ದೇವರ ವರ ಪಡೆದ ಡಿ ಬಾಸ್ ದರ್ಶನ್ ನಂತರ ಆಗಿದ್ದೇನು ನೀವೇ ನೋಡಿ!…

ಸ್ಯಾಂಡಲವುಡ್

ಕನ್ನಡ ಸಿನಿಮಾರಂಗದ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ, ಡಿ ಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾ ಅವರ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಸಾಕಷ್ಟು ದಿನಗಳಿಂದ ತುದಿಗಾಲಿನಲ್ಲಿ ಕಾತುರರಾಗಿ ಕಾಯುತ್ತಿದ್ದಾರೆ.

ಸದ್ಯ ನಟ ದರ್ಶನ್ ಅವರ ಕ್ರಾಂತಿ ಸಿನಿಮಾ ದರ್ಶನ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದ ಬಿಡುಗಡೆ ದಿನವನ್ನು ಸಹಜವಾಗಿಯೇ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಿಸಲು ಕಾಯುತ್ತಿದ್ದಾರೆ. ಅಲ್ಲದೆ ಈ ಸಿನಿಮಾಗಾಗಿ ದರ್ಶನ್ ಅಭಿಮಾನಿಗಳು ಸಾಕಷ್ಟು ಕಾದಿದ್ದಾರೆ.

ಇನ್ನು ಡಿ ಬಾಸ್ ದರ್ಶನ್ ಅವರ ಸಿನಿಮಾ ಸಾಮಾನ್ಯವಾಗಿ ಬಿಡುಗಡೆಯಾದರೆ ಬಾಕ್ಸ್ ಆಫಿಸ್ ನಲ್ಲಿ ದಾಖಲೆ ಬರೆಯದೆ ಹೋಗುವುದಿಲ್ಲ. ಬಾಕ್ಸ್ ಆಫಿಸ್ ಲೂಟಿ ಮಾಡುವುದರಲ್ಲಿ ದರ್ಶನ್ ಅವರ ಸಿನಿಮಾಗಳು ಎತ್ತಿದ ಕೈ. ಇನ್ನು ಇದೀಗ ದರ್ಶನ್ ಅವರ ಕ್ರಾಂತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.

ಈ ಸಿನಿಮಾ ಯಾವ ರೀತಿ ಮೋಡಿ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ದರ್ಶನ್ ಅವರ ಜೊತೆಗೆ ಕ್ರಾಂತಿ ಸಿನಿಮಾದಲ್ಲಿ ನಾಯಕಿಯಾಗಿ ನಟಿ ರಚಿತಾ ರಾಮ್ ನಟಿಸಿದ್ದು, ಮತ್ತೊಮ್ಮೆ ತೆರೆ ಮೇಲೆ ಈ ಜೋಡಿಯನ್ನು ನೋಡಿ ಕಣ್ತುಂಬಿ ಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಬುಲ್ ಬುಲ್ ಸಿನಿಮಾದ ನಂತರ 10 ವರ್ಷಗಳ ನಂತರ ದರ್ಶನ್ ಹಾಗೂ ರಚಿತಾ ರಾಮ್ ಒಟ್ಟಾಗಿ ನಟಿಸುತ್ತಿದ್ದಾರೆ. ಸದ್ಯ ವರ್ಷಗಳ ನಂತರ ಅಭಿಮಾನಿಗಳಿಗೆ ಈ ಜೋಡಿಯ ಕೆಮಿಸ್ಟ್ರಿ ನೋಡುವ ಅವಕಾಶ ಸಿಕ್ಕಿದೆ. ಇನ್ನು ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.

ಇನ್ನು ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸವನ್ನು ಅವರ ಅಭಿಮಾನಿಗಳೇ ಮಾಡುತ್ತಿದ್ದಾರೆ. ಇನ್ನು ಇದೀಗ ದರ್ಶನ್ ಅವರು ಕ್ರಾಂತಿ ಸಿನಿಮಾ ತಂಡದವರ ಜೊತೆಗೆ ಇದೀಗ ಸಿನಿಮಾದ ಸಕ್ಸಸ್ ಗಾಗಿ ದೇವಸ್ಥಾನಕ್ಕೆ ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

ಇನ್ನು ಈ ವಿಡಿಯೋದಲ್ಲಿ ದರ್ಶನ್ ದೇವರಿಗೆ ವಿಶೇಷ ಪೂಜೆ ಮಾಡಿಸುತ್ತಿರುವುದನ್ನು ನಾವು ಕಾಣಬಹುದು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. ಹಾಗೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ…

Leave a Reply

Your email address will not be published. Required fields are marked *