ದೊಡ್ಡಪ್ಪ ಕರೀತಿದಿನಿ ಅಂದ್ರು ಬರಲ್ವಾ ಮಕ್ಕಳೇ : ಶಿವಣ್ಣ ಅವರ ಕರೆ ನೋಡಿ …!!!!

ಸ್ಯಾಂಡಲವುಡ್

ಕನ್ನಡ ಚಿತ್ರರಂಗದ ಹೆಮ್ಮೆಯ ನಟರು ಹಾಗೂ ಅದ್ಭುತ ವ್ಯಕ್ತಿಗಳು ಇರುವ ಕುಟುಂಬ ಎಂದರೆ ಅದು ದೊಡ್ಮನೆಯ ಡಾ ರಾಜ್ ಕುಮಾರ್ ಅವರ ಕುಟುಂಬ. ಅಣ್ಣಾವ್ರ ನಟನೆ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಹೇಳಲು ಮಾತುಗಳು ಸಾಲುವುದಿಲ್ಲ. ಅವರ ಬಗ್ಗೆ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ.

ಇನ್ನು ಅಣ್ಣಾವ್ರ ರೀತಿಯೆ ಅವರ ಮಕ್ಕಳಾದ ಶಿವ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಎಲ್ಲರೂ ಸಹ ಸಿನಿಮಾರಂಗದಲ್ಲಿ ಅದ್ಭುತವಾಗಿ ಸಕ್ರಿಯರಾಗಿದ್ದಾರೆ. ಇನ್ನು ದೊಡ್ಮನೆ ಎಂದು ಅಣ್ಣಾವ್ರ ಕುಟುಂಬವನ್ನು ಸುಮ್ಮನೆ ಕರೆಯುವುದಿಲ್ಲ.

ನಿಜಕ್ಕೂ ಅಲ್ಲಿನ ಜನರ ಮನಸ್ಸು ತುಂಬಾ ದೊಡ್ಡದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ. ಇನ್ನು ಯಾರೇ ಬರಲಿ ಯಾರಿಗೆ ಯಾವುದೇ ಕಷ್ಟ ಇರಲಿ ಅವರ ಸಹಾಯಕ್ಕೆ ಮೊದಲು ದೊಡ್ಮನೆಯ ಮಂದಿ ನಿಲ್ಲುತ್ತಾರೆ. ಇನ್ನು ಅಣ್ಣಾವ್ರ ನಂತರ ಎಲ್ಲರ ಬಾಯಲ್ಲಿ ಕೇಳಿ ಬರುವ ಹೆಸರು ಅಪ್ಪು.

ಅಪ್ಪು ಅವರು ಸಹ ಅಣ್ಣಾವ್ರ ಹಾದಿಯನ್ನೇ ಪಾಲಿಸಿದ್ದಾರೆ, ಅವರು ನಡೆದು ಬಂದಂತಹ ಹಾದಿಯನ್ನು ಅಪ್ಪು ಅವರು ಸಹ ಅನುಸರಿಸಿದ್ದಾರೆ. ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಪ್ಪು ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಮಾತುಗಳಲ್ಲಿ ವಿವರಿಸಲು ಸಾದ್ಯವಿಲ್ಲ.

ಅಪ್ಪು ಅವರು ಇಂದು ನಮ್ಮ ಜೊತೆಗೆ ದೈಹಿಕವಾಗಿ ಇಲ್ಲದೆ ಇರಬಹುದು, ಆದರೆ ಅವರು ಎಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಸದಾ ಇರುತ್ತಾರೆ. ಅಪ್ಪು ಅವರನ್ನು ಕಳೆದುಕೊಂಡು ಈಗಾಗಲೇ ಒಂದು ವರ್ಷ ಕಳೆದು ಹೋಗಿದೆ. ಈ ಒಂದು ವರ್ಷ ಅವರನ್ನು ಪ್ರೀತಿಸುತ್ತಿದ್ದವರಿಗೆ ಬಹಳ ಕಷ್ಟವಾಗಿತ್ತು.

ಇನ್ನು ಅವರ ಕುಟುಂಬದವರಿಗೆ ಅಪ್ಪು ಅವರನ್ನು ಮರೆತು ಜೀವನ ನಡೆಸಲು ತುಂಬಾ ಕಷ್ಟವಾಗಿತ್ತು. ಆದರೆ ನಿನ್ನ ನೋವುಗಳನ್ನು ಮರೆತು ಇದೀಗ ಎಲ್ಲರೂ ಕೊಂಚ ಚೇತರಿಸಿಕೊಂಡಿದ್ದಾರೆ. ಇನ್ನು ಆಗಾಗ ಅಪ್ಪು ಅವರ ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿರುತ್ತದೆ.

ಇನ್ನು ಇದೀಗ ಅಪವಾದ ಹೆಸರಿನಲ್ಲಿ ಮತ್ತೊಂದು ಕಾರ್ಯಕ್ರಮ ಜರುಗಿದ್ದು, ಈ ವೇಳೆ ವೇದಿಕೆ ಮೇಲೆ ಶಿವಣ್ಣ ಅವರ ಇಡೀ ಕುಟುಂಬವನ್ನು ಕರೆದಿದ್ದಾರೆ. ಅಪ್ಪು ಮಕ್ಕಳು ಹಾಗೂ ಧನ್ಯ ರಾಮ್ ಹೀಗೆ ಎಲ್ಲರನ್ನು ವೇದಿಕೆ ಮೇಲೆ ಕರೆದಿದ್ದಾರೆ. ನಂತರ ಅಣ್ಣಾವ್ರಡಿ ಕುಟುಂಬ ವೇದಿಕೆ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ

Leave a Reply

Your email address will not be published. Required fields are marked *