ನಟಿ ರಶ್ಮಿಕಾ ಮಂದಣ್ಣ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಹ ಭಾರಿ ವಿರೋಧಕ್ಕೆ ಗುರಿಯಾಗುತ್ತಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಯಾರು ಊಹಿಸದ ಮಟ್ಟಿಗೆ ಟ್ರೊಲ್ ಮಾಡಲಾಗುತ್ತಿದೆ.
ನಟಿ ರಶ್ಮಿಕ ಮಂದಣ್ಣ ಅವರು ಇಷ್ಟರ ಮಟ್ಟಿಗೆ ಟ್ರೋಲ್ ಯಾಕೆ ಆಗುತ್ತಿದ್ದಾರೆ, ಎಂದು ಮೂಲಗಳನ್ನು ಹುಡುಕಿದಾಗ, ಕಾಂತಾರ ಸಿನಿಮಾದ ನಿರ್ದೇಶಕರಾದ ರಿಷಬ್ ಶೆಟ್ಟಿ ಅವರೇ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಸಹ ತಮ್ಮ ಸಿನಿಮಾದಲ್ಲಿ ನಟಿಸುವ ಚಾನ್ಸ್ ಕೊಟ್ಟಿದ್ದರು.
ಆದರೆ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡು ನಟಿ ರಶ್ಮಿಕಾ ಮಂದಣ್ಣ ರಿಷಬ್ ಶೆಟ್ಟಿ ಅವರ ಸಹಾಯವನ್ನು ಮರೆತು, ಸೊ ಕಾಲ್ಡ್ ಪ್ರೊಡಕ್ಷನ್ ಹೌಸ್ ಎಂದು ಕರೆದಿರುವುದು ನಿಜಕ್ಕೂ ಎಲ್ಲರಿಗೂ ಬಹಳ ಬೇಸರ ಉಂಟು ಮಾಡಿದೆ. ಇದೀಗ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಬಾಲಿವುಡ್ ನಲ್ಲಿ ಸಹ ವಿರೋಧ ವ್ಯಕ್ತವಾಗುತ್ತಿದೆ.
ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಎಲ್ಲಡೆ ಬಾರಿ ಸದ್ದು ಮಾಡಿದೆ. ಹಿಂದೆ ಎಂದೂ ಯಾವ ಸಿನಿಮಾಗಳು ಸಹ ಮಾಡಿರದ ಧಾಖಲೆ ಬರೆದಿದೆ. ಇನ್ನು ನಟ ನಿರ್ದೇಶಕ ಹಾಗೂ ಬರಹಗಾರ ಕೂಡ ಆಗಿರುವ ನಟ ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಹುಟ್ಟು ಕೊಂಡಿದೆ.
ಇದೀಗ ನಟ ರಿಷಬ್ ಅವರ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಕೇವಲವಾಗಿ ಮಾತನಾಡಿದ್ದು, ನಟಿ ರಷ್ಮಿಕಾ ಮಂದಣ್ಣ ಅವರ ಈ ಗುಣ ಯಾರಿಗೂ ಸಹ ಇಷ್ಟವಾಗುತ್ತಿಲ್ಲ. ಜೊತೆಗೆ ಈ ರೀತಿಯ ಮಾತುಗಳಿಂದ ಅವರ ಮೆಲ್ಲಿದ್ದ ಗೌರವವನ್ನು ಸಹ ಸ್ವತಃ ನಟಿ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಬಾಲಿವುಡ್ ಮಂದಿ ಸಹ ನಟಿ ರಷ್ಮಿಕಾ ಮಂದಣ್ಣ ವಿರುದ್ದ ತಿರುಗಿ ಬಿದ್ದಿದ್ದು, ನಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ನಟಿ ಹಿಂದಿ ಭಾಷೆಯ ಕೆಲವು ಜಾಹೀರಾತುಗಳಲ್ಲಿ ನತಿಸಬೇಕಾಗಿತ್ತು ಎನ್ನಲಾಗಿತ್ತು, ಆದರೆ ಇದೀಗ ನಟಿಯ ವಿರುದ್ಧ ಇಷ್ಟೆಲ್ಲಾ ಮಾತುಗಳನ್ನು ಕೇಳಿ ಆ ಜಾಹೀರಾತುಗಳು ನಟಿಯ
ಜೊತೆಗೆ ಕಾಂಟ್ರಾಕ್ಟ್ ಮುರಿದುಕೊಂಡಿದೆ ಎನ್ನಲಾಗುತ್ತಿದೆ. ಹೀಗೆ ಮುಂದುವರೆದರೆ ನಿಜಕ್ಕೂ ನಟಿ ರಷ್ಮಿಕಾ ಮಂದಣ್ಣ ಅವರ ಸಿನಿ ಕೆರಿಯರ್ ಅಂತ್ಯಕಾಣುವುದರಲ್ಲಿ ಜಾಸ್ತಿ ದಿನಗಳು ಉಳಿದಿಲ್ಲ ಎನ್ನುವ ರೀತಿ ಕಾಣುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..