ನಾಗಿಣಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ದೀಪಿಕಾ ದಾಸ್ ಅವರು ಚಿರತೆಯ ಜೊತೆಗೆ ಹಲವು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇನ್ನು ನಟಿ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಕೂಡ ಆಗಿದ್ದರು. ಅಲ್ಲದೆ ಇದೀಗ ಬಿಗ್ ಬಾಸ್ ಸೀಸನ್ ೯ಕ್ಕೆ ಕೂಡ ಸ್ಪರ್ಧಿ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಕಳೆದ ರೀತಿಯ ಈ ಬಾರಿಯೂ ಕೂಡ ಉತ್ತಮವಾಗಿ ಆಟವಾಡಿ ಒಳ್ಳೆಯ ಪ್ರಶಂಸೆ ಪಡೆದುಕೊಳ್ಳುತ್ತಿದ್ದಾರೆ. ಆನ್ ಸ್ಕ್ರೀನ್ ದೀಪಿಕಾ ದಾಸ್ ಒಳ್ಳೆಯ ನಟಿ ಎಂಬುದು ಎಲ್ಲರಿಗೂ ಗೊತ್ತು ಆದರೆ ನಟಿ ದೀಪಿಕಾ ದಾಸ್ ನಿಜ ಜೀವನದಲ್ಲಿ ಹೇಗಿದ್ದಾರೆ ಎಂಬುದನ್ನು ಇಂದು ತಿಳಿಸುತ್ತೇವೆ ಬನ್ನಿ..
ನಟಿ ದೀಪಿಕಾ ದಾಸ್ ಅವರನ್ನು ಅವರ ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ದೀಪು ಎಂದು ಕರೆಯುತ್ತಾರೆ. ನಟಿ ದೀಪಿಕಾ ದಾಸ್ ಜೀ ಕನ್ನಡ ವಾಹಿಯ ಪ್ರಮುಖ ದಾರವಾಹಿಗಳಲ್ಲಿ ಒಂದಾಗಿದ್ದ ನಾಗಿಣಿ ಧಾರಾವಾಹಿಯಲ್ಲಿ ನಾಗಿಣಿ ಪಾತ್ರದಲ್ಲಿ ಮಿಂಚಿದ್ದರು. ಇನ್ನು ನಾಗಿಣಿ ಧಾರಾವಾಹಿ ದೀಪಿಕಾ ದಾಸ್ ಅವರ ಮೊದಲ ಧಾರವಾಹಿಯಾಗಿತ್ತು.
ನಾಗಿಣಿ ಪಾತ್ರದಲ್ಲಿ ಉತ್ತಮವಾಗಿ ಮಿಂಚಿದ ನಟಿ ದೀಪಿಕಾ ದಾಸ್ ಅವರಿಗೆ ಹಲವು ಸಿನಿಮಾಗಳ ಆಫರ್ ಗಳು ಕೂಡ ಒದಗಿ ಬಂತು ಆದರೆ ನಟಿ ದೀಪಿಕಾ ದಾಸ್ ಕೇವಲ ಒಂದೆರಡು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಹೌದು ನಟಿ ದೀಪಿಕಾ ದಾಸ್ ದೂದ್ ಸಾಗರ್ ಹಾಗೂ ಈ ಮನಸೇ ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ನಟಿ ದೀಪಿಕಾ ದಾಸ್ ಅವರ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ನಟಿ ದೀಪಿಕಾ ದಾಸ್ ಅವರ ತಂದೆ ಕಿಶೋರ್ ದಾಸ್ ಹಾಗೂ ಅವರ ತಾಯಿ ಪದ್ಮಲತಾ ಹಾಗೂ ನಟಿ ದೀಪಿಕಾ ದಾಸ್ ಅವರಿಗೆ ಒಬ್ಬ ಸಹೋದರ ಕೂಡ ಇದ್ದು ಅವರ ಹೆಸರು ದಿಲೀಪ್ ಗೌಡ.
ಇನ್ನು ನಟಿ ದೀಪಿಕಾ ದಾಸ್ ಅವರು ಮೂಲತಃ ಬೆಂಗಳೂರಿನವರು ಹಾಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ತಮ್ಮ ಫ್ಯಾಶನ್ ಡಿಸೈನಿಂಗ್ ಪದವಿ ಪೂರ್ಣಗೊಳಿಸಿದ್ದಾರೆ. ಇನ್ನು ನಟಿ ದೀಪಿಕಾ ದಾಸ್ ಸದ್ಯ ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಯಾಗಿದ್ದು,
ಒಂದು ವಾರಕ್ಕೆ ನಟಿ ದೀಪಿಕಾ ದಾಸ್ 2.5 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಟಿ ಈ ಬಾರಿ ಕೂಡ ತಮ್ಮ ಉತ್ತಮ ಆಟದ ಮೂಲಕ ಪ್ರೇಕ್ಷಕರ ಮನ ಗೆಲ್ಲಿವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..