ಇಡೀ ಕರ್ನಾಟಕದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಭಾರಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಇನ್ನೇನು ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಸಿನಿಮಾಗಳಿಂದ ಶಾಶ್ವತವಾಗಿ ಬ್ಯಾನ್ ಆಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿದೆ ಎನ್ನುವುದು ಸಹ ನಿಮ್ಮೆಲ್ಲರಿಗೂ ಗೊತ್ತಿದೆ.
ಇದೀಗ ರಶ್ಮಿಕಾ ಕುರಿತು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಬೇರೆ ರಾಜ್ಯದಲ್ಲೂ ಸಹ ಅವರ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ ಎನ್ನುವ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಹಾಗಾದರೆ ಏನಿದು ಸುದ್ದಿ ಎನ್ನುವುದನ್ನು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಹೌದು ಸದ್ಯ ನಟಿ ರಶ್ಮಿಕಾ ಮಂದಣ್ಣ ಕುರಿತು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಆಂಧ್ರಪ್ರದೇಶದಲ್ಲಿ ಸಹ ಬಾರಿ ವಿರೋಧ ವ್ಯಕ್ತವಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಅವರನ್ನು ಇಷ್ಟೆಲ್ಲ ಟ್ರೋಲ್ ಮಾಡುತ್ತಿರುತ್ತಿರುವುದಕ್ಕೆ ಮುಖ್ಯ ಕಾರಣ ಏನು ಎನ್ನುವುದನ್ನು ಹುಡುಕಿದಾಗ ಇದಕ್ಕೆ ಕಾರಣ ಸ್ವತಃ ನಟಿಯ ಮಾತುಗಳು.
ನಟಿ ರಶ್ಮಿಕಾ ಮಂದಣ್ಣ ತಮಗೆ ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೊಟ್ಟ ರಿಷಬ್ ಶೆಟ್ಟಿ ಅವರ ಬಗ್ಗೆ ಇತ್ತೀಚೆಗೆ ಮಾತನಾಡಿದ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಸದ್ಯ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ನಂತರ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿ ಸಹ ನಟ ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ನಟಿಯ ಮಾತುಗಳನ್ನು ಕೇಳಿ ಕೇವಲ ಕನ್ನಡಿಗರು ಮಾತ್ರವಲ್ಲದೆ ಬೇರೆ ರಾಜ್ಯದ ಜನರು ಕೂಡ ನಟಿ ರಶ್ಮಿಕಾ ಮೇಲೆ ಕೆಂಡ ಕಾರುತ್ತಿದ್ದಾರೆ. ಸದ್ಯ ಈ ವಿಷಯ ಸಕತ್ ವೈರಲ್ ಆಗುತ್ತಿದೆ.
ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬಾರಿ ಬೇಡಿಕೆ ಇರುವ ನಟಿ ಎಂದರೆ ತಪ್ಪಾಗುವುದಿಲ್ಲ. ನಟಿ ರಶ್ಮಿಕಾ ಅವರಿಗೆ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿ ಬಳಗವಿದೆ. ಆದರೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಗೌರವ ಪೂರಕ ಮಾತುಗಳಿಂದ ಎಲ್ಲರನ್ನೂ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಆಂಧ್ರಪ್ರದೇಶದಲ್ಲಿ ಸಹ ಸಾಕಷ್ಟು ಜನರು ರಶ್ಮಿಕಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗಾದರೆ ಇದು ರಶ್ಮಿಕಾ ಸಿನಿ ಕೇರಿಯರ್ ನ ಅಂತ್ಯಾನ? ಮುಂದೆ ವಿಷಯ ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..