ಇನ್ನು ನನ್ನ ತಂಗಿ ಯಾಕೆ ಬಂದಿಲ್ಲ! ತಂಗಿಗಾಗಿ ಚಡಪಡಿಸುತ್ತಿರುವ ಶಿವಣ್ಣ ಮಗಳ ವಿಡಿಯೋ ನೋಡಿ!..

ಸ್ಯಾಂಡಲವುಡ್

ದೊಡ್ಮನೆ ಎನ್ನುವುದು ಕೇವಲ ಹೆಸರಿಗೆ ಮಾತ್ರ ದೊಡ್ಮನೆ ಅಲ್ಲ ಅಲ್ಲಿರುವ ಪ್ರತಿಯೊಬ್ಬರ ಮನಸ್ಸು ಕೂಡ ದೊಡ್ಡದು ಎನ್ನುವುದನ್ನು ಸಾಕಷ್ಟು ಬಾರಿ ದೊಡ್ಮನೆ ಅವರು ನಿರೂಪಿಸಿದ್ದಾರೆ. ಅಣ್ಣಾವ್ರ ಕಾಲದಿಂದಲೂ ದೊಡ್ಡಮನೆಯ ಪ್ರತಿಯೊಬ್ಬ ಸದಸ್ಯರು ಕೂಡ ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ.

ಅಣ್ಣಾವ್ರ ಮಕ್ಕಳಾದ ಡಾಕ್ಟರ್ ಶಿವರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಪುನೀತ್ ರಾಜಕುಮಾರ್. ಈ ಮೂರು ಜನರು ಕೂಡ ಅವರ ತಂದೆಯ ರೀತಿಯ ಸಿನಿಮಾಗಳ ಜೊತೆಗೆ ತಮ್ಮನ್ನು ತಾವು ಸಾಮಾಜಿಕ ಕೆಲಸಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.

ಇನ್ನು ಅಪ್ಪು ಅವರು ಅದೆಷ್ಟೋ ಜನರಿಗೆ ಬದುಕನ್ನು ಕಟ್ಟಿ ಕಟ್ಟಿದ್ದಾರೆ ಇನ್ನು ಅಣ್ಣ-ತಮ್ಮ ಎಂದರೆ ಹೀಗಿರಬೇಕು ಎಂದು ಶಿವಣ್ಣ ರಾಘಣ್ಣ ಹಾಗೂ ಅಪ್ಪು ಅವರು ಜನರಿಗೆ ತೋರಿಸಿಕೊಟ್ಟಿದ್ದಾರೆ. ಇನ್ನು ಇದೀಗ ಅದೇ ಗುಣಗಳು ಅವರ ಮಕ್ಕಳಿಗೂ ಕೂಡ ಬಂದಿದೆ.

ಹೌದು ಶಿವಣ್ಣ ರಾಘಣ್ಣ ಹಾಗೂ ಅಪ್ಪು ಎಷ್ಟು ಆತ್ಮೀಯರಾಗಿದ್ದರು ಎನ್ನುವುದು ಎಲ್ಲರಿಗೂ ಸಹ ಗೊತ್ತಿದೆ. ಏನೇ ಆದರೂ ಯಾವುದೇ ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟು ಕೊಟ್ಟಿಲ್ಲ. ಇನ್ನು ಅಪ್ಪು ಅವರು ನಮ್ಮನ್ನು ಬಿಟ್ಟು ಹೋದಮೇಲೆ ಶಿವಣ್ಣ ಹಾಗೂ ರಾಘಣ್ಣ ಅಪ್ಪು ಪತ್ನಿ ಅಶ್ವಿನಿ ಹಾಗೂ ಅವರ ಮಕ್ಕಳ ನೆರವಿಕೆ ನಿಂತಿದ್ದಾರೆ.

ಇನ್ನು ಶಿವಣ್ಣ ಹಾಗೂ ರಾಘಣ್ಣ ಅವರ ಮಕ್ಕಳು ಹಾಗೂ ಅಪ್ಪು ಮಕ್ಕಳು ಕೂಡ ಅವರ ಪೋಷಕರ ರೀತಿಯ ತುಂಬಾ ಆತ್ಮೀಯರಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಒಂದು
ಕಾರ್ಯಕ್ರಮದಲ್ಲಿ ಇತ್ತೀಚಿಗೆ ಶಿವಣ್ಣ ಹಾಗೂ ಅವರ,

ಕುಟುಂಬದ ಎಲ್ಲಾ ಸದಸ್ಯರು ಭಾಗವಹಿಸಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಶಿವಣ್ಣ ಅವರ ಮಗಳು ತನ್ನ ತಂಗಿಯರು ಅಂದರೆ ಅಶ್ವಿನಿ ಅವಳ ಮಕ್ಕಳಾದ ದೃತಿ ಮತ್ತು ವಂದಿತಾ ಅವರಿಗೆ ಕಾಯುತ್ತಿದ್ದಾರೆ. ನನ್ನ ತಂಗಿಯರು ಇನ್ನು ಬಂದಿಲ್ವಾ ಎಂದು ಅವರ ತಾಯಿ ಗೀತಾ ಅವರ ಬಳಿ ಪ್ರಶ್ನಿಸಿದ್ದಾರೆ.

ಇನ್ನು ಅಕ್ಕ ತಂಗಿಯರ ಈ ಬಾಂಧವ್ಯ ಕಂಡು ನೆಟ್ಟಿಗರು ಮನ ಸೋತಿದ್ದಾರೆ. ಇವರ ಈ ಪ್ರೀತಿ ಹೀಗೆ ಇರಲಿ ಎಂದು ಆಶೀರ್ವಧಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ

Leave a Reply

Your email address will not be published. Required fields are marked *