ನಟ ದರ್ಶನ್ ಅಭಿಮಾನಿ ಬಳಗ ಹೇಗಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಇದೀಗ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಯಾವುದೇ ಸಿನಿಮಾ ಬಿಡುಗಡೆಗು ಮುನ್ನ ಆ ಸಿನಿಮಾ ತಂಡದವರು ಸಿನಿಮಾದ ಪ್ರಚಾರ ಕೆಲಸಗಳನ್ನು ಶುರು ಮಾಡಿಕೊಳ್ಳುತ್ತಾರೆ.
ಆದರೆ ದರ್ಶನ್ ಅವರನ್ನು ಎಲ್ಲ ಮಾಧ್ಯಮಗಳು ಬ್ಯಾನ್ ಮಾಡಿರುವ ಕಾರಣ, ಈ ಬಾರಿ ಅವರ ಪ್ರಾಂತಿ ಸಿನಿಮಾ ಪ್ರಚಾರ ಯಾವುದೇ ಟಿವಿ ಮಾಧ್ಯಮಗಳಲ್ಲಿ ನಡೆಯುತ್ತಿಲ್ಲ. ಆದರೆ ಇದೀಗ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸಗಳನ್ನು ಶುರು ಮಾಡಲು ನಿರ್ಧರಿಸಿದ್ದಾರೆ.
ಹೌದು ಈ ಬಾರಿ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸಗಳನ್ನು ಅಭಿಮಾನಿಗಳ ಜೋಡಿಗೆಗೆ ಹಾಕಿದ್ದಾರೆ ಹಾಗೆ ಈ ಬಾರಿ ಎಲ್ಲಾ ಯೂಟ್ಯೂಬ್ ಮಾಧ್ಯಮಗಳಿಗೆ ನಟ ದರ್ಶನ್ ಕ್ರಾಂತಿ ಸಿನಿಮಾದ ಕುರಿತು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇನ್ನು ಇದೀಗ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು,
ಸಿನಿಮಾದ ಪ್ರಚಾರ ಕೆಲಸ ಶುರುಮಾಡುವ ಮುನ್ನ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಲು ಬಂದಿದ್ದಾರೆ. ಇನ್ನು ಇಂದಿನಿಂದ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸಗಳು ಕೂಡ ಶುರುವಾಗಲಿದ್ದು ಈ ಬಗ್ಗೆ ಮಾತನಾಡಿರುವ ದರ್ಶನ್,
ಕ್ರಾಂತಿ ಸಿನಿಮಾ ಅಭಿಮಾನಿಗಳಿಗೆ ಸೇರಿದ್ದು ಈ ಸಿನಿಮಾವನ್ನು ಗೆಲ್ಲಿಸುವುದು ಎರಡು ಅವರ ಕೈಯಲ್ಲಿದೆ ಅಭಿಮಾನಿಗಳು ಸದಾ ನನ್ನ ಜೊತೆ ನಿಂತಿದ್ದಾರೆ. ಈ ಬಾರಿಯೂ ಕೂಡ ನಿಲ್ಲುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ ದರ್ಶನ್. ಸದ್ಯ ಅಭಿಮಾನಿಗಳೇ ಈ ಸಿನಿಮಾದ ಪ್ರಚಾರವನ್ನು,
ಸೋಶಿಯಲ್ ಮೀಡಿಯಾದಲ್ಲಿ ನಡೆಸುತ್ತಿದ್ದಾರೆ. ಇನ್ನು ಕ್ರಾಂತಿ ಸಿನಿಮಾ ದರ್ಶನ್ ಅವರ ಮೊದಲ ಪಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದ ಸುದ್ದಿ ಕೇಳಿ ಬರುತ್ತಿದ್ದಂತೆ, ಈ ಬಗ್ಗೆ ಎಲ್ಲರೂ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆ ಹೊಂದಿದ್ದಾರೆ. ಇನ್ನು ದರ್ಶನ್ ಅವರ ಕ್ರಾಂತಿ ಸಿನಿಮಾ ಇದೇ,
ಜನವರಿ 26ರಂದು ಹಿನ್ನೆಲೆ ಬಿಡುಗಡೆಯಾಗುತ್ತಿದ್ದು ಈ ಸಿನಿಮಾ ಅಭಿಮಾನಿಗಳ ನಿರೀಕ್ಷೆಮಟ್ಟವನ್ನು ತಲುಪುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ