ಕನ್ನಡ ಕಿರುತೆರೆಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿದ್ದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಎಂಬ ಧಾರಾವಾಹಿ ಮೂಲಕ ಸನ್ನಿಧಿಯಂದೆ ಎಲ್ಲರ ಮನೆ ಮಾತಾಗಿದ್ದ ನಟಿ ವೈಷ್ಣವಿ ಗೌಡ. ತಮ್ಮ ನಗು ಗ್ಲಾಮರ್ ಹಾಗೂ ಅದ್ಭುತ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇನ್ನು ನಟಿ ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿಯಾಗಿ ಸಹ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟ ಹಾಗೂ ಅವರ ಉತ್ತಮ ಆದರ್ಶಗಳ ಮೂಲಕ ಎಲ್ಲರ ಮನಗೆದ್ದಿದ್ದರು. ಅಲ್ಲದೆ ಬಿಗ್ ಬಾಸ್ ಮನೆಯ ಟಾಪ್ 4ನೇ ಸ್ಪರ್ಧಿಯಾಗಿದ್ದರು.
ಇನ್ನು ಬಿಗ್ ಬಾಸ್ ಸೀಸನ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ವೈಷ್ಣವಿ ಗೌಡ ಅವರು ಕಿಚ್ಚ ಸುದೀಪ್ ಅವರಿಗೆ ತಮಗೆ 200 ರಿಂದ 300 ಮದುವೆ ಪ್ರೋಪೋಸಲ್ ಬಂದಿದ್ದವು ಎಂದು ಹೇಳಿಕೊಂಡಿದ್ದರು. ಅಲ್ಲದೆ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವುದನ್ನು ಸಹ ನಟಿ ವೈಷ್ಣವಿ ಗೌಡ ರಿವೀಲ್ ಮಾಡಿದರು.
ತಾವು ಮದುವೆಯಾಗುವ ಹುಡುಗನಿಗೆ ಮೀಸೆ ಗಡ್ಡ ಇರಬೇಕು. ಆಡಂಬರದ ಜೀವನ ಅವರು ಇಷ್ಟಪಡಬಾರದು. ನನ್ನ ರೀತಿ ಸಿಂಪಲ್ಲಾಗಿರಬೇಕು. ಹಾಗೆ ಒಳ್ಳೆಯ ಮನಸ್ಸು ಇರಬೇಕು ಎಂದು ವೈಷ್ಣವಿ ಗೌಡ ತಮ್ಮ ಮದುವೆಯಾಗುವ ಹುಡುಗನ ಬಗ್ಗೆ ಕಿಚ್ಚ ಸುದೀಪ್ ಅವರ ಬಳಿ ಹೇಳಿಕೊಂಡಿದ್ದರು.
ಸದ್ಯ ನಟಿ ವೈಷ್ಣವಿ ಗೌಡ ಅವರ ಮದುವೆ ನಿಶ್ಚಯವಾಗಿದೆ, ಎನ್ನುವ ಸುದ್ದಿ ಸದ್ಯ ಸೋಶಿಯಲ್ ವಿಡಿಯೋದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಇದಕ್ಕೆ ಪೂರಕವೆಂಬಂತೆ ವೈಷ್ಣವಿ ಅವರ ಒಂದು ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಟಿ ವೈಷ್ಣವಿ ಗೌಡ ಒಂದು ಹುಡುಗನ ಪಕ್ಕದಲ್ಲಿ ನಿಂತು ಹೂವಿನ ಹಾರ ಹಾಕಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಆ ಫೋಟೋದಲ್ಲಿ ಕಾಣಿಸುತ್ತಿದೆ. ಇನ್ನು ಆ ಫೋಟೋ ನೋಡಿದ ಪ್ರತಿಯೊಬ್ಬರು ವೈಷ್ಣವಿ ಗೌಡ ಅವರ ಮದುವೆ ನಿಶ್ಚಯವಾಗಿದೆ ಎಂದುಕೊಂಡಿದ್ದಾರೆ.
ಅಲ್ಲದೆ ಹುಡುಗ ಯಾರು ಆತನ ಮೂಲ ಯಾವುದು? ಎನ್ನುವುದನ್ನು ಪತ್ತೆ ಹಚ್ಚುವ ಕೆಲಸದಲ್ಲಿದ್ದಾರೆ ನೆಟ್ಟಿಗರು. ಇನ್ನು ಈ ಬಗ್ಗೆ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.