ದರ್ಶನ ಅವರ ರೀತಿಯಲ್ಲಿಯೇ 31 ಜಿಲ್ಲೆಗಳಿಂದ 31 ಗೋವುಗಳನ್ನು ದತ್ತು ಪಡೆದ ಕಿಚ್ಚ ಸುದೀಪ್!.. ನೋಡಿ

curious

ಗೋಹ-ತ್ಯೆ ಮಹಾಪಾಪ, ಇದನ್ನು ತಡೆಯಲು ಅದೆಷ್ಟೋ ಜನರು ಪ್ರಯತ್ನ ಮಾಡಿ, ಕೊನೆಗೆ ತಾವೇ ಹಂತ್ಯವಾಗಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಗೋಹತ್ಯೆ ತಡೆಯಲು ಕರ್ನಾಟಕ ರಾಜ್ಯ ಸರ್ಕಾರ ಸಾಕಷ್ಟು ಜಾನುವಾರು ರಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ.

ಇನ್ನು ಜಾನುವಾರುಗಳ ಸಂರಕ್ಷಣೆಯ ಯೋಜನೆಯ ಅಡಿಯಲ್ಲಿ ಯಾರಾದರೂ ಗೋವುಗಳನ್ನು ದತ್ತು ಪಡೆಯಬಹುದು. ಇನ್ನು ದಿನಕ್ಕೆ 10 ರೂಪಾಯಿಗೂ ಹೆಚ್ಚು ತಮ್ಮ ಕೈಲಾದಷ್ಟು ಧಾನ ಮಾಡಿ ಗೋವುಗಳ ಸಂರಕ್ಷಣೆ ಹಾಗೂ ಅದನ್ನು ನೋಡಿ ಕೊಳ್ಳುವುದರಲ್ಲಿ ಸಹಾಯ ಮಾಡಬಹುದು ಎಂದು ತಿಳಿಸಲಾಗಿತ್ತು.

ಇನ್ನು ಇದರ ಪ್ರಕಾರ ಸಿ ಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟುಹಬ್ಬದ ದಿನ 11 ಗೋವುಗಳನ್ನು ದತ್ತು ಪಡೆದಿದ್ದರು. ಈ ವಿಷಯದಿಂದ ಬೇರೆ ಜನರು ಸಹ ಪ್ರೇರಿತರಾಗಿ ಗೋವುಗಳನ್ನು ದತ್ತು ಪಡೆಯಲು ಮುಂದಾಗಿದ್ದರು. ಸದ್ಯ ಈ ಪುಣ್ಯ ಕೆಲಸಕ್ಕೆ ನಟ ಕಿಚ್ಚ ಸುದೀಪ್ ಅವರು ಕೂಡ ಕೈ ಜೋಡಿಸಿದ್ದಾರೆ.

ನಟ ಕಿಚ್ಚ ಸುದೀಪ್ ಇದೀಗ ಜಿಲ್ಲೆಗೆ ಒಂದಂತೆ ರಾಜ್ಯದಲ್ಲಿ ಇರುವ ಎಲ್ಲಾ ಗೋಶಾಲೆಗಿಂದ ಗೋವುಗಳನ್ನು ದತ್ತು ಪಡೆಯುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಅವರ ಮಾತನ್ನು ಕಿಚ್ಚ ಸುದೀಪ್ ನಡೆಸಿಕೊಟ್ಟಿದ್ದಾರೆ. ಸದ್ಯ ಕಿಚ್ಚ ಸುದೀಪ್ ಅವರು ಮಾಡುತ್ತಿರುವ ಈ ಕೆಲಸ ಎಲ್ಲೆಡೆ ವೈರಲ್ ಆಗುತ್ತಿದೆ.

ಇನ್ನು ನಟ ಕಿಚ್ಚ ಸುದೀಪ್ ಅವರು ಇಂದು ತಮ್ಮ ನಿವಾಸದಲ್ಲಿ ಗೋಪೂಜೆ ನಡೆಸಿ, ಈ ಒಳ್ಳೆಯ ಕೆಲಸಕ್ಕೆ ನಾಂದಿ ಹಾಡಿದ್ದಾರೆ. ಅಲ್ಲದೆ ಈ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್, ನನನ್ನು ಈ ಕೆಲಸಕ್ಕೆ ರಾಯಭಾರಿಯನ್ನಾಗಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು.

ಈ ರೀತಿಯ ಒಳ್ಳೆಯ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು, ಗೋವುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಅಲ್ಲದೆ ಈ ರೀತಿ ಗೋವುಗಳನ್ನು ಮಾತ್ರವಲ್ಲ ಎಲ್ಲಾ ಪ್ರಾಣಿಗಳನ್ನು ದತ್ತು ಪಡೆದು ಅದನ್ನು ಕಾಪಾಡುವುದು ಒಬ್ಬ ಮನುಷ್ಯನ ಮುಖ್ಯ ಕರ್ತವ್ಯ.

ನಾನು ಕೂಡ ಈ ಕೆಲಸದಲ್ಲಿ ಕೈ ಜೋಡಿಸಿದ್ದೇನೆ, ಇನ್ನು ನೀವು ಸಹ ಇದೆ ರೀತಿ ಈ ರೀತಿಯ ಒಳ್ಳೆಯ ಕೆಲಸಗಳಲ್ಲಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೌ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *