ಕಂಚಿನ ಕಂಠ ಅದ್ಭುತ ನಟನೆಯ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಮಿಂಚುತ್ತಿರುವವರು ನಟ ವಶಿಷ್ಠ. ಇನ್ನು ಅದೇ ರೀತಿ ನಟಿ ಹರಿಪ್ರಿಯಾ ಕೂಡ ಅದ್ಭುತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಈ ಜೋಡಿ ಕೈ ಹಿಡಿಯುವ ದಿನ ತುಂಬಾ ದೂರವಿಲ್ಲ ಎನ್ನಲಾಗುತ್ತಿದೆ.
ಇದೀಗ ಈ ಜೋಡಿ ತಮ್ಮ ಮದುವೆಗೆ ದುಬೈನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಜೋಡಿ ದುಬೈನಲ್ಲಿ ಜೊತೆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ.
ಇನ್ನು ಇತ್ತೀಚಿಗಷ್ಟೇ ನಟಿ ಹರಿಪ್ರಿಯಾ ತಮ್ಮ ಮೂಗು ಚುಚ್ಚಿಸಿಕೊಂಡು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಇನ್ನು ಈ ವಿಡಿಯೋದಲ್ಲಿ ನಟಿ ಹರಿಪ್ರಿಯಾ ಜೊತೆಗೆ ಇನ್ನೊಬ್ಬ ವ್ಯಕ್ತಿ ಕೂಡ ಇದ್ದರು.
ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ನಂತರ ಅವರಿಗೆ ಸಮಾಧಾನ ಮಾಡಿ ಅವರ ತಲೆಗೆ ಮುತ್ತು ಕೊಡುತ್ತಿದ್ದರು. ವ್ಯಕ್ತಿ ಯಾರೋ ಏನೋ ಗತಿಹಲ ಎಲ್ಲರಲ್ಲೂ ಸಹ ಮೂಡಿತ್ತು. ಆದರೆ ಇದೀಗ ಅದೆಲ್ಲದಕ್ಕು ಸ್ಪಷ್ಟನೆ ಸಿಕ್ಕಿದೆ. ಆ ವ್ಯಕ್ತಿ ಬೇರೆ ಯಾರು ಅಲ್ಲ ನಟ ವಶಿಷ್ಠ ಎನ್ನಲಾಗುತ್ತಿದೆ.
ಸದ್ಯ ನಟ ವಶಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರ ಕಂಕಣ ಭಾಗ್ಯ ಕೂಡಿ ಬಂದಿದೆ ಎನ್ನಲಾಗುತ್ತಿದೆ. ಇನ್ನು ಇದಕ್ಕೆ ಪೂರಕವೆಂಬಂತೆ ಈ ಇಬ್ಬರೂ ಜೊತೆಗಿರುವ ಫೋಟೋ ಮತ್ತು ವೀಡಿಯೊಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡಿತ್ತು.
ಇನ್ನು ಇದೀಗ ಈ ಜೋಡಿ ಇದೀಗ ಒಟ್ಟಾಗಿ ದುಬೈನ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದು ಇದೀಗ ಈ ಇಬ್ಬರು ತಮ್ಮ ಮದುವೆಗೆ ಶಾಪಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ಈ ಜೋಡಿಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮುದ್ದಾದ ಜೋಡಿ ಎನ್ನುತ್ತಿದ್ದಾರೆ.
ಶೀಘ್ರದಲ್ಲೇ ಈ ಇಬ್ಬರು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ನಟ ವಶಿಷ್ಟ ಆಗಲಿ ಅಥವಾ ನಟಿ ಹರಿಪ್ರಿಯಾ ಆಗಲಿ ಯಾವುದೇ ಅಧಿಕೃತವಾದ ಮಾಹಿತಿ ನೀಡಿಲ್ಲ. ಇನ್ನೂ ಈ ಬಗ್ಗೆ ನಿಮ್ಮ
ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.