ಚಂದನವನದ ಬಹುಬೇಡಿಕೆಯ ನಟಿ ಹಾಗೆ ಗ್ಲಾಮರ್ ಬೆಡಗಿ ನಟಿ ಅದಿತಿ ಪ್ರಭುದೇವ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ಕುವರ ಕಾಫಿ ತೋಟದ ಮಾಲೀಕ ಉದ್ಯಮಿ ಉದ್ಯಮಿ ಯಶಸ್ವಿ ಎನ್ನುವರ ಜೊತೆ ನಟಿ ಅದಿತಿ ಪ್ರಭುದೇವ ಇದೀಗ ಅಸೆಮಣೆ ಏರಿದ್ದಾರೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನ ಗಾಯತ್ರಿ ವಿಹಾರದಲ್ಲಿ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ವಿಯವರ ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ವಿ,
ಎಲ್ಲಾ ಸಂಪ್ರದಾಯಗಳನ್ನು ಶಾಸ್ತ್ರೋಕ್ತವಾಗಿ ಮಾಡಿಸಿಕೊಂಡಿದ್ದಾರೆ. ನವೆಂಬರ್ 26 ರಂದು ಅರಿಶಿಣ ಶಾಸ್ತ್ರ, 27 ರಂದು ಮೆಹೆಂದಿ ಹಾಗೂ ಸಂಗೀತ ಜೊತೆಗೆ ಅಂದು ರಾತ್ರಿ ಆರತಕ್ಷತೆ ಅದ್ದೂರಿಯಾಗಿ ನೆರವೇರಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಬಣ್ಣದ ಲೋಕದ ಅನೇಕ ಗಣ್ಯರು ಹಾಜರಾಗಿದ್ದರು.
ಕಿರುತೆರೆಯ ಸಾಕಷ್ಟು ಕಲಾವಿದರ ಜೊತೆಗೆ ಸ್ಯಾಂಡಲ್ವುಡ್ ನ ಅನೇಕ ಗಣ್ಯರು ಅದಿತಿ ಹಾಗೂ ಯಶಸ್ವಿ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇನ್ನು ಈ ಮದುವೆ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿ ಎಲ್ಲರ ಗಮನ ಸೆಳೆದಿದ್ದರು.
ನಟಿ ರಾಧಿಕಾ ಪಂಡಿತ್ ನೀಲಿ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು, ಇನ್ನು ನಟ ರಾಕಿಂಗ್ ಸ್ಟಾರ್ ಯಶ್ ಕಪ್ಪು ಬಣ್ಣದ ಸೂಟ್ ನಲ್ಲಿ ಕಂಗೊಳಿಸಿದ್ದರು. ಇನ್ನು ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ವಿ ಜೋಡಿಗೆ ಶುಭ ಹಾರೈಸಿದ ನಂತರ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳ ಸೆಲ್ಫಿಗೆ ಪೋಸ್ ನೀಡಿದ್ದಾರೆ.
ಇನ್ನು ನಟಿ ಅದಿತಿ ಪ್ರಭುದೇವ ರಾಧಿಕಾ ಪಂಡಿತ್ ಹಾಗೂ ಯಶ್ ಅವರನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಅಲ್ಲದೆ ನಟಿ ರಾಧಿಕಾ ಅವರಿಗೆ ಅಪ್ಪುಗೆ ನೀಡಿ ಅವರ ಕೆನ್ನೆಗೆ ಮುತ್ತು ಕೊಟ್ಟು ಫೋಟೋಗೆ ಪೋಸ್ ನೀಡಿದರು. ಇನ್ನು ಮದುವೆಗೆ ನಟಿ ಮೇಘನಾ ರಾಜ್ ಕೂಡ ಭಾಗಿಯಾಗಿದ್ದು,
ಇದನ್ನು ನೋಡಿದ ನಟಿ ಮೇಘನಾ ರಾಜ್ ನಾಚಿಕೆಯಿಂದ ಸ್ಮೈಲ್ ಮಾಡಿದ್ದಾರೆ. ಇನ್ನು ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..