ಸದ್ಯ ಕನ್ನಡ ಚಿತ್ರರಂಗದಲ್ಲಿ ಒಬ್ಬರಾದ ಮೇಲೆ ಒಬ್ಬರಾದ ಮೇಲೆ ಒಬ್ಬರು ಪಟ ನಟಿಯರು ಮದುವೆಗೆ ಮುಂದಾಗುತ್ತಿದ್ದಾರೆ. ಇದೀಗ ನಟಿ ಆದಿತಿ ಪ್ರಭುದೇವ ಅವರು ತಮ್ಮ ಮನೆಯವರು ನೋಡಿದ ಹುಡುಗನ ಜೊತೆಗೆ ಮದುವೆಗೆ ಸಜ್ಜಾಗಿರುವ ವಿಷಯ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ.
ಸದ್ಯ ನಟಿ ಅದಿತಿ ಪ್ರಭುದೇವ ಅವರು ತಮ್ಮ ಮದುವೆ ಕಾರ್ಯಕ್ರಮಗಳಲ್ಲಿ ತುಂಬಾ ಖುಷಿಯಾಗಿದ್ದಾರೆ. ಇನ್ನು ನಟಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಅವರ ಮದುವೆಗೆ ಸಿನಿಮಾರಂಗದ ದೊಡ್ಡ ದೊಡ್ಡ ಕಲಾವಿದರ ಜೊತೆಗೆ ಸಾಕಷ್ಟು ಅಭಿಮಾನಿಗಳು ಸಹ ಭಾಗಿಯಾಗಿದ್ದಾರೆ.
ಕಿರುತೆರೆಯಲ್ಲಿ ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಕನ್ನಿಕೆ ಧಾರಾವಾಹಿಯ ಮೂಲಕ ನಟಿ ಅದಿತಿ ಪ್ರಭುದೇವ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು. ನಂತರ ನಟಿ ಬೆಳ್ಳಿತೆರೆಗೆ ಸಹ ಪಾದಾರ್ಪಣೆ ಮಾಡಿ, ಅಲ್ಲಿಯೂ ಸಹ ಸಾಕಷ್ಟು ಗುರುತಿಸಿಕೊಂಡಿದ್ದಾರೆ.
ಇನ್ನು ಕಳೆದ ವರ್ಷ ನಟಿ ಅದಿತಿ ಪ್ರಭುದೇವ ತಾವು ಮದುವೆಯಾಗುತ್ತಿರುವ ಹುಡುಗನನ್ನು ಸೋಶಿಯಲ್ ಮೀಡಿಯಾದ ಮುಖಾಂತರ ಎಲ್ಲರಿಗೂ ಪರಿಚಯಿಸಿದ್ದರು. ನಟಿ ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಂತೆ, ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿತ್ತು.
ಕೊಡಗಿನ ಉದ್ಯಮಿ ಹಾಗೂ ಕಾಫಿ ತೋಟದ ಮಾಲೀಕ ಯಶಸ್ವಿ ಎನ್ನುವವರ ಜೊತೆ ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ನವೆಂಬರ್ 27ರಂದು ನಟಿ ಅದಿತಿ ಪ್ರಭುದೇವ ಅವರ ಮದುವೆ ಅದ್ದೂರಿಯಾಗಿ ಜರಗಲಿದ್ದು, ಅವರ ಅರಿಶಿಣ ಹಾಗೂ ಮೆಹಂದಿ ಶಾಸ್ತ್ರದ,
ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆನ್ನೆ ತಾನೆ ನಟಿ ಆದಿತಿಯವರ ಅರಿಶಿನ ಶಾಸ್ತ್ರದ ಫೋಟೋಗಳು ಸಖತ್ ವೈರಲ್ ಆಗಿತ್ತು. ಇದೀಗ ನಟಿಯ ಮೆಹಂದಿ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.
ಒಂದು ಫೋಟೋದಲ್ಲಿ ನಟಿ ಅದಿತಿ ಅವರಿಗೆ ಯಶಸ್ವಿಯವರು ಚುಂಬಿಸುತ್ತಿರುವ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಜೋಡಿಗೆ ಸೋಷಿಯಲ್ ಮಿಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..