ಕಾಂತರಾ ಸಿನಿಮಾ ಯಾರು ತಾನೆ ನೋಡಿಲ್ಲ ಹೇಳಿ, ಈ ಸಿನಿಮಾದ ಮೂಲಕ ನಟ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಈ ಇಬ್ಬರ ಜೊತೆಗೆ ಸಿನಿಮಾ ಮಾಡಲು ನಿರ್ದೇಶಕರು ಹಾಗೂ ನಿರ್ಮಾಪಕರು ಸಾಲಿನಲ್ಲಿ ನಿಂತಿದ್ದಾರೆ.
ನಟ ರಿಷಬ್ ಶೆಟ್ಟಿ ಅವರು ಕೊಂಚ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದು, ಅವರು ತಮ್ಮ ಕುಟುಂಬದ ಜೊತೆಗೆ ಕೆಲವು ದಿನಗಳ ಕಾಲ ಸಮಯ ಕಳೆಯಬೇಕು ಎಂದು ನಿರ್ಧರಿಸಿದ್ದಾರೆ. ನಂತರ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡುವುದಾಗಿ ಸಹ ನಟ ರಿಷಬ್ ಶೆಟ್ಟಿ ಹೇಳಿದ್ದಾರೆ.
ಇನ್ನು ನಟಿ ಸಪ್ತಮಿ ಗೌಡ ಅವರಿಗೆ ಇದೀಗ ಸಾಲು ಸಾಲು ಸಿನಿಮಾಗಳ ಆಫರ್ ಗಳು ಹರಿದು ಬರುತ್ತಿದೆ. ಇನ್ನು ಇತ್ತೀಚೆಗೆ ನಟಿ ಸಪ್ತಮಿ ಗೌಡ ಅವರು ಜೂನಿಯರ್ ರೆಬೆಲ್ ಸ್ಟಾರ್ ನಟ ಅಭಿಷೇಕ್ ಅಂಬರೀಶ್ ಅವರ ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.
ನಟ ಅಭಿಷೇಕ್ ಅಂಬರೀಶ್ ಅವರ ಮುಂದಿನ ಸಿನಿಮಾದ ಹೆಸರು ಕಾಳಿ ಆಗಿದ್ದು, ಜೀವನದಲ್ಲಿ ನಟ ಅಭಿಷೇಕ್ ಅಂಬರೀಶ್ ಬಹಳ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಲಿದ್ದಾರೆ ಎಲ್ಲಾಗುತ್ತಿದೆ. ಅಲ್ಲದೆ ಈ ಸಿನಿಮಾಗಾಗಿ ನಟ ಅಭಿಷೇಕ್ ಅಂಬರೀಶ್ ಸಾಕಷ್ಟು ಕಸರತ್ತನ್ನು ಸಹ ಮಾಡುತ್ತಿದ್ದಾರೆ.
ಇನ್ನು ಅಭಿಷೇಕ್ ಅಂಬರೀಶ್ ಅವರ ಕಾಳಿ ಸಿನಿಮಾಗೆ ನಾಯಕಿಯಾಗಿ ನಟಿ ಸಪ್ತಮಿ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿತ್ತು. ಇದೀಗ ಈ ಎಲ್ಲ ಮಾತುಗಳು ನಿಜ ಎನ್ನಲಾಗುತ್ತಿದೆ. ಏಕೆಂದರೆ ನಟಿ ಸಪ್ತಮಿ ಗೌಡ ಹಾಗೂ ನಟ ಅಭಿಷೇಕ್ ಅಂಬರೀಶ್ ಈಗ ತಮ್ಮ ಕಾಳಿ ಸಿನಿಮಾದ ಮುಹೂರ್ತ ನೆರವೇರಿಸಿದ್ದಾರೆ.
ಸದ್ಯ ಯಾರಿಗೂ ತಿಳಿಸದೆ ಅಭಿಷೆಕ್ ಅಂಬರೀಶ್ ಹಾಗೂ ನಟಿ ಸಪ್ತಮಿ ಗೌಡ ಸೇರಿದಂತೆ ಇಡೀ ಕಾಳಿ ಚಿತ್ರತಂಡ ತಮ್ಮ ಸಿನಿಮಾದ ಮುಹೂರ್ತ ನೆರವೇರಿಸಿದ್ದಾರೆ. ಸದ್ಯ ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಇನ್ನು ನಟಿ ಸಪ್ತಮಿ ಗೌಡ ಹಾಗೂ ನಟ ಅಭಿಷೇಕ್ ಅಂಬರೀಶ್ ಅವರ ಕೆಮಿಸ್ಟ್ರಿ ತೆರೆ ಮೇಲೆ ಯಾವ ರೀತಿ ಮೂಡಿ ಬರಲಿದೆ ಎನ್ನುವ ಕುತೂಹಲ ಸಹ ಕಾಡುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.