ಕಾರ್ಯಕ್ರಮದಲ್ಲಿ ಯಶ್ ಮತ್ತು ದರ್ಶನ ಅವರನ್ನು ಹೊಗಳಿದ ಸುಮಾಲತಾ ಅಂಬರೀಶ್ ನೋಡಿ ವಿಡಿಯೋ…!!!!

ಸ್ಯಾಂಡಲವುಡ್

ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಸಹ ಅದ್ಭುತವಾಗಿ ನಟಿಸಿ ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಬಹುಬೇಡಿಕೆಯ ನಟಿ ಸುಮಲತಾ ಅಂಬರೀಶ್. ನಟಿ ಸುಮಲತಾ ಅಂಬರೀಶ್ ಸಿನಿಮಾರಂಗದ ಜೊತೆಗೆ ರಾಜಕೀಯದಲ್ಲೂ ಸಹ ಸಕ್ರಿಯರಾಗಿದ್ದಾರೆ.

ನಟ ಅಂಬರೀಶ್ ಅವರು ಸಹ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದವರು ಅವರ ನಂತರ ಇದೀಗ ಆಸ್ಥಾನವನ್ನು ಅವರ ಪತಿ ಸುಮಲತಾ ಅವರು ತುಂಬಿದ್ದಾರೆ. ಮಂಡ್ಯ ಕ್ಷೇತ್ರಕ್ಕೆ ಸಂಸದೆಯಾಗಿ ನಟಿ ಸುಮಲತಾ ಅಂಬರೀಶ್ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನು ನಟಿ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಯಾರು ಕಾರಣ ಎಂಬುದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಡಿ ಬಾಸ್ ದರ್ಶನ್ ಹಾಗೂ ಯಶ್ ನಟಿ ಸುಮಲತಾ ಅವರ ಬೆನ್ನೆಲುಬಾಗಿ ನಿಂತಿದ್ದರು. ಅಲ್ಲದೆ ಎಲ್ಲಾ ಪ್ರಚಾರ ಸಮಯದಲ್ಲಿ ಸುಮಲತಾ ಜೊತೆಗೆ ಇದ್ದು ಸಾಕಷ್ಟು ಸಹಾಯ ಮಾಡಿದರು.

ಇಂದಿಗೂ ಸಹ ಯಶ್ ಹಾಗೂ ಡಿ ಬಾಸ್ ದರ್ಶನ್ ಅವರು ಸುಮಲತಾ ಅವರ ಜೊತೆಗೆ ನಿಂತಿದ್ದಾರೆ. ಸುಮಲತಾ ಅವರ ಒಂದು ಮಾತಿನಿಂದ ಡಿ ಬಾಸ್ ದರ್ಶನ್ ಹಾಗೂ ಓಡೋಡಿ ಬರುತ್ತಾರೆ. ಇದೀಗ ಸುಮಲತಾ ಅವರು ಯಶ್ ಹಾಗೂ ದರ್ಶನ್ ಬಗ್ಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದಾರೆ.

ಯಶ್ ಹಾಗೂ ದರ್ಶನ್ ಬಗ್ಗೆ ನಟಿ ಸುಮಲತಾ ಅವರು ಹೇಳಿರುವ ಮಾತುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ನಟಿ ಅಷ್ಟಕ್ಕೂ ಹೇಳಿದ್ದೇನು ಎನ್ನುವುದನ್ನು ತಿಳಿಸುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ..

ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ನಟಿ ಸುಮಲತಾ ಹಾಗೂ ದರ್ಶನ್ ಅವರು ಸಹ ಭಾಗಿಯಾಗಿದ್ದರು. ಈ ವೇಳೆ ವೇದಿಕೆ ಮೇಲೆ ಸುಮಲತಾ ಅವರು ನಾನು ಇಂದು ಈ ಸ್ಥಾನದಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ಯಾರು ಎಂಬುದು ನಿಮ್ಮೆಲ್ಲರಿಗೂ ಗೊತ್ತು.

ದರ್ಶನ್ ಹಾಗೂ ಯಶ್ ಇಬ್ಬರು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಚಿತ್ರರಂಗದವರು ಅಷ್ಟು ಸುಲಭವಾಗಿ ತಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಆದರೂ ಸಹ ಇವರಿಬ್ಬರು ಯಾವುದೇ ಸಂಶಯವಿಲ್ಲದೆ ತುಂಬು ಮನಸ್ಸಿನಿಂದ ನನ್ನ ಜೊತೆ ನಿಂತಿದ್ದರು ಎಂದಿದ್ದಾರೆ ನಟಿ ಸುಮಲತಾ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *