ಕನ್ನಡ ಕಿರುತೆರೆಯ ಸೂಪರ್ ಹಿಟ್ ಸೀರಿಯಲ್ ಶನಿ ನಾಗಿಣಿ ಮಹಾಕಾಳಿ ಧಾರವಾಹಿಯಲ್ಲಿ ಶಿವನ ಪಾತ್ರದಲ್ಲಿ ಮಿಂಚಿದ ನಟ ಅರ್ಜುನ್ ರಮೇಶ್. ಇನ್ನೂ ಕಳೆದ ಕೆಲವು ತಿಂಗಳ ಹಿಂದೆ ಬಿಗ್ ಬಾಸ್ ಓ ಟಿ ಟಿ ಸಹ ಕಾಲಿಟ್ಟಿದ್ದರು. ಇನ್ನು ಈ ಮೂಲಕ ನಟ ಸಾಕಷ್ಟು ಜನಪಿರ್ಯತೆ ಪಡೆದುಕೊಂಡಿದ್ದಾರೆ.
ಅರ್ಜುನ್ ರಮೇಶ್ ಅವರಿಗೆ ಇಬ್ಬರು ಹೆಂಡತಿಯರು ಎನ್ನುವ ವಿಷಯ ಬಿಗ್ ಬಾಸ್ ಓಟಿಟಿ ಮೂಲಕ ಎಲ್ಲರಿಗೂ ತಿಳಿಯಿತು.ಅರ್ಜುನ್ ರಮೇಶ್ ಅವರು ಇಬ್ಬರನ್ನ ಮದುವೆಯಾಗಿರೋದು ಕೆಲವರಿಗೆ ಗೊತ್ತು, ಆದರೆ ಇನ್ನೂ ಕೆಲವರಿಗೆ ಅರ್ಜುನ್ ಎರಡು ಮದುವೆಯಾದ ವಿಚಾರ ತಿಳಿದಿಲ್ಲ.
ಇನ್ನು ಇತ್ತಿಚೆಗೆ ಅರ್ಜುನ್ ರಮೇಶ್ ಅವರ ಮಗಳ ಬರ್ತಡೇಯ ವಿಡಿಯೋ ವೈರಲ್ ಆಗಿತ್ತು. ಇನ್ನು ಈ ವಿಡಿಯೋ ನೋಡಿ ಅರ್ಜುನ್ ಗೆ ಇಬ್ಬರು ಪತ್ನಿಯರ ಎಂಬ ಬಗ್ಗೆ ಸಾಕಷ್ಟು ಜನ ಪ್ರಶ್ನೆ ಕೇಳಿದ್ದಾರೆ. ಮೊದಲನೆಯದಾಗಿ ಅರ್ಜುನ್ ಮದುವೆಯಾಗಿರುವ ಇಬ್ಬರು ಪತ್ನಿಯರು ಕೂಡ ತುಂಬಾನೇ ಕ್ಯೂಟ್.
ಮೊದಲನೇ ಪತ್ನಿ ಮಿ-ಲನ್ ಎರಡನೆಯವರು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಖ್ಯಾತಿಯ ರವಿಕಾ. ಅವರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಕೆಲವೊಂದು ವಿಚಾರವನ್ನ ಹಂಚಿಕೊಂಡಿದ್ದಾರೆ. ನಾನು ತುಂಬಾ ಜನರ ಜೊತೆ ರಿಲೇಷನ್ಶಿಪ್ ನಲ್ಲಿದೆ ಮಿಲನ್ ನನ್ನ ಮೊದಲ ಪತ್ನಿ ನಾನು ಮಿಲನ್ ನನ್ನು ಮದುವೆಯಾಗಿದ್ದಾಗಲೇ ರವಿಕಾ ಜೊತೆ ಪ್ರೀತಿಯಲ್ಲಿದೆ.
ಈ ವಿಚಾರ ಮಿಲನ್ ಗೆ ಗೊತ್ತಾದರೆ ಎಂಬ ಭಯ ನನಗೆ ಸದಾ ಇತ್ತು. ರವಿಕಾ ವಿಷಯವನ್ನು ಸುಮಾರು ಐದು ವರ್ಷಗಳ ಕಾಲ ಹೊರ ಜಗತ್ತಿನಿಂದ ಬಚ್ಚಿಟ್ಟೆ. ನಿಮ್ಮ ಜೀವನದ ಅರ್ಥ ಏನು ಅಂತ ಒಂದು ಬಾರಿ ರವಿಕ ಪಾಲಕರು ಕೇಳಿ ಬಿಟ್ಟಿದ್ದರು. ಇನ್ನು ಜನರಿಗೆ ಈ ಬಗ್ಗೆ ನಾನು ಸ್ಪಷ್ಟನೆ ಕೊಡಲು ಹೋಗುವುದಿಲ್ಲ, ಏಕೆಂದರೆ ಇದು ನನ್ನ ಸಂಸಾರ ಏನೇ ಮಾಡಿದರು ಅದನ್ನು ನಾನು ಎದುರಿಸಬೇಕು.
ನಾನು ತುಂಬಾನೇ ಎಮೋಷನಲ್, ಜೀವನದಲ್ಲಿ ನಾನು ಅಂದುಕೊಂಡಿರುವುದನ್ನ ಎಲ್ಲಾ ಮಾಡಿಕೊಂಡು ನಡೆಸಿಕೊಂಡು ಬಂದೆ. ಅದಕ್ಕೆ ಕಾರಣ ನನ್ನ ತಂದೆ, ಗಾರೆ ಕೆಲಸ ಮಾಡಿರುವವರ ಮಗ ನಾನು. ಅವರು ಕೂಡ ಎಲ್ಲಾ ಕಷ್ಟಗಳನ್ನು ಸುಖಗಳನ್ನ ನೋಡಿಕೊಂಡು ಬಂದಿದ್ದಾರೆ. ಕಷ್ಟಪಟ್ಟು ಜೀವನದಲ್ಲಿ ಈ ಸ್ಥಾನಕ್ಕೆ ಬಂದಿದ್ದಾರೆ ಎಂದು ಮಾತನಾಡಿದ್ದಾರೆ.
ಇನ್ನು ತಂದೆ ತಾಯಿಗೆ ಬೇಸರ ಮಾಡಿರೋದು, ನನ್ನ ಮದುವೆ ವಿಚಾರದಲ್ಲಿ ಮಾತ್ರ ನಾನು ಅವರಿಗೆ ಈ ವೇದಿಕೆ ಮೂಲಕ ಕ್ಷಮೆ ಕೇಳ್ತೀನಿ. ಇನ್ನು ಮಿಲನ್ ಗೂ ಕೂಡ ನಾನು ಕ್ಷಮೆ ಕೇಳಬೇಕು. ಮಿಲನ್ ನಾನು ರಮಿಕಾ ಹಾಗೂ ನನ್ನ ಪರವಾಗಿ ನಿಮ್ಮ ಕಾಲಿಗೆ ನಮಸ್ಕಾರ ಮಾಡಿ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ.
ಎಲ್ಲವೂ ಬಿಟ್ಟು ನನ್ನನ್ನ ನಂಬಿ ನೀನು ಬಂದಿದ್ದೆ. ನೀನು ಎಂಥ ನಿರ್ಧಾರ ತೆಗೆದುಕೊಂಡಿದ್ದೀಯಾ ಅಂದ್ರೆ ನೀನು ದೇವರು ನಾನು ದೇವರ ಪೂಜೆಯನ್ನು ಮಾಡ್ತೀನಿ ಆದರೆ ನೀನು ದೇವರಂತೆ ನಡೆದುಕೊಂಡೆ. ನನ್ನ ಜೀವನಕ್ಕೆ ದೇವರು ನೀನು ನಿನ್ನ ಕೈಯಲ್ಲಿ ಎಲ್ಲವೂ ಇತ್ತು, ಒಂದು ಕ್ಷಣ ಸಾಕು ಇನ್ನೊಂದು ಹೆಣ್ಣು ಮತ್ತು ಆ ಮಗುವಿನ ಜೀವನವನ್ನು ಹಾಳು ಮಾಡುವುದಕ್ಕೆ ಕೇಸ್ ಹಾಕ ಬಹುದಿತ್ತು. ಆದರೆ ನೀನು ಆ ದಾರಿ ಹಿಡಿದಿಲ್ಲ ನನ್ನ ತಂದೆ ತಾಯಿಗೆ ನೀನು ಮಗಳಾಗಿರುವೆ. ನನ್ನ ಜೀವನಕ್ಕೆ ನೀನು ದೇವರು ಎಂದಿದ್ದಾರೆ.
ರಮಿಕಾ ನೀನು ಕೂಡ ನನ್ನ ಕೋಪವನ್ನು ತಡೆದುಕೊಂಡು ನನ್ನ ಜೊತೆ ಜೀವನ ಮಾಡ್ತಾ ಇರುವೆ. ಎಷ್ಟೋ ಕಡೆ ನೀನು ಮಿಲನ್ ಕೇಳು ಆಕೆ ಬೇಸರ ಮಾಡಿಕೊಳ್ಳುತ್ತಾಳೆ ಆಕೆ ಹೇಳಿದಂತೆ ಮಾಡುವಂತೆ ಹೇಳುತ್ತಿಯಾ. ನಿನ್ನ ಆ ಸ್ವಭಾವ ನನಗೆ ತುಂಬಾ ಇಷ್ಟ ಹೀಗಾಗಿ ನನ್ನ ಕೊನೆ ಉಸಿರು ಇರುವವರೆಗೂ ನಿಮ್ಮಿಬ್ಬರಿಗೂ ಯಾರು ಕೂಡ ಬೆರಳು ತೋರಿಸಿ ಮಾತನಾಡಬಾರದು ಆ ರೀತಿ ನೋಡಿಕೊಳ್ಳುತ್ತೇನೆ ಎಂದಿದ್ದಾರೆ