ಟಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ನಟ ರಾಮ್ ಚರಣ್ ಕೂಡ ಒಬ್ಬರು. ಇತ್ತೀಚೆಗೆ ನಟ ರಾಮ್ ಚರಣ್ ಅವರ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿ ಬಾರಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇನ್ನು ನಟ ರಾಮ್ ಚರಣ್ ಆರ್ ಆರ್ ಆರ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇದೀಗ ರಾಮ್ ಚರಣ್ ಅವರ ಬೇಡಿಕೆ ಸಿನಿಮಾರಂಗದಲ್ಲಿ ಇನ್ನಷ್ಟು ಹೆಚ್ಚಾಗಿದೆ ಎಂದರೆ ಅದು ತಪಪಾಗುವುದಿಲ್ಲ. ಇದೀಗ ನಟ ರಾಮ್ ಚರಣ್ ಅವರು ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಯಾವ ಸಿನಿಮಾ? ಸಿನಿಮಾದ ಹೆಸರೇನು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಮುಂದಕ್ಕೆ ಓದಿ..
ನಟ ರಾಮ್ ಚರಣ್ ಟಾಲಿವುಡ್ ನ ಪ್ರತಿಭಾನ್ವಿತ ಹಾಗೂ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ನಟ ರಾಮ್ ಚರಣ್ ಟಾಲಿವುಡ್ ನಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಸಹ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಂತರ ರಾಮ್ ಚರಣ್ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ ಎಂದರೆ ತಪ್ಪಾಗುವುದಿಲ್ಲ. ತಮ್ಮ ಫಿಟ್ನೆಸ್ ಹಾಗೂ ನಟನೆಯ ಮೂಲಕ ನಟ ರಾಮ್ ಚರಣ್ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಇದೀಗ ನಟ ರಾಮ್ ಚರಣ್ ಬಾಲಿವುಡ್ ನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೌದು ನಟ ಬಾಲಿವುಡ್ ನ ಸಿನಿಮಾ ಒಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ವಿಷಯ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
ನಟ ರಾಮ್ ಚರಣ್ ಈ ಹಿಂದೆ ಕೂಡ ಬಾಲಿವುಡ್ ನಲ್ಲಿ ನಟಿಸಿದ್ದಾರೆ. ನಟ ರಾಮ್ ಚರಣ್ ಹಾಗೂ ನಟಿ ಪ್ರಿಯಾಂಕ ಚೋಪ್ರಾ ಒಟ್ಟಾಗಿ ಜಂಜೀರ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಮೂಲಕ ನಟ ರಾಮ್ ಚರಣ್ ಬಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ ಈ ಸಿನಿಮಾ ಅಂದುಕೊಂಡ ರೀತಿಯಲ್ಲಿ ಯಶಸ್ಸು ಕಾಣಲಿಲ್ಲ. ಜಂಜೀರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಆಗಿತ್ತು. ನಂತರ ನಟ ರಾಮ್ ಚರಣ್ ಬಾಲಿವುಡ್ ನ ಯಾವ ಸಿನಿಮಾಗಳಲ್ಲಿ ನಟಿಸಲಿಲ್ಲ. ಇನ್ನು ಇದೀಗ ಮತ್ತೊಮ್ಮೆ ನಟ ರಾಮ್ ಚರಣ್ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ನಟ ರಾಮ್ ಚರಣ್ ಬಾಲಿವುಡ್ ಸುಲ್ತಾನ್ ನಟ ಸಲ್ಮಾನ್ ಖಾನ್ ಅವರ ಕಭಿ ಖುಷಿ ಕಭಿ ಈದ್ ಸಿನಿಮಾದಲ್ಲಿ ನಟಿಸಿಲಿದ್ದಾರೆ ಎನ್ನಲಾಗುತ್ತಿದೆ. ಹೌದು ಈ ಸಿನಿಮಾದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ನಟ ರಾಮ್ ಚರಣ್ ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಇದೀಗ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಈ ಸಿನಿಮಾದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಸಲ್ಮಾನ್ ಖಾನ್ ಅವರು ಖುದ್ದಾಗಿ ನಟ ರಾಮ್ ಚರಣ್ ಅವರನ್ನು ಈ ಸಿನಿಮಾದಲ್ಲಿ ನಟಿಸುವಂತೆ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ. ನಟ ರಾಮ್ ಚರಣ್ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಇನ್ನೂ ಯಾವುದೇ ಅಧಿಕೃತವಾದ ಮಾಹಿತಿ ದೊರೆಕಿಲ್ಲ.