ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ನಟಿ ಅಮೂಲ್ಯ ತಮ್ಮ ಅದ್ಭುತ ನಟನೆ ಹಾಗೂ ಗ್ಲಾಮರ್ ನ ಮೂಲಕ ನಟಿ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದಾರೆ. ಸದ್ಯ ನಟಿ ಅಮೂಲ್ಯ ಬಣ್ಣದ ಲೋಕದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
ಸದ್ಯ ನಟಿ ಅಮೂಲ್ಯ ಮದುವೆ ಮಕ್ಕಳು ಸಂಸಾರ ಎಂದು ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ಬಿಸಿಯಾಗಿದ್ದಾರೆ. ನಟಿ ಅಮೂಲ್ಯ ಅವರನ್ನು ಮತ್ತೆ ತೆರೆ ಮೇಲೆ ನೋಡಿ ಕಣ್ಣು ತುಂಬಿಕೊಳ್ಳಬೇಕು ಎಂದು ಅವರ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ನಟಿ ಅಮೂಲ್ಯ ಉದ್ಯಮಿ ಜಗದೀಶ್ ಅವರನ್ನು ಮದುವೆಯಾದ ನಂತರ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಇನ್ನು ಇತ್ತೀಚಿಗೆ ನಟಿ ಅಮೂಲ್ಯ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು ನಟಿ ಅಮೂಲ್ಯ ಇಬ್ಬರು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು.
ನಟಿ ಅಮೂಲ್ಯ ಇತ್ತೀಚಿಗೆ ತನ್ನ ಇಬ್ಬರು ಗಂಡು ಮಕ್ಕಳ ಮುಖವನ್ನು ಅಭಿಮಾನಿಗಳ ಮುಂದೆ ಸೋಶಿಯಲ್ ಮೀಡಿಯಾದ ಮುಖಾಂತರ ಅನಾವರಣ ಮಾಡಿದ್ದರು. ಇನ್ನು ಈ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಈ ಫೋಟೋಗಳಿಗೆ ಲಕ್ಷಗಳಲ್ಲಿ ಲೈಕ್ಸ್ ಹಾಗೂ ಕಾಮೆಂಟ್ಸ್ ಗಳು ಬರುತ್ತಿರುತ್ತದೆ.
ಇತ್ತೀಚೆಗೆ ನಟಿ ಅಮೂಲ್ಯ ಇಬ್ಬರು ಗಂಡು ಮಕ್ಕಳಿಗೆ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ಮಾಡಿದ್ದರು ಇನ್ನು ಈ ನಾಮಕರಣ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಅನೇಕ ತಾರಾ ಭಾಗಿಯಾಗಿದ್ದರು. ಇನ್ನು ನಟಿ ಅಮೂಲ್ಯ ಅವರ ಮಕ್ಕಳ ನಾಮಕರಣ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿತ್ತು.
ಅಮೂಲ್ಯ ತಮ್ಮ ಮಕ್ಕಳಿಗೆ ಅಥರ್ವ ಹಾಗೂ ಆಧವ್ ಎಂಬ ಹೆಸರಿಟ್ಟಿದ್ದಾರೆ. ಇನ್ನು ಇದೀಗ ಅಮೂಲ್ಯ ದಂಪತಿ ತಮ್ಮ ಮಕ್ಕಳ ಜೊತೆಗೆ ತಿರುಪತಿಗೆ ಹೋಗಿ ದೇವರ ದರ್ಶನ ಪಡೆದು ತಮ್ಮ ಮಕ್ಕಳಿಗೆ ಮುಡಿ ಕೊಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಇನ್ನು ಅಭಿಮಾನಿಗಳು ಈ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಸ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…