ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ರಜನಿ ನಿಜ ಜೀವನದ ಅಸಲಿ ಕತೆ ಗೊತ್ತಿದೆಯಾ..

Uncategorized

ಬಣ್ಣದ ಲೋಕ.. ಈ ಸ್ಯಾಂಡಲ್ವುಡ್ ಆಗಿರಬಹುದು ಅಥವಾ ನಮ್ಮ ಈ ಕನ್ನಡ ಕಿರುತೆರೆ ಆಗಿರಬಹುದು.. ಇದು ಸಾಕಷ್ಟು ಜನರಿಗೆ ಜೀವನ ನೀಡಿದೆ.. ಅದರಲ್ಲೂ ಕಲಾವಿದರಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊತ್ತು ಬಂದ ಸಾಕಷ್ಟು ಮಂದಿ ಕಿರುತೆರೆಯಲ್ಲಿ ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಂಡು ಹೆಸರಿನ ಜೊತೆಗೆ ಜೀವನ ನಿರ್ವಹಣೆಗೆ ಕೊಂಚ ಹಣವನ್ನೂ ಸಹ ಮಾಡಿಕೊಳ್ಳುತ್ತಿದ್ದಾರೆ.. ಇನ್ನು ಅದೇ ರೀತಿ ಸಾಕಷ್ಟು ಕಷ್ಟಗಳನ್ನು ನೋಡಿ ಕಿರುತೆರೆಗೆ ಕಾಲಿಟ್ಟಿದ್ದವರು ನಟಿ ರಜನಿ.. ರಜನಿ ಅನ್ನೋ ಹೆಸರಿಗಿಂತ ಅಮೃತಾ ಎನ್ನುವ ಹೆಸರಿನಿಂದಲೇ ಗುರುತಿಸಿಕೊಂಡ ನಟಿ ರಜನಿ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಫೇಮಸ್ ನಟಿ..

ಹೌದು ಕನ್ನಡ ಕಿರುತೆರೆಯಲ್ಲಿ ಸಾಮಾಜಿಕ ಜಾಲತಾಣಗಳು ಅಷ್ಟಾಗಿ ಪ್ರಚಲಿತದಲ್ಲಿ ಇರದ ಸಮಯದಲ್ಲಿ ಕಿರುತೆರೆಯಲ್ಲಿ ದೊಡ್ಡ ಯಶಸ್ಸು ಪಡೆದು ಆಗಿನ ಕಾಲದಲ್ಲಿಯೇ ದಾಖಲೆಯ ಟಿ ಆರ್ ಪಿ ಪಡೆಯುತ್ತಿದ್ದ ಧಾರಾವಾಹಿ ಎಂದರೆ ಅದು ಅಮೃತ ವರ್ಷಿಣಿ.. ಅಷ್ಟೂ ದಿನಗಳ ಕಾಲ ಅತ್ತೆ ಸೊಸೆ ವೈಮನಸ್ಸಿನ ಕತೆಗಳೇ ಮೂಡಿಬರುತ್ತಿತ್ತು.. ಆದರೆ ಅದೇ ಮೊದಲ ಬಾರಿಗೆ ಸೊಸೆಯ ಮೇಲೆ ಅತಿಯಾದ ಪ್ರೀತಿ‌ ಕಾಳಜಿ ಇದ್ದ ಅತ್ತೆಯ ಕತೆ ಅಮೃತ ವರ್ಷಿಣಿಯಾಗಿತ್ತು.. ಹೇಮಾ ಚೌಧರಿ ಅವರು ಸಹ ಆ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟರು.

ಇನ್ನು ಧಾರಾವಾಹಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.. ರಾತ್ರಿ ಒಂಭತ್ತು ಮೂವತ್ತಕ್ಕೆ ಬಹುತೇಕ ಎಲ್ಲರ ಮನೆಯ ಟಿವಿಗಳಲ್ಲಿಯೂ “ಬದುಕಿನ ಭಾವ ಲಹರಿ ಈ ಅಮೃತ ವರ್ಷಿಣಿ” ಎನ್ನುವ ಧಾರಾವಾಹಿಯ ಶೀರ್ಷಿಕೆ ಹಾಡು ಕೇಳಿ ಬರುತಿತ್ತು.. ಆ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರೇ ರಜನಿ..

ಹೌದು ಜೀವನದಲ್ಲಿ ಸಾಕಷ್ಟು ನೊಂದಿದ್ದ.. ತನ್ನ ಸಂಬಂಧಿಕರಿಂದಲೇ ಬಹಳಷ್ಟು ಅವಮಾನಗಳನ್ನು ಅನುಭವಿಸಿದ್ದ ರಜನಿ ಅವರು ಆರ್ಕೆಸ್ಟ್ರಾ ದಲ್ಲಿ ಹಾಡು ಹೇಳುತ್ತಿದ್ದರು.. ಆನಂತರ ಅಮೃತವರ್ಷಿಣಿ ಧಾರಾವಾಹಿಯಲ್ಲಿ ಅವಕಾಶ ಸಿಕ್ಕು ತಮ್ಮ ನಟನೆಯ ಮೂಲಕವೇ ಜನರ ಮನಗೆದ್ದು ಮನೆಮಾತಾದರು.. ತಮ್ಮ ಆ ಯಶಸ್ಸಿನ ಬಗ್ಗೆ ಮಾತನಾಡುವಾಗ ಭಾವುಕರಾಗಿದ್ದ ರಜನಿ ನನ್ನ ಸಂಬಂಧಿಕರೆಲ್ಲಾ ನಮ್ಮನ್ನು ಒಂದು ರೀತಿ ನೋಡುತ್ತಿದ್ದರು.. ಆದರೆ ಈಗ ಓ ರಜನಿ ಬಂದಳಾ ಎಂದು ನಮಗೂ ಪ್ರಾಮುಖ್ಯತೆ ಕೊಡ್ತಾರೆ.. ಜೀವನದ ಬಹಳಷ್ಟು ಬದಲಾಗಿದೆ ಎಂದಿದ್ದರು‌..

ಇನ್ನು ಆ ಸಮಯದಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಇದ್ದಿದ್ದರೆ ಬಹುಶಃ ಆ ಧಾರಾವಾಹಿಯ ಕಲಾವಿದರುಗಳಿಗೆ ಇನ್ನೂ ದೊಡ್ಡ ಮಟ್ಟದಲ್ಲಿ ಯಶಸ್ಸು ಹಾಗೂ ಮುಂದಿನ ದಿನಗಳಲ್ಲಿ‌ ಮತ್ತಷ್ಟು ಅವಕಾಶಗಳು ಸಿಗುತಿತ್ತೋ ಏನೋ.. ಆದರೆ ಅಮೃತ ವರ್ಷಿಣಿ ನಂತರ ರಜನಿ ಅವರಿಗೆ ಮತ್ತೆ ಅಂತಹ ದೊಡ್ಡ ಅವಕಾಶಗಳೇನೂ ಸಿಗಲಿಲ್ಲ..

ಈಗ ಅಂದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಕನ್ನಡ ಕಿರುತೆರೆಯ ಮಾರ್ಕೆಟ್ ಬೆಳೆದು ನಿಂತಿದೆ.. ಕಲಾವಿದರುಗಳಿಗೆ ಹತ್ತು ಇಪ್ಪತ್ತು ಮೂವತ್ತು ಸಾವಿರದಂತೆ ದಿನವೊಂದಕ್ಕೆ ಸಂಭಾವನೆ ನೀಡಲಾಗುತ್ತಿದೆ.. ಆದರೆ ಆ ಸಮಯದಲ್ಲಿ ಕಲಾವಿದರ ಸಂಭಾವನೆಯೂ ಅಷ್ಟೇನೂ ಹೇಳಿಕೊಳ್ಳುವಂತಿರಲಿಲ್ಲ..

ಇನ್ನು ಒಂದು ಧಾರಾವಾಹಿಯಲ್ಲಿ‌ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರೆ ಮತ್ತೊಂದು ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹಳ‌ ಕಷ್ಟವೂ ಆಗಿತ್ತು.. ಜನರು ಒಂದು ಪಾತ್ರದ ಮೂಲಕ ಕಲಾವಿದರನ್ನು ಒಪ್ಪಿಕೊಂಡರೆ ಮತ್ತೊಂದು ಪಾತ್ರದಲ್ಲಿ ಅದೇ ಕಲಾವಿದರನ್ನು ನೋಡುವುದು ತುಸು ಕಷ್ಟವೇ ಆಗಿತ್ತು.. ಆ ಕಾರಣದಿಂದಲೇ ಧಾರಾವಾಹಿಯ ಮುಖ್ಯ ಪಾತ್ರಧಾರಿಗಳಿಗೆ ಒಂದು ಧಾರಾವಾಹಿ ಮುಗಿದ ನಂತರ ಮತ್ತೊಂದು ಧಾರಾವಾಹಿ ಸಿಗುವುದು ಕಷ್ಟವಾಗಿತ್ತು.. ಸಿಕ್ಕರೂ ಹಿಟ್ ಆಗುವುದು ಅಪರೂಪವಾಗಿತ್ತು..

ಅದೇ ರೀತಿ ನಟಿ ರಜನಿ ಅಮೃತವರ್ಷಿಣಿ ಧಾರಾವಾಹಿ ಮುಗಿದ ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಮತ್ತೊಂದು ಧಾರಾವಾಹಿಯಲ್ಲಿ ಕಾಣಿಸಿಕೊಂಡರೂ ಸಹ ಆ ಧಾರಾವಾಹಿ ಕೆಲವೇ ತಿಂಗಳುಗಳಲ್ಲಿ ಮುಕ್ತಾಯವಾಯಿತು..

ಇನ್ನು ಅದಾದ ಬಳಿಕ ಡ್ಯಾನ್ಸಿಂಗ್ ಸ್ಟಾರ್ ನಲ್ಲಿಯೂ ಭಾಗವಹಿಸಿದ್ದ ರಜನಿ ಬಹಳಷ್ಟು ಪರಿಶ್ರಮ ಹಾಕುತ್ತಿದ್ದದ್ದನ್ನು ಕಂಡು ಸ್ವತಃ ರವಿಚಂದ್ರನ್ ಅವರೇ ರಜನಿ ಬಗ್ಗೆ ಮೆಚ್ವುಗೆಯ ಮಾತನಾಡಿದ್ದರು..

ಇನ್ನು ರಜನಿ ಅವರ ಮೂಗು ದಪ್ಪ ಎಂದು ಕೆಲವರು ಅಂದಿದ್ದೂ ಉಂಟು.. ಅದೇ ಕಾರಣಕ್ಕೆ ರಜನಿ ಮೂಗಿನ ಸರ್ಜರಿಯನ್ನೂ ಸಹ ಮಾಡಿಸಿಕೊಂಡಿದ್ದರು.. ಇನ್ನು ಅದಾದರೂ ಸಾಕಷ್ಟು ವರ್ಷಗಳ ಕಾಲ‌ ಒಳ್ಳೆಯ ಅವಕಾಶ ಸಿಗದೇ ಬ್ರೇಕ್ ಪಡೆಯುವಂತಾಗಿತ್ತು.. ಆದರೀಗ ರಜನಿ ಪಾಲಿನ ಒಳ್ಳೆಯ ದಿನಗಳು ಆರಂಭವಾಗಿದೆ.. ಹೌದು ರಜನಿ ಅವರು ಸಧ್ಯ ಸಾಲು ಸಾಲು ಸಿನಿಮಾ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಈಗಾಗಲೇ ಸಾಕಷ್ಟು ಫೇಮಸ್ ಆಗಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರ ಪಾತ್ರ ಮಾಡುತ್ತಿರುವ ನಟಿ ರಜನಿ ಅವರು ಸುವರ್ಣ ವಾಹಿನಿಯಲ್ಲಿ ಹೊಸದೊಂದು ಧಾರಾವಾಹಿಗೆ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..

ಅಷ್ಟೇ ಅಲ್ಲದೇ ರಜಿನಿ ಅವರು ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು ಈ ಮೂಲಕ ಸ್ಯಾಂಡಲ್ವುಡ್ ಗೂ ಎಂಟ್ರಿ ನೀಡುತ್ತಿದ್ದಾರೆ.. ಇನ್ನು ಇತ್ತ ಕನ್ನಡದಲ್ಲಿ ಇತ್ತೀಚಿಗೆ ಸದ್ದು ಮಾಡುತ್ತಿರುವ ವೆಬ್ ಸೀರಿಸ್ ಗಳ ಪೈಕಿ ಡವ್ ಮಂಜ ಎನ್ನುವ ವೆಬ್ ಸೀರಿಸ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ರಜನಿ ಬಿಗ್ ಬಾಸ್ ಮಂಜು ಪಾವಗಡ ಅವರಿಗೆ ಜೋಡಿಯಾಗಿದ್ದಾರೆ..

ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಕಿರುತೆರೆಯಲ್ಲಿ ಬದುಕು ಕಟ್ಟಿಕೊಂಡು ಮತ್ತೆ ಅವಕಾಶಗಳಿಲ್ಲದೇ ಸಾಕಷ್ಟು ವರ್ಷಗಳ ಕಾಲ ಬ್ರೇಕ್ ಪಡೆದು ಇದೀಗ ಮತ್ತೊಮ್ಮೆ ಎರಡನೇ ಬಾರಿಗೆ ಕಂಬ್ಯಾಕ್ ಮಾಡಿರುವ ರಜನಿ ಅವರ ವೃತ್ತಿ ಬದುಕಿಗೆ ಶುಭವಾಗಲಿ.. ಮತ್ತಷ್ಟು ದೊಡ್ಡ ದೊಡ್ಡ ಯಶಸ್ಸು ಅವರ ಪಾಲಿಗಿರಲಿ‌..

Leave a Reply

Your email address will not be published. Required fields are marked *