ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಸದ್ಯ ಎಲ್ಲೆಡೆ ಹಲ್ ಚಲ್ ಸೃಷ್ಟಿಸಿರುವ ಸಿನಿಮಾ ಎಂದರೆ ಅದು ಕಾಂತಾರ. ಸದ್ಯ ಕಾಂತಾರ ಸಿನಿಮಾ ಬ್ಲಾಕ್ ಬಾಸ್ಟರ್ ಹಿಟ್ ಆಗಿದೆ. ಹಿಂದೆ ಯಾವ ಸಿನಿಮಾ ಕೂಡ ಮಾಡಿರದ ದಾಖಲೆ ನಮ್ಮ ಕನ್ನಡ ಸಿನಿಮಾ ಕಾಂತಾರ ಮಾಡಿದೆ ಎಂದರೆ ತಪ್ಪಾಗುವುದಿಲ್ಲ.
ಕಾಂತಾರ ಸಿನಿಮಾವನ್ನು ಎಲ್ಲಾ ಸಿನಿಮಾರಂಗದ ನಟ ನಟಿಯರು ನೋಡಿ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಈ ಸಿನಿಮಾದ ಪ್ರತಿಯೊಂದು ದೃಶ್ಯ, ಈ ಸಿನಿಮಾದ ಕಥೆ ಹಾಗೂ ಈ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಅವರ ನಟನೆಗೆ ಎಲ್ಲೆಡೆಯಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಾಂತಾರ ಸಕ್ಸಸ್ ನಂತರ ರಿಷಬ್ ಶೆಟ್ಟಿ ಅವರ ಬೇಡಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಈಗಾಗಲೇ ಚರ್ಚೆಗಳು ಶುರುವಾಗಿದೆ. ಇನ್ನು ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ 2 ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದ್ದು, ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಶುರುವಾಗಿದೆ ಎನ್ನಲಾಗುತ್ತಿದೆ.
ಇನ್ನು ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಮಾಧ್ಯಮ ಒಂದರಲ್ಲಿ ತಮ್ಮನ್ನು ಟೈಮ್ಸ್ ಆಫ್ ಇಂಡಿಯಾ ಕವರ್ ಪೇಜ್ ನಲ್ಲಿ ನೋಡಿ ಅವರನ್ನು ಸಿನಿಮಾದಲ್ಲಿ ನಟಿಸುವಂತೆ ಕನ್ನಡದ ನಿರ್ದೇಶಕರು ಕೇಳಿಕೊಂಡಿದ್ದರು ಎಂದು ಕೈ ಸನ್ನೆ ಮಾಡಿ ಉಡಾಫೆ ರೀತಿ ಮಾತನಾಡಿದ್ದರು. ಈ ವಿಷಯ ಕೇಳಿ ನೆಟ್ಟಿಗರು ನಟಿಯ ಮೇಲೆ ಗರಂ ಆಗಿದ್ದರು.
ಸದ್ಯ ರಶ್ಮಿಕಾ ಅವರ ಈ ಮಾತುಗಳಿಗೆ ರಿಷಬ್ ಶೆಟ್ಟಿ ಅವರು ಕಡಕ್ ಆಗಿ ಟಾಂಗ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ರಿಷಬ್ ಶೆಟ್ಟಿ ಅವರಿಗೆ ಕಿರಿಕ್ ಪಾರ್ಟಿ 2 ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಪಾತ್ರದ ಬಗ್ಗೆ ಕೇಳಿದಾಗ ಅವರು ಕಿರಿಕ್ ಪಾರ್ಟಿ ಮೊದಲ ಭಾಗದಲ್ಲಿ ನಲ್ಲಿ ರಶ್ಮಿಕ ಪಾತ್ರ ಮುಗಿದುಹೋಗಿದೆ.
ಸಿನಿಮಾ ಎರಡನೇ ಹಂತ ತಲುಪುವ ಮೊದಲೇ ಸಾನ್ವಿ ಅವರ ಪಾತ್ರ ಸಿನಿಮಾದಲ್ಲಿ ಸತ್ತುಹೋಗಿದೆ. ಇನ್ನು ಕಿರಿಕ್ ಪಾರ್ಟಿ 2 ಸಿನಿಮಾದಲ್ಲಿ ಅವರ ಪಾತ್ರದ ಅವಶ್ಯಕತೆ ಇಲ್ಲ ಎನ್ನುವ ರೀತಿ ಮಾತನಾಡಿದ್ದಾರೆ. ಸದ್ಯ ನಟ ರಿಷಬ್ ಅವರ ಮಾತುಗಳನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಅಲ್ಲದೆ ಇದೀಗ ನಟಿ ರಶ್ಮಿಕಾ ಅವರನ್ನು ಕರ್ನಾಟಕದಿಂದ ಬ್ಯಾನ್ ಮಾಡಬೇಕು ಎಂದು ಟ್ವಿಟರ್ ನಲ್ಲಿ ಟ್ವೀಟ್ ವೈರಲ್ ಆಗುತ್ತಿದೆ. ಸದ್ಯ ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಹಾಗೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ…