ಕಿರುತೆರೆ ಲೋಕದಲ್ಲಿ ತನ್ನ ಅದ್ಭುತ ನಟನೆ ಮೂಲಕ ವರ್ಷಗಳ ಕಾಲ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದ್ದ ನಟಿ ವೈಷ್ಣವಿ ಗೌಡ. ನಟಿ ವೈಷ್ಣವಿ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ನಟಿ ವೈಷ್ಣವಿ ಗೌಡ ಸಕ್ರಿಯರಾಗಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ ಎಂಬ ಧಾರವಾಹಿ ಮೂಲಕ ನಟಿ ವೈಷ್ಣವಿ ಗೌಡ ಕಿರುತೆರೆ ಲೋಕಕ್ಕೆ ಪರಿಚಯವಾದರೂ ಈ ಧಾರಾವಾಹಿಯ ಮೂಲಕ ನಟಿ ವೈಷ್ಣವಿ ಗೌಡ ಉತ್ತಮ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡರು. ನಟಿ ವೈಷ್ಣವಿ ಗೌಡ ಜನಪ್ರಿಯತೆ ಪಡೆದುಕೊಂಡ ಮತ್ತೊಂದು,
ಧಾರಾವಾಹಿ ಎಂದರೆ ಅದು ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದಲ್ಲಿ ಮಾಡಿಸಿಕೊಂಡಿದ್ದ ನಟಿ ವೈಷ್ಣವಿ ಗೌಡ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಪಡೆದುಕೊಂಡರು.
ನಂತರ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಕಾರ್ಯಕ್ರಮಕ್ಕೆ ನಟಿ ವೈಷ್ಣವಿ ಗೌಡ ಸ್ಪರ್ದಿಯಾಗಿ ಎಂಟ್ರಿ ಕೊಟ್ಟರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಉತ್ತಮ ಆಟ ಹಾಗೂ ಅವರ ಅದ್ಭುತ ಹಾಗೂ ಉತ್ತಮ ವ್ಯಕ್ತಿತ್ವದ ಮೂಲಕ ನಟಿ ವೈಷ್ಣವಿ ಗೌಡ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.
ಇನ್ನು ಬಿಗ್ ಬಾಸ್ ಸೀಸನ್ ಎಂಟರ ಟಾಪ್ 4ನೇ ಸ್ಪರ್ಧಿಯಾಗಿ ತಮ್ಮ ಆಟ ಮುಗಿಸಿದ ವೈಷ್ಣವಿ ಗೌಡ ಇತ್ತೀಚಿಗೆ ಯಾವುದೇ ಸಿನಿಮಾ ಹಾಗೂ ಧಾರವಾಹಿಗಳನ್ನು ಒಪ್ಪಿಕೊಂಡಿರಲಿಲ್ಲ. ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದು ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ಶುರುವಾದವು ಇನ್ನು ಈ ಬಗ್ಗೆ ಸ್ವತಃ ನಟಿ ವೈಷ್ಣವಿ ಗೌಡ ಸ್ಪಷ್ಟನೆ ನೀಡಿದ್ದಾರೆ. ನನ್ನ ನಿಶ್ಚಿತಾರ್ಥ ನಡೆದಿಲ್ಲ, ಹುಡುಗನ ಕಡೆಯವರು ಬಂದು ಮಾತುಕತೆ ಮುಗಿಸಿ ಹೋಗಿದ್ದಾರೆ ಅಷ್ಟೇ.
ಇನ್ನು ಇದಕ್ಕೆ ಒಪ್ಪಿಗೆ ನೀಡಿಲ್ಲ ಹುಡುಗನ ಬಗ್ಗೆ ನನಗೆ ಸರಿಯಾಗಿ ಏನು ಗೊತ್ತಿಲ್ಲ ಇನ್ನು ಯಾವುದೇ ನಿರ್ಧಾರಕ್ಕೆ ನಾನು ಬಂದಿಲ್ಲ ಎಂದಿದ್ದಾರೆ. ಸದ್ಯ ವೈಷ್ಣವಿ ಅವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.