ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಎಂದರೆ ಅದು ವೈಷ್ಣವಿ ಗೌಡ ಕಳೆದ ಕೆಲವು ದಿನಗಳಿಂದ ನಟಿ ವೈಷ್ಣವಿ ಗೌಡ ಅವರ ಮದುವೆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ದಿನದಿಂದ ದಿನಕ್ಕೆ ರೋಚಕ ವಿಷಯಗಳು ಹೊರಗೆ ಬರುತ್ತಿದೆ.
ಇತ್ತೀಚೆಗೆ ವೈಷ್ಣವಿ ಗೌಡ ಅವರ ಒಂದು ಫೋಟೋ ಸೋಸಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಇನ್ನು ಈ ಫೋಟೋದಲ್ಲಿ ನಟಿ ವೈಷ್ಣವಿ ಗೌಡ ಅವರು ಒಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಕಾಣಿಸುತ್ತಿತ್ತು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡಿತ್ತು.
ಅಲ್ಲದೆ ಇನ್ನು ಈ ಫೋಟೋ ವೈರಲ್ ಆಗುತ್ತಿದ್ದಂತೆ, ನಟಿ ವೈಷ್ಣವಿ ಅವರು ತಾವು ನಿಶ್ಚಿತಾರ್ಥ ಮಾಡಿಕೊಂಡಿಲ್ಲ, ಅವರು ಕೇವಲ ಮದುವೆ ಮಾತುಕತೆ ನಡೆಸಿ ಇಬ್ಬರೂ ಹಾರ ಬದಲಾಯಿಸಿಕೊಂಡಿದ್ದಾರೆ ಎಂದು ಸ್ವತಃ ನಟಿ ವೈಷ್ಣವಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಇನ್ನು ಕಳೆದ ಕೆಲವು ದಿನಗಳ ಹಿಂದೆ ಇಬ್ಬರೂ ಹೆಣ್ಣು ಮಕ್ಕಳು, ವೈಷ್ಣವಿ ಅವರ ಜೊತೆ ಫೋಟೋದಲ್ಲಿ ನಿಂತಿದ್ದ ವಿಧ್ಯಾಭರಣ್ ಎಂಬ ಆತ ಮೋಸಗಾರ, ವೈಷ್ಣವಿ ಅವರ ಜೀವನವನ್ನು ಹಾಳು ಮಾಡುತ್ತಾನೆ, ಅಲ್ಲದೆ ಅವರನ್ನು ನಾವು ಕಾಪಾಡಬೇಕು ಎಂದೆಲ್ಲ ಮಾತನಾಡುತ್ತಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು.
ಇನ್ನು ಈ ಆಡಿಯೋ ವೈರಲ್ ಆದ ನಂತರ ವೈಷ್ಣವಿ ಹಾಗೂ ವಿಧ್ಯಭರಣ್ ಅವರ ಮದುವೆ ಮಾತುಗಳು ಸಹ ಮುರಿದು ಬಿತ್ತು. ಅಲ್ಲದೆ ಈ ಬಗ್ಗೆ ಸ್ವತಃ ನಟಿ ವೈಷ್ಣವಿ ಅವರು ಮಾಹಿತಿ ಹಂಚಿಕೊಂಡಿದ್ದರು. ಸದ್ಯ ಇದೀಗ ವಿಧ್ಯಾ ಭರಣ್ ಅವರು ಈ ಬಗ್ಗೆ ಮಾತನಾಡಿದ್ದು, ಈ ವಿಷಯ ಸೋಸಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾ ಬಾರಿ ಚರ್ಚೆಗಳು ಸಹ ನಡೆಯುತ್ತಿತ್ತು. ಆದರೆ ಆ ಇಬ್ಬರೂ ಯಾರು ಎನ್ನುವುದನ್ನು ಸಹಾ ಎಲ್ಲಿಯೂ ಸಹ ರಿವೀಲ್ ಮಾಡಿಲ್ಲ. ಇನ್ನು ಈ ಬಗ್ಗೆ ಇದೀಗ ಸ್ವತಃ ವಿಧ್ಯಾಭರಣ್ ಅವರು ಮಾತನಾಡಿದ್ದು, ಆ ಇಬ್ಬರೂ ಯಾರು ಎಂದು ನನಗೆ ಗೊತ್ತಿಲ್ಲ.
ಅವರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಸಹ ಗೊತ್ತಿಲ್ಲ. ಅವರು ಯಾರು ಎಂದು ನನಗೆ ತಿಳಿದರೆ ಅವರನ್ನು ಕಂಡಿತವಾಗಿಯು ಪೊಲೀಸ್ ಅವರಿಗೆ ಹಿಡಿದುಕೊಡುತ್ತೇನೆ. ಅಲ್ಲದೆ ಈ ರೀತಿ ಯಾರೋ ನಮಗೆ ಯಾರೋ ಆಗದೆ ಇರುವವರು ಮಾಡುತ್ತಿದ್ದಾರೆ, ಆದರೆ ಅದು ಯಾರು ಎಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಸದ್ಯ ಇವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.