ಚಂದನವನದ ಬಹು ಬೇಡಿಕೆ ನಟಿಯರಲ್ಲಿ ಒಬ್ಬರಾಗಿರುವ ನಟಿ ಅಧಿತಿ ಪ್ರಭುದೇವ ಅವರು ಮದುಮಗಳಾಗಿ ಕಂಗೊಳಿಸುತ್ತಿದ್ದಾರೆ. ಅಪ್ಪಟ ಕನ್ನಡತಿ, ಗ್ಲಾಮರ್ ಬೆಡಗಿ, ನಟಿ ಅದಿತಿ ಪ್ರಭುದೇವ ಅವರ ಮುಖದಲ್ಲಿ ಇದೀಗ ಮದುವೆ ಕಳೆ ಎದ್ದು ಕಾಣುತ್ತಿದೆ.
ಇದೇ ಭಾನುವಾರ ನವಂಬರ್ 27ರಂದು ಉದ್ಯಮಿ ಯಶಸ್ವಿ ಅವರ ಜೊತೆ ನಟಿ ಅಧಿತಿ ಪ್ರಭುದೇವ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸದ್ಯಕೆ ನಟಿ ಅದಿತಿ ಅವರ ಮನೆಯಲ್ಲಿ ಮದುವೆ ಶಾಸ್ತ್ರಗಳು ಜೋರಾಗಿಯೇ ನಡೆಯುತ್ತಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಅದಿತಿ ಅವರ ಮನೆಯಲ್ಲಿ ಅವರ ಅರಿಶಿಣ ಶಾಸ್ತ್ರ ನಡೆದಿದ್ದು, ಇನ್ನು ಈ ಫೋಟೋಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ನಟಿಗೆ ಶುಭ ಕೋರಿದ್ದಾರೆ.
ಇನ್ನು ಈ ಫೋಟೋಗಳಲ್ಲಿ ನಟಿ ಅದಿತಿ ಪ್ರಭುದೇವ ಬಿಳಿ ಬಣ್ಣದ ಸೀರೆ ತೊಟ್ಟು ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಅಭಿಮಾನಿಗಳಂತೂ ಈ ಫೋಟೋ ನೋಡಿ ಧರೆಗಿಳಿದ ಅಪ್ಸರೆಯಂತೆ ಕಾಡುತ್ತಿದ್ದೀರಿ ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಸದ್ಯ ನಟಿ ಅದಿತಿ ಪ್ರಭುದೇವ ಅವರ ಅರಿಶಿಣ ಶಾಸ್ತ್ರದ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ಕಳೆದ ವರ್ಷವಷ್ಟೇ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ವಿ ಅವರ ನಿಶ್ಚಿತಾರ್ಥ ನೆರವೇರಿತು. ಇನ್ನು ಇತ್ತೀಚಿಗಷ್ಟೇ ಇವರಿಬ್ಬರ ಮದುವೆ ಆಮಂತ್ರಣ ಪತ್ರ,
ಎಲ್ಲರಿಗೂ ಸಹ ಲಭ್ಯವಾಗಿತ್ತು. ಇನ್ನು ಇತ್ತೀಚೆಗೆ ನಟಿ ಅದಿತಿ ತಮ್ಮ ಹುಡುಗನ ಬಗ್ಗೆ ಸಹ ಮಾತನಾಡಿದರು, ಮೊದಲು ಯಶಸ್ವಿ ಅವರು ಅದಿತಿ ಅವರನ್ನು ನೋಡಿ ಇಷ್ಟಪಟ್ಟಿದ್ದರಂತೆ. ನಂತರ ಅವರ ಕುಟುಂಬದವರೊಂದಿಗೆ ಮಾತನಾಡಿ, ಇದಕ್ಕೆ ನಟಿ ಅದಿತಿ ಕೂಡ ಓಕೆ ಎಂದಿದ್ದು, ಅವರ ಮನೆಯವರು ಮದುವೆ ನಿಶ್ಚಯಿಸಿದ್ದಾರೆ.
ಸದ್ಯ ಚಂದನವನದ ಟಾಪ್ ನಟಿಯಾಗಿರುವ ನಟಿ ಅದಿತಿ ಪ್ರಭುದೇವ ಅವರು ತಮ್ಮ ಸಿನಿಮಾಗಳ ಜೊತೆಗೆ ತಮ್ಮ ವೈಯಕ್ತಿಕ ಜೀವನದಲ್ಲೂ ಸಕ್ರಿಯ ರಾಗಿದ್ದಾರೆ. ಇದೀಗ ನಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಲಾವಿದರ ಜೊತೆಗೆ ಅಭಿಮಾನಿಗಳು ಸಹ ಶುಭ ಹಾರೈಸುತ್ತಿದ್ದಾರೆ.