾಜ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಖಡಕ್ ಉತ್ತರ ಕೊಟ್ಟ ನಟಿ ಪಾವನ ಗೌಡ! ಹೇಳಿದ್ದೆನು ಗೊತ್ತಾ ನೀವೇ ನೋಡಿ!…

ಸ್ಯಾಂಡಲವುಡ್

ಕನ್ನಡ ಚಿತ್ರರಂಗದ ಉತ್ತಮ ನಟಿ ಪಾವನ ಗೌಡ ಸದ್ಯ ನಟಿ ತಮ್ಮ ಸದ್ದು ವಿಚಾರನೇ ನಡೆಯುತ್ತಿದೆ ಎನ್ನುವ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇನ್ನು ನಟಿ ಪಾವನ ಗೌಡ ಹಾಗೂ ನಟಿ ಮೇಘನಾ ರಾಜ್ ಒಳ್ಳೆಯ ಸ್ನೇಹಿತರು, ಈ ಇಬ್ಬರು ಒಟ್ಟಾಗಿ ಆಟಗಾರ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನು ಇತ್ತೀಚಿಗೆ ನಟಿ ಮೇಘನಾ ರಾಜ್ ಅವರು ತಮ್ಮ ಸ್ನೇಹಿತರ ಜೊತೆಗೆ ಥೈಲ್ಯಾಂಡ್ ಗೆ ಪ್ರವಾಸಕ್ಕೆ ಹೋಗಿದ್ದರು. ಈ ಬಗ್ಗೆ ಸಾಕಷ್ಟು ಜನ ನೆಗೆಟಿವ್ ಕಾಮೆಂಟ್ ಮಾಡಿದ್ದರು ಬಹಳ ವೈರಲ್ ಆಗಿತ್ತು. ಇದೀಗ ನಟಿ ಮೇಘನಾ ರಾಜ್ ಬಗ್ಗೆ ನಟಿ ಪಾವನ ಗೌಡ ಕೂಡ ಮಾತನಾಡಿದ್ದಾರೆ. ಹಾಗಾದರೆ ನಟಿ ನೋಡೋಣ ಬನ್ನಿ.

ಅವರ ಜೀವನದಲ್ಲಿ ನಡೆದ ಆ ಕಹಿ ಘಟನೆಯ ನಂತರ ಇಡೀ ಕರ್ನಾಟಕ ಅವರ ಜೊತೆ ನಿಂತಿದೆ. ಪ್ರತಿಯೊಬ್ಬರು ಅವರ ಜೊತೆ ನಿಂತು ಅವರ ಜರ್ನಿಯನ್ನು ನೋಡಿದ್ದಾರೆ ಅವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ, ಅಲ್ಲದೆ ಮೇಘನಾ ಅವರಿಗೆ ಒಂದು ರೀತಿಯ ಶಕ್ತಿಯನ್ನೇ ಕೊಟ್ಟಿದ್ದಾರೆ ಎಂದು ಹೇಳಬಹುದು.

ಇನ್ನು ಮೇಘನಾ ಅವರು ಕೂಡ ಅದನ್ನು ಇಷ್ಟು ದಿನ ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಇವೆಲ್ಲ ಆಗಿ ಇಷ್ಟು ದಿನಗಳು ಕಳೆದಿದೆ ಅದು ಕೂಡ ಒಂದು ಹೆಣ್ಣು ಜೀವ ಅಲ್ವಾ ನೋವುಗಳನ್ನು ಮರೆಯಬೇಕು. ಎಲ್ಲಿಗಾದರೂ ಹೋಗಬೇಕು ಅಲ್ಲದೆ ಎಲ್ಲವನ್ನು ಮೀರಿ ಬದುಕು ಸಾಗಬೇಕು ನಡೆಯುತ್ತಲೇ ಇರಬೇಕು.

ನನ್ನ ಪ್ರಕಾರ ಎಲ್ಲರೂ ಈಗಲೂ ಸಹ ಅವರಿಗೆ ಅಷ್ಟು ಶಕ್ತಿ ಹಾಗು ಪ್ರೀತಿಯನ್ನು ಕೊಡಬೇಕು. ಏಕೆಂದರೆ ಎಲ್ಲವೂ ಜೀವನದ ಒಂದು ಭಾಗ ಒಂದನ್ನೇ ನೆನಪಿಟ್ಟುಕೊಂಡು ಕೂರಲು ಆಗುವುದಿಲ್ಲ. ಅವರು ತಮ್ಮ ನೋವನ್ನು ಮರೆತು ಹೊಸ ಜೀವನವನ್ನು ಶುರು ಮಾಡಬೇಕಾಗುತ್ತದೆ.

ಮೇಘನಾ ಅವರು ಒಬ್ಬ ಅದ್ಭುತ ತಾಯಿ ಹಾಗೂ ಅದ್ಭುತ ಗೈಡ್ ಕೂಡ ಆಗಿದ್ದಾರೆ. ಆ ಇಡೀ ಕುಟುಂಬ ಮೇಘನಾ ರಾಜ್ ಕುಟುಂಬ ಆಗಿರಬಹುದು ಎಲ್ಲವನ್ನು ಸಹ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಇನ್ನು ಮೇಘನಾ ರಾಜ ಅವರುಮಗುವನ್ನು ಬಿಟ್ಟು ಹೋಗಿದ್ದಾರೆ ಎಂದರೆ ಅವರು ಕೇವಲ ಕೆಲವು ದಿನಗಳಿಗೆ ಮಾತ್ರ ಹೋಗಿದ್ದಾರೆ.

ಎಲ್ಲರಿಗೂ ಅವರದೇ ಆದ ಪರ್ಸನಲ್ ಸ್ಪೇಸ್ ಎನ್ನುವುದು ಕೇವಲ ಎರಡು-ಮೂರು ದಿನಗಳಿಗೆ ಅವರು ತಮ್ಮ ಗೆಳೆಯತಿಯರ ಜೊತೆ ಹೋದರೆ ಅದು ತಪ್ಪಲ್ಲ ಎಂದಿದ್ದಾರೆ ನಟಿ ಪಾವನ ಗೌಡ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *