ಬಹುಭಾಷಾ ನಟಿ ಲಕ್ಷ್ಮಿ ರೈ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತಮ್ಮ ಗ್ಲಾಮರ್ ಹಾಗೂ ತಮ್ಮ ಅದ್ಭುತ ನಟನೆಯ ಮೂಲಕ ನಟಿ ಲಕ್ಷ್ಮೀ ರೈ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಿಸುವ ಕೆಲಸ ಮಾಡುತ್ತಾರೆ ನಟಿ ಲಕ್ಷ್ಮೀ ರೈ.
ನಟಿ ಲಕ್ಷ್ಮೀ ರೈ ಅವರು ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಕನ್ನಡದಲ್ಲಿ ನಟಿಸಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ ನಟಿ ಸಿನಿಮಾರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಟಿಯರ ಪೈಕಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ನಟಿ ಲಕ್ಷ್ಮೀ ರೈ ಕರ್ಕ ಕಸದರ ಎಂಬ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಹಿಟ್ ಆದ ನಂತರ ನಟಿ ಲಕ್ಷ್ಮೀ ರೈ ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ಅಂದರೆ ಕಾಮಿಡಿ ಹಾಗೂ ರೊಮ್ಯಾಂಟಿಕ್, ಆಕ್ಷನ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡದ ನಟ ಡಿ ಬಾಸ್ ದರ್ಶನ್ ಹಾಗೂ ನಟ ಆದಿತ್ಯ ಒಟ್ಟಾಗಿ ನಟಿಸಿರುವ ಸ್ನೇಹನಾ ಪ್ರೀತಿನಾ ಸಿನಿಮಾದಲ್ಲಿ ನಟಿಸುವ ಮೂಲಕ ನಟಿ ಕನ್ನಡಕ್ಕೂ ಸಹ ಪಾದಾರ್ಪಣೆ ಮಾಡಿದರು. ಈ ಮೂಲಕ ನಟಿ ಲಕ್ಷ್ಮಿ ರೈ ಕನ್ನಡದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಇನ್ನು ನಟಿ ಲಕ್ಷ್ಮೀ ರೈ ಅವರು ಕನ್ನಡದಲ್ಲಿ ಮಿಂಚಿನ ಓಟ, ಕಲ್ಪನಾ, ಝಾನ್ಸಿ ಐ ಪಿ ಎಸ್ ಸಿನಿಮಾಗಳಲ್ಲಿ ನಟಿಸಿ ಕನ್ನಡದಲ್ಲಿ ಸಹ ಸಕ್ರಿಯರಾಗಿದ್ದಾರೆ. ಕನ್ನಡದ ಜೊತೆಗೆ ಮಲಯಾಳಂ, ತೆಲುಗು, ಹಾಗೂ ಹಿಂದಿ ಸಿನಿಮಾಗಳಲ್ಲಿ ಸಹ ನಟಿ ಅಭಿನಯಿಸಿ ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ನಟಿ ಲಕ್ಷ್ಮಿ ರೈ ಆಗಾಗ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿರಲು ಬಯಸುತ್ತಾರೆ. ಇನ್ನು ಸದ್ಯ ನಟಿ ಲಕ್ಷ್ಮಿ ರೈ ಕೆಲವು ಹಾಟ್ ಫೋಟೋಗಳನ್ನು ಹರಿಬಿಟ್ಟಿದ್ದಾರೆ.
ನಟಿ ಲಕ್ಷ್ಮಿ ರೈ ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದು, ಬಿಕ್ಕಿನಿ ಧರಿಸಿ ಪೋಸ್ ನೀಡಿದ್ದಾರೆ. ಸದ್ಯ ನಟಿಯ ಈ ಹಾಟ್ ಫೋಟೋಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಈ ಫೋಟೋಗಳು ಸೋಸಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ…