ಫೋನ್ ನಲ್ಲಿ ಸ್ನೇಹಿತನಿಗೆ ಅವಾಜ್ ಹಾಕಿದ ನಟಿ ನಯನಾ! ಕಾಲ್ ರೆಕಾರ್ಡ್ ಕೇಳಿ ಶಾಕ್ ಆದ ನೆಟ್ಟಿಗರು!… ನೋಡಿ

curious

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು, ಇನ್ನು ಈ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೊದಲ ಸೀಸನ್ ನಲ್ಲಿ ತನ್ನ ಅದ್ಭುತ ಅಭಿನಯ ಹಾಗೂ ತನ್ನ ಕಾಮಿಡಿ ಡೈಲಾಗ್ ಗಳ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಸ್ಪರ್ಧಿ ನಯನಾ.

ಕಾಮಿಡಿ ಕಿಲಾಡಿಗಳು ಮುಗಿದ ನಂತರ ನಯನಾ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹಾಸ್ಯ ನಟಿಯಾಗಿ ನಟಿಸಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅಲ್ಲದೆ ನಟಿ ನಯನಾ ಹಲವಾರು ಸಿನಿಮಾಗಳಲ್ಲಿ ನಟಿಸಿ ಕಿರುತೆರೆಯ ಜೊತೆಗೆ ಸಿನಿಮಾರಂಗದಲ್ಲಿ ಸಹ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದಾರೆ.

ಅದೆಷ್ಟೋ ಸಿನಿಮಾಗಳಲ್ಲಿ ನಟಿ ನಯನಾ ಅದ್ಭುತವಾಗಿ ಹಾಸ್ಯ ಕಲಾವಿದೆ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ದಿನಗಳು ಕಳೆದಂತೆ ನಟಿ ನಯನಾ ಅವರಿಗೆ ಸಿನಿಮಾಗಳ ಅವಕಾಶ ದೂರವಾಯಿತು. ಆಗ ನಟಿ ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ಜೀ ಕನ್ನಡ, ಸ್ಟಾರ್ ಸುವರ್ಣ ಹಾಗೆ ಕಲರ್ಸ್ ಕನ್ನಡ ವಾಹಿನಿಗಳ ಕಾರ್ಯ್ರಮಗಳಲ್ಲಿ ಭಾಗವಹಿಸಿದ್ದರು.

ಕಾಮಿಡಿ ಗ್ಯಾಂಗ್, ಕಾಮಿಡಿ ಕಿಲಾಡಿಗಳು, ಮಜಾ ಭಾರತ, ಕುಕ್ಕು ವಿತ್ ಕಿರುಕ್ಕು ಸೆರಿದಂತೆ ಹಲವಾರು ಕಾರ್ಯಕ್ರಗಳಲ್ಲಿ ನಟಿ ನಯನಾ ಭಾಗಿಯಾಗಿದ್ದರು. ಈ ಮೂಲಕ ನಯನಾ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಅಲ್ಲದೆ ನಟಿ ನಯನಾ ಇದೀಗ ಬಾರಿ ಚರ್ಚೆಗೆ ಗುರಿಯಾಗಿದ್ದಾರೆ.

ಕಾಮಿಡಿ ಗ್ಯಾಂಗ್ ಕಾರ್ಯಕ್ರಮದಲ್ಲಿ ನಯನಾ ಜೊತೆಗಿದ್ದ ಸೋಮಶೇಖರ್ ಎಂಬುವವರು ಇದೀಗ ನಯನಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟಿ ನಯನ ತನಗೆ ಬೆದ-ರಿಕೆ ಹಾಕಿರುವದಾಗಿ ಪೊಲೀಸ್ ಠಾಣೆಯಲ್ಲಿ ಕಾಲ್ ರೆಕಾರ್ಡಿಂಗ್ ಕೇಳಿಸಿ ದೂರು ದಾಖಲಿಸಿದ್ದಾರೆ ಸೋಮಶೇಖರ್.

ಸೋಮಶೇಖರ್ ಹಾಗೂ ನಯನ ಕಾಮಿಡಿ ಗ್ಯಾಂಗ್ ಕಾರ್ಯಕ್ರಮದಲ್ಲಿ ಒಂದೇ ಟೀಮ್ ನಲ್ಲಿ ಇದ್ದರು. ಇದೀಗ ಹಣದ ವಿಚಾರವಾಗಿ ನಯನ ಅವರು ಸೋಮಶೇಖರ್ ಅವರಿಗೆ ಕರೆ ಮಾಡಿ ಬೆದ-ರಿಕೆ ಹಾಕಿದ್ದಾರೆ. ಸದ್ಯ ಈ ಕಾಲ್ ರೆಕಾರ್ಡಿಂಗ್ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಸಹ ಶುರುವಾಗಿದೆ.

ನಟಿ ನಯನ ಅವರ ಈ ರೀತಿಯ ವರ್ತನೆ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಹಣದ ವಿಚಾರವನ್ನು ಬೇರೆ ರೀತಿ ಸರಿ ಮಾಡಿಕೊಳ್ಳಬಹುದಿತ್ತು, ನಟಿ ಮಾಡಿರುವುದು ತಪ್ಪು ಎಂದು ಕೆಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *