ಅಪ್ಪು ಅವರ ಕನಸಿನ ಸಿನಿಮಾ ಹಾಗೂ ಕೊನೆಯ ಸಿನಿಮಾ ಗಂಧದಗುಡಿ ಬಿಡುಗಡೆಯಾಗಿ ಎಲ್ಲರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಅಪ್ಪು ಅವರ
ಗಂಧದ ಗುಡಿ ಸಿನಿಮಾ ಬಾಕ್ಸ್ ಆಫೀಸ್ ಲೂಟಿ ಮಾಡಿವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಎಂದಿಗೂ ಸಹ ಎಲ್ಲಿ ನೋಡಿದರೂ,
ಈ ಸಿನಿಮಾದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಅಪ್ಪು ಪತ್ನಿಯ ಅಶ್ವಿನಿ ಅವರು ಈ ಸಿನಿಮಾ ಬಿಡುಗಡೆಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ಇದೀಗ ಈ ಎಲ್ಲಾ ಕಷ್ಟಗಳಿಗೂ ಪ್ರತಿಫಲ ಸಿಕ್ಕಿದೆ ಎಂದರೆ ತಪ್ಪಾಗುವುದಿಲ್ಲ. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಕಳೆಯುತ್ತಾ ಬರುತ್ತಿದೆ,
ಆದರೂ ಸಹ ಅಪ್ಪು ಅವರ ಗಂಧದಗುಡಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ನಿಜಕ್ಕೂ ಅಪ್ಪು ಅವರು ಕನ್ನಡಿಗರ ಹಾಗೂ ಕರ್ನಾಟಕದ ಹೆಮ್ಮೆ ಎನ್ನುವುದು ಈ ಸಿನಿಮಾದ ಮೂಲಕ ಇನ್ನಷ್ಟು ನಿಜವಾಗಿದೆ. ಇದೀಗ ಗಂಧದಗುಡಿ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಅಶ್ವಿನಿ ಹಾಗೂ ಚಿತ್ರತಂಡ ತೇಲಾಡುತ್ತಿದ್ದಾರೆ.
ಸದ್ಯ ಇದೀಗ ಅಪ್ಪು ಅವರ ಗಂಧದಗುಡಿ ಸಿನಿಮಾದ ಸಕ್ಸಸ್ ಮೀಟಿಂಗ್ ಅನ್ನು ಬೆಂಗಳೂರಿನ ಕಾಸಗಿ ಹೋಟೆಲ್ ನಲ್ಲಿ ಜರುಗಿಸಿಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ಅದೆಷ್ಟೋ ಜನರು ಭಾಗಿಯಾಗಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಅಶ್ವಿನಿ ಅವರನ್ನು ಒಬ್ಬ ಅಭಿಮಾನಿ ಭೇಟಿ ಮಾಡಿದ್ದಾರೆ.
ಗಂಧದಗುಡಿ ಸಿನಿಮಾದ ಸಕ್ಸಸ್ ಕಾರ್ಯಕ್ರಮಕ್ಕೆ ಇಡೀ ಚಿತ್ರತಂಡ ಜೊತೆಗೆ ಆಶ್ವಿನಿ ಪುನೀತ್ ಹಾಗೂ ಯುವ ರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು. ಇನ್ನು ಕಾರ್ಯಕ್ರಮದ ಅಂತ್ಯದಲ್ಲಿ ಅಲ್ಲಿದ್ದ ಒಬ್ಬ ಅಭಿಮಾನಿ ಅಶ್ವಿನಿ ಮೇಡಂ ಹಾಗೂ ಯುವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಅಲ್ಲದೆ ಅಶ್ವಿನಿ ಹಾಗೂ ಯುವ ರಾಜ್ ಕುಮಾರ್ ಅವರನ್ನು ಅಷ್ಟು ಹತ್ತಿರದಿಂದ ನೋಡಿ ಆ ಅಭಿಮಾನಿ ಬಹಳ ಖುಷಿ ಪಟ್ಟಿದ್ದಾರೆ. ಅಲ್ಲದೆ ಅಶ್ವಿನಿ ಅವರು ಕೂಡ ಆ ಅಭಿಮಾನಿಯ ಜೊತೆಗೆ ಬಹಳ ಪ್ರೀತಿಯಿಂದ ಮಾತನಾಡಿದ್ದಾರೆ. ಹಾಗೆ ಆ ಅಭಿಮಾನಿ ಅಶ್ವಿನಿ ಹಾಗೂ ಯುವ ರಾಜ್ ಕುಮಾರ್,
ಜೊತೆಗೆ ಒಂದು ಫೋಟೋವನ್ನ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ರೀತಿಯ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…