ಕನ್ನಡದ ಕಿರುತೆರೆ ನಟಿ ನಿವೇದಿತಾ ಗೌಡ ಕೆಲವು ದಿನಗಳಿಂದ ಬಾಲಿಗೆ ಸೋಲೋ ಟ್ರಿಪ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿರುವ ನಟಿ ನಿವೇದಿತಾ ಗೌಡ ತಮ್ಮ ಪ್ರತಿಯೊಂದು ವಿಷಯದ ಅಪ್ಡೇಟ್ ಅಭಿಮಾನಿಗಳ ಜೊತೆ ನೀಡುತ್ತಿದ್ದಾರೆ.
ನಟಿ ನಿವೇದಿತಾ ಗೌಡ ಅವರ ಹಾಟ್ ಅಂಡ್ ಕೂಲ್ ಫೋಟೋ ನೋಡುತ್ತಿರುವ ನೆಟ್ಟಿಗರು ಎಷ್ಟು ಪಾಸಿಟಿವ್ ಕಾಮೆಂಟ್ ಮಾಡುತ್ತಿದ್ದಾರೋ, ಅಷ್ಟೇ ನೆಗೆಟಿವ್ ಕಾಮೆಂಟ್ಸ್ ಕೂಡ ಮಾಡುತ್ತಿದ್ದಾರೆ. ಅದರಲ್ಲೂ ಚಂದನ್ ಶೆಟ್ಟಿ ಹಣ ಖರ್ಚು ಮಾಡುತ್ತಿದ್ದಾಳೆ ಎನ್ನುತ್ತಿದ್ದಾರೆ..
ಇಷ್ಟು ದಿನ ಯಾವುದೇ ಕಾಮೆಂಟ್ಸ್ಗಳಿಗೆ ತಲೆಕೆಡಿಸಿಕೊಳ್ಳದ ನಿವೇದಿತಾ ಗೌಡ ಇದೀಗ ಗರಂ ಆಗಿದ್ದಾರೆ. ಪ್ರತಿಯೊಬ್ಬರ ಕಾಮೆಂಟ್ ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತ ಏನು ಇಲ್ಲ. ಆದರೆ ಇದೆಲ್ಲ ಒಂದು ರೀತಿ ವಿಚಿತ್ರವಾಗಿದೆ ಜನರಿಗೆ ಬೇಸಿಕ್ ಕಾಮನ್ ಸೆನ್ಸ್ ಕೂಡ ಇಲ್ಲ.
ನಾವು ಪ್ರವಾಸದಲ್ಲಿದ್ದಾಗ ಫೋಟೋ ತೆಗೆಯಲು ಜನರು ಇರುತ್ತಾರೆ ಅವರಿಗೆ ಹಣ ಕೊಟ್ಟರೆ ಫೋಟೋ ತೆಗೆಯುತ್ತಾರೆ. ಬೆಡ್ ರೂಂನಲ್ಲಿ ಕುಳಿತುಕೊಂಡು ನೀವು ಬೇರೊಬ್ಬರ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುವ ಬದಲು ಅದರಿಂದ ಹೊರಗೆ ಬಂದು ಪ್ರಪಂಚ ನೋಡಿ, ಪ್ರಯಾಣ ಮಾಡಿ.
ಆಗ ನಿಮಗೆ ಹೇಗೆ ಏನು ಎಂದು ತಿಳಿಯುತ್ತದೆ ಎಂದು ನಿವೇದಿತಾ ಗೌಡ ಬರೆದುಕೊಂಡಿದ್ದಾರೆ. ನನಗೊಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಪ್ರವಾಸ ಮಾಡಿದರೆ ತಪ್ಪಲ್ಲ. ಆದರೆ ಹುಡುಗಿಯರು ಒಂಟಿಯಾಗಿ ಪ್ರವಾಸ ಮಾಡಿದರೆ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ.
ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ಕೈಯಲ್ಲಿ ಕೆಲಸ ಇದೆ ದುಡಿಯುತ್ತಿದ್ದೇನೆ. ನನ್ನ ಅಗತ್ಯಗಳನ್ನು ನೋಡಿಕೊಳ್ಳುವ ಶಕ್ತಿ ನನ್ನಲ್ಲಿದೆ. ಪತಿ ದುಡ್ಡು ವೇಸ್ಟ್ ಮಾಡುತ್ತಿದ್ದೀಯಾ ಎಂದು ಕಾಮೆಂಟ್ ಮಾಡುತ್ತಿರುವವರಿಗೆ ನನ್ನದೊಂದು ಪ್ರಶ್ನೆ? ನಾನು ಹಾಗೆ ಮಾಡುತ್ತಿರುವುದನ್ನು ನೀವು ನೋಡಿದ್ದೀರಾ.
ಹೆಣ್ಣು ಮಗಳು ದುಡಿದು ತನ್ನ ಕಾಲ ಮೇಲೆ ತಾನು ನಿಂತು ಕೊಳ್ಳಬಹುದು ಎನ್ನುವ ಮೈಲ್ ಸೆಟ್ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ನನ್ನ ಗಂಡನ ಹಣ ಖರ್ಚು ಮಾಡಿದರೂ ನಿಮಗೇನು ಸಮಸ್ಯೆ. ಇದು ನಿಮಗೆ ಸಂಬಂಧ ಪಟ್ಟ ವಿಚಾರವಲ್ಲ ಎಂದು ನಿವೇದಿತ ಹೇಳಿದ್ದಾರೆ.
ಇಷ್ಟು ನೆಗೆಟಿವ್ ಕಾಮೆಂಟ್ ಬಂದರೂ ಸಹ ನನ್ನ ಜೊತೆಗೆ ಕೆಲವು ಜನರಿದ್ದಾರೆ ಅವರಿಗೆ ನನ್ನ ಧನ್ಯವಾದಗಳು. ಕೆಟ್ಟ ಜನರ ಮಧ್ಯೆ ಒಳ್ಳೆಯ ಜನರು ಇರುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ ನಿವೇದಿತಾ ಗೌಡ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..