ನಟಿ ಹರಿಪ್ರಿಯಾ ಜೊತೆ ಮದುವೆಗೆ ತಯಾರಾದ ಕನ್ನಡದ ಯುವ ನಟ! ಯಾರದು ಗೊತ್ತಾ ! ಮದುವೆ ಯಾವಾಗ ಗೊತ್ತಾ ನೋಡಿ?..

ಸ್ಯಾಂಡಲವುಡ್

ಸಿನಿಮಾ ರಂಗದಲ್ಲಿ ಸ್ಟಾರ್ ಕಲಾವಿದರು ಪ್ರೀತಿಯಲ್ಲಿ ಬೀಳುವುದು ಹಾಗೆ ಮದುವೆಯಾಗುವುದು ಎಲ್ಲವೂ ಸಹಜ. ಕೆಲವರು ಒದ್ದೆ ಸಿನಿಮಾದಲ್ಲಿ ಒಟ್ಟಾಗಿ ನಟಿಸುವ ವೇಳೆ ಒಬ್ಬರನ್ನು ಒಬ್ಬರು ಪ್ರೀತಿಸಿ ನಂತರ ಮದುವೆಯಾಗಲು ನಿರ್ದಯಿಸಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ.

ಹಾಗೆ ಕೆಲವರು ಯಾವುದೋ ಒಂದು ಸಣ್ಣ ಮಾಧ್ಯಮದ ಮೂಲಕ ಕನೆಕ್ಟ್ ಆಗಿ ನಂತರ ಇಬ್ಬರೂ ಸಹ ಪ್ರೀತಿಯಲ್ಲಿ ಇರುವುದನ್ನು ಸಹ ನಾವು ನೋಡಿದ್ದೇವೆ. ಇದೀಗ ಸ್ಯಾಂಡಲ್ ವುಡ್ನ ಬಹು ಬೇಡಿಕೆಯ ನಟಿ ಹಾಗೂ ಉತ್ತಮ ನಟ ಮದುವೆಯಾಗುತ್ತಿರುವ ವಿಷಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಟ ಸಿಂಹ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ವಿಷಯ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲಾಗುತ್ತಿದೆ. ಹಾಗಾದರೆ ಏನಿದು ವಿಷಯ ನೋಡೋಣ ಬನ್ನಿ..

ನಟಿ ಹರಿಪ್ರಿಯಾ ಇತ್ತೀಚೆಗೆ ತಮ್ಮ ಮೂಗನ್ನು ಚುಚ್ಚಿಸಿಕೊಂಡಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೇಳೆ ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ನಟಿ ಹರಿಪ್ರಿಯ ಅವರ ಕೈ ಹಿಡಿದು ಅವರಿಗೆ ಸಮಾಧಾನ ಮಾಡುತ್ತಾ ಅವರ ತಲೆಯ ಮೇಲೆ ಮುತ್ತು ಕೊಟ್ಟಿದ್ದರು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗಿತ್ತು, ಅಲ್ಲದೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಸಹ ಎಲ್ಲರಲ್ಲೂ ಮೂಡಿತ್ತು. ಇದೀಗ ಆ ವ್ಯಕ್ತಿ ಬೇರೆ ಯಾರು ಅಲ್ಲ ನಟ ವಶಿಷ್ಠ ಎನ್ನಲಾಗುತ್ತಿದೆ. ಇದೀಗ ಈ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇನ್ನು ಇದೀಗ ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಟ ಇಬ್ಬರೂ ಸಹ ಪ್ರೀತಿಯಲ್ಲಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ವೈರಲ್ ಆಗುತ್ತಿದೆ.

ಈ ಬಗ್ಗೆ ಇಷ್ಟೆಲ್ಲಾ ಸುದ್ದಿಗಳು ಪ್ರಚಾರವಾಗುತ್ತಿದ್ದರು ಸಹ ನಟಿ ಹರಿಪ್ರಿಯ ಹಾಗೂ ನಟ ವಶಿಷ್ಟ ಯಾವುದೇ ಸ್ಪಷ್ಟನೆ ನೀಡಿಲ್ಲ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. ಹಾಗೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ.

Leave a Reply

Your email address will not be published. Required fields are marked *