ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹಾಟ್ ಟಾಪಿಕ್ ಎಂದರೆ ತಪ್ಪಾಗುವುದಿಲ್ಲ. ನಟಿ ಏನೇ ಮಾಡಿದರು ಸಹ ಕೆಲವೊಮ್ಮೆ ಸಾಕಷ್ಟು ಟ್ರೋಲ್ ಆಗುತ್ತಿರುತ್ತಾರೆ. ಆದರೆ ಇದೀಗ ನಟಿಯನ್ನು ಬ್ಯಾನ್ ಮಾಡಲು ಚಿತ್ರರಂಗದವರು ಮುಂದಾಗಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ. ಇಷ್ಟೆಲ್ಲಾ ಹೆಸರು ಹೆಸರು ಪಡೆದುಕೊಳ್ಳಲು ಮುಖ್ಯ ಕಾರಣ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅಂದು ಅವರು ಚಾನ್ಸ್ ಕೊಡದಿದ್ದರೆ ನಟಿ ರಶ್ಮಿಕಾ ಮಂದಣ್ಣ ಯಾರು ಎಂದು ಸಹ ಯಾರಿಗೂ ಗೊತ್ತಿರುತ್ತೀರಲಿಲ್ಲ.
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ನಿಮ್ಮ ಸಿನಿ ಜರ್ನಿ ಶುರುವಾಗಿದ್ದು ಹೇಗೆ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ನಾನು ಟೈಮ್ಸ್ ಆಫ್ ಇಂಡಿಯಾ ಮ್ಯಾಕ್ಸಿನಲ್ಲಿ ಬಂದಿದ್ದೆ. ಆಗ ನನ್ನನ್ನು ಸೋ ಕಾಲ್ಡ್ ಪ್ರೊಡಕ್ಷನ್ ಹೌಸ್ ಅವರು ನೋಡಿ ಸಿನಿಮಾದ ಆಫರ್ ಕೊಟ್ಟರು ಎಂದು ಉಡಾಫೆ ಮಾತುಗಳಲ್ಲಿ ಉತ್ತರಿಸಿದ್ದಾರೆ.
ನಟಿ ರಶ್ಮಿಕಾ ಅವರ ಮಾತುಗಳನ್ನು ಕೇಳಿ ಕನ್ನಡಿಗರು ನಟಿಯ ಮೇಲೆ ಕೆಂಡ ಕಾರುತ್ತಿದ್ದಾರೆ. ಅಲ್ಲದೇ ನಟಿ ರಶ್ಮಿಕಾ ಮಂದಣ್ಣ ಅವರನ್ನು ಕರ್ನಾಟಕದಿಂದ ಬ್ಯಾನ್ ಮಾಡಲು ಮುಂದಾಗಿದ್ದಾರೆ. ಜೊತೆಗೆ ತೆಲುಗು ಸಿನಿಮಾ ರಂಗದಲ್ಲಿ ಸಹ ನಟಿಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಅಷ್ಟೇ ಅಲ್ಲದೆ ಇದೀಗ ತಮಿಳು ಸಿನಿಮಾರಂಗದಲ್ಲಿ ಸಹ ನಟಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಮಾತುಗಳು ಕೇಳಿ ಬರುತ್ತಿದೆ. ಸಧ್ಯ ನಟಿ ರಶ್ಮಿಕಾ ಮಂದಣ್ಣ ತಮಿಳಿನ ದಳಪತಿ ವಿಜಯ್ ಅವರ ವಾರಿಸು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿರುವ ಕಾರಣ ಆ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಕಷ್ಟ ಎನ್ನಲಾಗುತ್ತಿದೆ.
ಇನ್ನು ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಇಷ್ಟೆಲ್ಲ ಟ್ರೋಲ್ ಆಗಲು ಮುಖ್ಯ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಿರುವ ತಮಿಳುನಾಡಿನ ಜನರು. ನಟಿ ರಶ್ಮಿಕಾ ಮಂದಣ್ಣ ಅವರ ವರ್ತನೆ ನೋಡಿ ಅವರು ಸಹ ಬೇಸರಗೊಂಡಿದ್ದಾರೆ. ಅಲ್ಲದೆ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಅವರು ಸಹ ಕಿಡಿಕಾರಿದ್ದಾರೆ.
ವಾರಿಸು ಸಿನಿಮಾದ ನಂತರ ನಟಿ ರಶ್ಮಿಕಾ ತಮಿಳಿನ ಮತ್ತೊಂದು ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಇಷ್ಟೆಲ್ಲ ಸುದ್ದಿ ಆಗುತ್ತಿದ್ದಂತೆ, ನಟಿ ರಶ್ಮಿಕ ಅವರ ಆ ಸಿನಿಮಾ ಅವರ ಕೈ ತಪ್ಪಿ ಹೋಗಿದೆ. ಇದು ಹೀಗೆ ಮುಂದುವರೆಯುತ್ತಾ ಹೋದರೆ ನಟಿ ರಶ್ಮಿಕಾ ಮಂದಣ್ಣ ಅವರ ಸಿರಿ ಕೇರಿಯ ಅಂತ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.