ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಲೆ ಇರುತ್ತದೆ. ನಟಿ ರಶ್ಮಿಕಾ ಮಂದಣ್ಣ ಯಾರು ಊಹಿಸದ ರೀತಿ ದೊಡ್ಡ ಮಟ್ಟದಲ್ಲಿ ಅತಿ ಕಡಿಮೆ ಸಮಯದಲ್ಲಿ ಗುರುತಿಸಿಕೊಂಡ ನಟಿ, ಅವರಿಗೆ ದೇಶದ ಎಲ್ಲೆಡೆ ಸಾಕಷ್ಟು ಅಭಿಮಾನಿ ಬಳಗವಿದೆ.
ಆದರೆ ನಟಿ ರಶ್ಮಿಕಾ ಅವರಿಗೆ ಕರ್ಣಾಟಕದಲ್ಲಿ ಅಭಾನಿಗಳಿಗಿಂತ ಅವರನ್ನು ನೋಡಿ ಕೆಂಡ ಕಾರುವ ಜನರೇ ಜಾಸ್ತಿ ಎನ್ನಬಹುದು, ಒಂದು ರೀತಿ ಇದಕ್ಕೆ ನಟಿ ಸ್ವತಃ ಅವರೇ ಕಾರಣ ಎಂದರೆ ತಪ್ಪಾಗುವುದಿಲ್ಲ. ಕನ್ನಡದ ಸಿನಿಮಾದಿಂದ ತಮ್ಮ ಸಿನಿ ಜರ್ನಿ ಶುರು ಮಾಡಿದ ನಟಿ ರಶ್ಮಿಕಾ ಇದೀಗ ಪ್ಯನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಬೇರೆ ಸಿನಿಮಾರಂಗಕ್ಕೆ ಹೋದ ನಂತರ ನಟಿ ರಶ್ಮಿಕಾ ಮಂದಣ್ಣ ಕನ್ನಡವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾರೆ, ಅಲ್ಲದೆ ತಮಗೆ ಕನ್ನಡ ಬರುವುದಿಲ್ಲ ಎಂದು ಸಾಕಷ್ಟು ಬಾರಿ ಹೇಳುವುದರ ಜೊತೆಗೆ ಬೇರೆ ಭಾಷೆಗಳಿಗೆ ಅವರು ಹೆಚ್ಚು ನೀಡುವುದು ನೆಟ್ಟಿಗರಿಗೆ ಇಷ್ಟವಾಗುತ್ತಿರಲಿಲ್ಲ, ಈ ಕುರಿತು ರಶ್ಮಿಕಾ ಅವರನ್ನು ಸಾಕಷ್ಟು ಬಾರಿ ಟ್ರೊಲ್ ಸಹ ಮಾಡಿದ್ದಾರೆ.
ಇದೀಗ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ ಕಿರಿಕ್ ಪಾರ್ಟಿ ಸಿನಿಮಾ ಕುರಿತು ಉಡಾಫೆ ರೀತಿ ಮಾತನಾಡಿದ್ದರು, ಈ ವಿಡಿಯೋ ನೆಟ್ಟಿಗರ ಮನದಲ್ಲಿ ನಟಿ ರಶ್ಮಿಕಾ ಕುರಿತು ಇನ್ನಷ್ಟು ದ್ವೇಷ ಹುಟ್ಟಿಸಿದೆ. ಅಲ್ಲದೆ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡದ ಸಿನಿಮಾಗಳಿಂದ ಶಾಸ್ವತವಾಗಿ ಹೊರಗೆ ಹಾಕಬೇಕು,
ಎಂದು ಕನ್ನಡಿಗರು ನಿರ್ಧರಿಸಿದ್ದಾರೆ. ಅಲ್ಲದೆ ಈ ಬಗ್ಗೆ ಸೊಸಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಸಹ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಟ್ವಿಟರ್ ನಲ್ಲಿ ಬ್ಯಾನ್ ರಶ್ಮಿಕಾ ಮಂದಣ್ಣ ಟ್ವೀಟ್ ತುಂಬಾ ವೈರಲ್ ಆಗುತ್ತಿದೆ. ಇನ್ನು ಈ ವಿಷಯ ಯಾವ ಹಂತ ತಲುಪುತ್ತದೆಯೋ ಕಾದು ನೋಡಬೇಕಿದೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರು ರಿಷಬ್ ಅವರ ಕುರಿತು ಮಾತನಾಡಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ನನಗೆ ಸರ್ ಬಗ್ಗೆ ತುಂಬಾ ಗೌರವ ಇದೆ. ಅವರು ಯಾವತ್ತೂ ಯಾರನ್ನು ಸಹ ಕೀಳಾಗಿ ಕಾಣುವುದಿಲ್ಲ.
ಅವರು ಎಲ್ಲರನ್ನು ಸಮಾನರಾಗಿ ಕಾಣುತ್ತಾರೆ ಎಂದು ಹೇಳುತ್ತಿರುವ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಸದ್ಯ ನಟಿ ತಮ್ಮ ಸಿನಿಮಾ ಕೆರಿಯರ್ ಬಗ್ಗೆ ಎದುರಿ ಕ್ಷಮೆ ಕೇಳಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..