ಅಭಿಮಾನಿಗಳು ಕೆಲವು ಕಲಾವಿದರನ್ನು ದೇವರಂತೆ ಕಾಣುತ್ತಾರೆ ಎನ್ನುವ ವಿಚಾರ ಎಲ್ಲರಿಗೂ ಸಹ ಗೊತ್ತೇ ಇದೆ. ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಕೆಲವು ಕಲಾವಿದರು ಸದಾ ಕಾಲಕ್ಕೆ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದು ಬಿಡುತ್ತಾರೆ.
ಇನ್ನು ಈ ಕಲಾವಿದರ ಪೈಕಿ ನಟ ರೆಬೆಲ್ ಸ್ಟಾರ್, ಕಲಿಯುಗದ ಕರ್ಣ ಅಂಬರೀಶ್ ಅವರು ಹಾಗೆ ಕರುನಾಡ ಮುತ್ತು ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಎಂದಿಗೂ ಸಹ ಮರೆಯುವುದಿಲ್ಲ. ಅಷ್ಟರ ಮಟ್ಟಿಗೆ ಅಭಿಮಾನಿಗಳ ಮನಸಿನಲ್ಲಿ ಜಾಗ ಮಾಡಿದ್ದಾರೆ.
ಇನ್ನು ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಬ್ಬರೂ ಸಹ ಇಂದು ದೈಹಿಕವಾಗಿ ನಮ್ಮ ಜೊತೆ ಇಲ್ಲದೆ ಇರಬಹುದು. ಆದರೆ ಅವರು ಇಂದು ನಮ್ಮ ಜೊತೆಗೆ ನಮ್ಮ ಮನಸ್ಸಿನಲ್ಲಿ ಅವರ ಸಿನಿಮಾಗಳು ಹಾಗೆ ಅವರು ಮಾಡಿರುವ ಕೆಲಸಗಳ ಮೂಲಕ ಇದ್ದಾರೆ ಎಂದರೆ ತಪ್ಪಾಗುವುದಿಲ್ಲ.
ರೆಬೆಲ್ ಸ್ಟಾರ್ ಅಂಬರೀಷ್ ಅವರು ನಮ್ಮನ್ನು ಬಿಟ್ಟು ಹೋಗಿ ಈಗಾಗಲೇ ನಾಲ್ಕು ವರ್ಷಗಳು ಕಳೆದು ಹೋಗಿದೆ. ಇನ್ನು ಅಪ್ಪು ಅವರು ನಮ್ಮ ಜೊತೆ ಇಲ್ಲದೆ ಒಂದು ವರ್ಷ ಕಳೆದು ಹೋಗಿದೆ. ಆದರೂ ಸಹ ಈ ಇಬ್ಬರೂ ಉತ್ತಮ ನಟರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರೆ ತಪ್ಪಾಗುವುದಿಲ್ಲ.
ಇನ್ನು ಅಪ್ಪು ಹಾಗೂ ಅಂಬರೀಶ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ ಎನ್ನುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಇದೀಗ ಅವರ ಗುಡಿಯನ್ನು ಕಟ್ಟಿ ಅಭಿಮಾನಿಗಳು ಅವರ ಹೆಸರಿನಲ್ಲಿ ಅಭಿಮಾನವನ್ನು ನಿರೂಪಿಸಿಕೊಳ್ಳುತ್ತಿರುವ ದೃಶ್ಯ ಒಂದು ಇದೀಗ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮದ್ದೂರಿನ ಡಿ ಹೊಸೂರು ಗ್ರಾಮದಲ್ಲಿ ಅಭಿಮಾನಿಗಳು ಅರಮನೆ ಹೆಸರಿನ ಗುಡಿಯನ್ನು ಕಟ್ಟಿ ಆ ಗುಡಿಯಲ್ಲಿ ಅಂಬರೀಶ್ ಹಾಗೂ ಅಪ್ಪು ಅವರ ಪುತ್ಥಳಿಯನ್ನು ಇಟ್ಟು ಪ್ರತಿಷ್ಠಾಪಿಸಿದ್ದಾರೆ. ಸದ್ಯ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಉಮೇಶ್ ಎಂಬ ಅಪ್ಪು ಹಾಗೂ ಅಂಬರೀಶ್ ಅವರ ಅಪ್ಪಟ ಅಭಿಮಾನಿ ಅವರ ಗ್ರಾಮಸ್ಥರ ಜೊತೆಗೆ ಈ ಬಗ್ಗೆ ಮಾತನಾಡಿ ಗ್ರಾಮಸ್ಥರೆಲ್ಲರೂ ಇದಕ್ಕೆ ಒಪ್ಪಿಗೆ ನೀಡಿ i ರೀತಿಯ ಕೆಲಸ ಮಾಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..