ನಟಿ ಪ್ರಿಯಾಮಣಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ,
ನಟಿ ಪ್ರಿಯಾಮಣಿ ಕನ್ನಡ ಸೇರಿ ಐದು ಭಾಷೆಗಳಲ್ಲಿ ನಟಿಸಿ, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ನಟಿ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.
ತಮ್ಮ ನಟನೆಗೆ ನ್ಯಾಷನಲ್ ಅವಾರ್ಡ್ ಪಡೆದು ನಟಿ ಪ್ರಿಯಾಮಣಿ ದಕ್ಷಿಣ ಸಿನಿಮಾರಂಗದ ಟಾಪ್ ನಟಿಯಾಗಿ ಮಿಂಚಿದ್ದಾರೆ. ಇನ್ನು ಇದೀಗ ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕಿರುತೆರೆ ಲೋಕದಲ್ಲಿ ಸಹ ನಟಿ ಪ್ರಿಯಾಮಣಿ ಅವರಿಗೆ ತುಂಬಾ ಡಿಮ್ಯಾಂಡ್ ಇದೆ.
ಪ್ರಿಯಾಮಣಿ ಸದ್ಯ ಮದುವೆಯಾಗಿ ತಮ್ಮ ಗಂಡನ ಜೊತೆ ಖುಷಿಯಿಂದ ಇದ್ದಾರೆ. ಅಲ್ಲದೆ ನಟಿ ಪ್ರಿಯಾಮಣಿ ಅವರು ಇದೀಗ ಮತ್ತೆ ಸಿನಿಮಾರಂಗದಲ್ಲಿ ತಮ್ಮ ಮೋಡಿ ಮಾಡಲು ಶುರು ಮಾಡಿದ್ದಾರೆ. ಇತ್ತಿಚೆಗೆ ನಟಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು,
ಮತ್ತೆ ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಟಿ ಪ್ರಿಯಾಮಣಿ ಅವರು ಇದೀಗ ಒಟ್ಟಾಗಿ 5-6 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರಿಯಾಮಣಿ ಅವರು ತಮ್ಮ ಮೊದಲ ಸಿನಿಮಾಗೆ ನ್ಯಾಷನಲ್ ಅವಾರ್ಡ್ ಪಡೆದ ನಟಿ.
ಇನ್ನು ಪ್ರಿಯಾಮಣಿ ಅವರ ನಟನೆಯ ಬಗ್ಗೆ ಹೇಳಲು ಒಂದು ಮಾತಿಲ್ಲ. ಅಷ್ಟರ ಮಟ್ಟಿಗೆ ಅದ್ಭುತವಾಗಿ ನಟಿಸಿ, ಪ್ರಿಯಾಮಣಿ ದೊಡ್ಡ ಮಟ್ಟದಲ್ಲಿ ಗುರುತಿಸುಕೊಂಡಿದ್ದಾರೆ. ಅಲ್ಲದೆ ನಟಿ ಪ್ರಿಯಾಮಣಿ ಬೇರೆ ಭಾಷೆಗಳಲ್ಲಿ ಸಹ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಸದ್ಯ ನಟಿ ಪ್ರಿಯಾಮಣಿ ಯಾವುದೇ ಒಂದು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿದ್ದ ಮಾಧ್ಯಮದವರು ಪ್ರಿಯಾಮಣಿ ಹಾಗೂ ಅಲ್ಲಿದ್ದ ಕೆಲ ಜನರ ಗ್ರೂಪ್ ಫೋಟೋ ತೆಗೆಯಲು ಮುಂದಾಗಿದ್ದಾರೆ. ಇನ್ನು ನಟಿ ಪ್ರಿಯಾಮಣಿ ಈ ವೇಳೆ ಅಲ್ಲಿ ಕೆಳಗೆ ಮಂಡಿ ಮೇಲೆ ನಿಂತು ಫೋಟೋ,
ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಇದೆ ವೇಳೆ ಬ್ಯಾಲೆನ್ಸ್ ತಪ್ಪಿ ನಟಿ ಪ್ರಿಯಾಮಣಿ ಹಿಂದಕ್ಕೆ ಬಿದ್ದಿದ್ದಾರೆ. ಅಲ್ಲೇ ಪಕ್ಕದಲ್ಲೇ ಇದ್ದ ಕೆಲ ಮಂದಿ ಪ್ರಿಯಾಮಣಿ ಅವರನ್ನು ಸಂಬಾಲಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ…