ಪತಿಯನ್ನು ಕಳೆದುಕೊಂಡ 5 ತಿಂಗಳಿಗೆ ಮಗಳ ಭವಿಷ್ಯಕ್ಕಾಗಿ ಮತ್ತೊಂದು ಮದುವೆಗೆ ರೆಡಿಯಾದ ನಟಿ ಮೀನಾ?…

ಸ್ಯಾಂಡಲವುಡ್

ದಕ್ಷಿಣ ಸಿನಿಮಾ ರಂಗದ ಬಹು ಬೇಡಿಕೆ ನಟಿಯ ಪೈಕಿ ನಟಿ ಮೀನಾ ಅವರು ಕೂಡ ಒಬ್ಬರು. ಇಂದಿಗೂ ಸಹ ನಟಿ ಮೀನಾ ಅವರ ಬೇಡಿಕೆ ಸಿನಿಮಾರಂಗದಲ್ಲಿ ಕಡಿಮೆಯಾಗಿಲ್ಲ. ನಟಿ ಮೀನಾ ಅವರು ತೆಲುಗು ತಮಿಳು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿ ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ನಟಿ ಮೀನಾ ಅವರ ಬಾಳಲ್ಲಿ ಇತ್ತೀಚಿಗೆ ಯಾರು ಈ ಊಹಿಸದ ರೀತಿ ಬಿರುಗಾಳಿ ಹಬ್ಬಿತ್ತು. ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಈ ವರ್ಷ ಜೂನ್ 28 ರಂದು ಅನಾರೋಗ್ಯದ ಕಾರಣದಿಂದ ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದರು. ಇನ್ನು ಸದ್ಯ ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಮೀನಾ ಅವರಿಗೆ,

ಕುಟುಂಬಸ್ಥರು ಹಾಗೆ ಆಪ್ತರು ಸೇರಿದಂತೆ ಅಭಿಮಾನಿಗಳು ಸಹ ಸಾಂತ್ವಾನ ಹೇಳಿದರು. ನಟಿ ಮೀನಾ ಅವರು ಈ ನೋವಿನಿಂದ ಹೊರ ಬರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಮೀನಾ ಅವರಿಗೆ 11 ವರ್ಷದ ಒಂದು ಮಗಳಿದ್ದು, ಅವರ ಭವಿಷ್ಯದ ದೃಷ್ಟಿಯಿಂದ ನಟಿ ಮೀನಾ,

ಇದೀಗ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಸದ್ಯ ನಟಿ ಮೀನಾ ಅವರು ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅವರು ಆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ನಟಿ ಮೀನಾ ಅವರ ಬಗ್ಗೆ ಇದೀಗ ಮತ್ತೊಂದು ವಿಷಯ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಯಾಗುತ್ತಿದೆ.

ನಟಿ ಮೀನಾ ಅವರು ತಮ್ಮ ಪತಿ ವಿದ್ಯಾಸಾಗರ್ ಅವರನ್ನು ಕಳೆದುಕೊಂಡು ಇನ್ನು 5 ತಿಂಗಳು ಕಳೆದಿಲ್ಲ, ಆಗಲೇ ಅವರ ಎರಡನೇ ಮದುವೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಇನ್ನು ಇದೀಗ ಈ ಬಗ್ಗೆ ಸಾಕಷ್ಟು ಮಾತುಗಳು ಸಹ ಕೇಳಿಬರುತ್ತಿದೆ.

ಮೀನಾ ಹಾಗೂ ಅವರ ಮಗಳ ಭವಿಷ್ಯವನ್ನು ತಲೆಯಲ್ಲಿಟ್ಟುಕೊಂಡು, ಅವರಿಗೆ ಎರಡನೇ ಮದುವೆಯಾಗುವಂತೆ ನಟಿ ಮೀನಾ ಅವರ ಪೋಷಕರು ಹಾಗೂ ಸಂಬಂಧಿಕರು ಒತ್ತಾಯ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನು ಈ ಬಗ್ಗೆ ನಟಿ ಮೀನಾ ಅಥವಾ ಅವರ ಕುಟುಂಬಸ್ಥರು ಯಾವುದೇ ಅಧಿಕೃತವಾದ ಮಾಹಿತಿ ಇನ್ನು ನೀಡಿಲ್ಲ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮೆಗೆ ತಿಳಿಸಿ..

Leave a Reply

Your email address will not be published. Required fields are marked *