ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರದಂತೆ i ವಾರವೂ ಕೂಡ ಸೂಪರ್ ಸಂಡೆ ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿಕೊಡಲಾಗಿದೆ. ಇನ್ನು ಈ ವಾರ ಸುದೀಪ್ ಎಲ್ಲಾ ಸ್ಪರ್ಧಿಗಳಿಗೆ ತಮ್ಮ ಮದುವೆಯಾಗುವ ಹುಡುಗ ಅಥವಾ ಹುಡುಗಿಗೆ ಇರಬೇಕಾದ ಕ್ವಾಲಿಟಿ ಏನು ಎನ್ನುವ ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಸ್ಪರ್ಧಿಗಳು ಬಿನ್ನ ವಿಭಿನ್ನವಾಗಿ ಉತ್ತರಿಸಿದ್ದಾರೆ. ಇನ್ನು ಇದೆ ವೇಳೆ ರೂಪೇಶ್ ಶೆಟ್ಟಿ ಅವರಿಗೂ ಸಹ ಈ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಅರ್ಯವರ್ಧನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಸೇರಿ ರೂಪೇಶ್ ಶೆಟ್ಟಿ ಅವರ ಕಾಲೇಳೆದಿದ್ದು, ಮನೆಯವರೆಲ್ಲಾ ಈ ವಿಷಯ ಕೇಳಿ ನಕ್ಕಿದ್ದಾರೆ.
ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ತುಂಬಾ ಆತ್ಮೀಯವಾಗಿದ್ದರು. ಇನ್ನು ಈ ಜೋಡಿ ಕುರಿತು ಸಾಕಷ್ಟು ವಿಷಯ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಅಲ್ಲದೆ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ನಂತರ ರೂಪೇಶ್ ಶೆಟ್ಟಿ ಬಹಳ ಬೇಸರ ಮಾಡಿಕೊಂಡಿದ್ದರು.
ಇದೀಗ ರೂಪೇಶ್ ಶೆಟ್ಟಿ ಮತ್ತೆ ತಮ್ಮ ಹಳೆಯ ಫಾರ್ಮ್ ಗೆ ಬಂದಿದ್ದು, ತಮ್ಮ ಆಟ ಮುಂದುವರೆಸಿದ್ದಾರೆ. ಇನ್ನು ಇದೀಗ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ರೂಪೇಶ್ ಶೆಟ್ಟಿ ಅವರಿಗೆ ನೀವು ಮದುವೆಯಾಗುವ ಹುಡುಗಿ ಹೇಗಿರಬೇಕು ಎನ್ನುವ ಪ್ರಶ್ನೆ ಕೇಳಿದಾಗ, ಇದಕ್ಕೆ ಉತ್ತರಿಸಿದ ರೂಪೇಶ್,
ಕ್ಲೀನ್ ಆಗಿರಬೇಕು, ಸೌಂದರ್ಯ ಇಲ್ಲದೆ ಹೋದರು ಪರವಾಗಿಲ್ಲ, ಒಳ್ಳೆಯ ಗುಣ ಹಾಗೂ ಲಕ್ಷಣ ಇರಬೇಕು ಎಂದಿದ್ದಾರೆ. ಇದಕ್ಕೆ ಸುದೀಪ್ ನೀವು ಹೊರಗಡೆ ಊಟ ಮಾದುವುದು ಜಾಸ್ತಿ ಅಲ್ವಾ ಅದರ ಬಗ್ಗೆ ಪ್ರಶ್ನೆ ಮಾಡಬಾರದು ಎಂದಿದ್ದಾರೆ. ಇದಕ್ಕೆ ರೂಪೇಶ್ ಹೊರಗಡೆ ಊಟಾ ಮಾಡುವುದಿಲ್ಲ ಮನೆಯಿಂದ ಬಾಕ್ಸ್ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.
ಇನ್ನು ರೂಪೇಶ್ ಶೆಟ್ಟಿ ಕಾಲೆಳೆದ ಅರ್ಯವರ್ಧನ್ ಗುರೂಜಿ, ಸರ್ ಇವರಿಗೆ ಹೊರಗಡೆ ಊಟ ಮಾಡುವ ಆಸೆ ತುಂಬಾ ಇದೆ. ಆದರೂ ಸಹ ಇವರಿಗೆ ಸೂಕ್ತ ಹಾಗೂ ಪವರ್ ಫುಲ್ ಅಕ್ಷರ ಎಂದರೆ ಅದು ಎಸ್ ಎಂದಿದ್ದಾರೆ. ಇನ್ನು ಇದೆ ಪ್ರಶ್ನೆ ಮನೆಯ ಇತರ ಸದಸ್ಯರಿಗೂ ಸಹ ಕೇಳಲಾಗಿದೆ.
ಇನ್ನು ಇದಕ್ಕೆ ಬಿನ್ನ ವಿಭಿನ್ನವಾಗಿ ತಮ್ಮ ಮನಸ್ಸಿನಲ್ಲಿರುವ ಲೈಫ್ ಪಾರ್ಟ್ನರ್ ಬಗ್ಗೆ ಎಲ್ಲರ ಎದುರು ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..