ತನ್ನ ಸ್ವಂತ ಮಾವನಿಗೆ ಸವಾಲು ಹಾಕಿದ ಅಳಿಯ! ಹೆಂಡತಿಯನ್ನು ಪಿಎಸ್ಐ ಮಾಡಿ ತೋರಿಸಿದ! ಇವರ ನಿಜ ಜೀವನದ ಕಥೆ ನೀವೇ ನೋಡಿ!..

curious

ಮದುವೆ ಎನ್ನುವುದು ಇಬ್ಬರ ಮನಸ್ಸುಗಳ ಮಿಲನ, ಅಲ್ಲದೆ ಎರಡು ಕುಟುಂಬಗಳ ಮಿಲನ ಸಹ ಹೌದು. ಹೆಣ್ಣು ಮಕ್ಕಳು ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಎಲ್ಲಾ ಕನಸುಗಳು ನನಸಾಗುವುದಿಲ್ಲ. ಮದುವೆಯಾದ ಬಳಿಕ ಸಾಂಸಾರಿಕ ಜೀವನದಲ್ಲಿ ತಮ್ಮನ್ನು,

ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಬಿಡುತ್ತಾರೆ. ಹೆಣ್ಣು ಮಕ್ಕಳು ಎಷ್ಟೇ ಓದಿದ್ದರು ಮದುವೆಯಾದ ಮೇಲೆ ಅವರು ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದು ಬಿಡುತ್ತಾರೆ. ಕೆಲವರಿಗೆ ಕೆಲಸಕ್ಕೆ ಹೋಗುವುದಕ್ಕೆ ಇಷ್ಟವಿದ್ದರೂ ಸಹ ತಮ್ಮ ಕುಟುಂಬದ ಒತ್ತಾಯದ ಮೇಲೆ ತಮ್ಮ ಕನಸುಗಳನ್ನು ಸಮಾಧಿ ಮಾಡಿಬಿಡುತ್ತಾರೆ.

ಆದರೆ ಇದೀಗ ಒಂದು ಜೋಡಿ ಎಲ್ಲ ದಂಪತಿಗಳಿಗೂ ದೊಡ್ಡ ಉದಾಹರಣೆಯಲ್ಲಿ ನೀಡಿದೆ. ಜಯದೀಪಾ ಎನ್ನುವ ವ್ಯಕ್ತಿ ತನ್ನ ಹೆಂಡತಿಗೆ ಮಾಡಿರುವ ಕೆಲಸ ಕೇಳಿದರೆ ನಿಜಕ್ಕೂ ಮೆಚ್ಚುಗೆ ಸೂಚಿಸುತ್ತೀರಾ. ಹಾಗಾದರೆ ಈತ ಮಾಡಿದ್ದಾದರೂ ಏನು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ..

ಜಯದೀಪ ಎನ್ನುವ ಮಹಾರಾಷ್ಟ್ರಕ್ಕೆ ಸೇರಿದ ವ್ಯಕ್ತಿ, ಇದೀಗ ಅದೆಷ್ಟು ಪತಿಯರಿಗೆ ಉದಾಹರಣೆಯಾಗಿ ನಿಂತಿದ್ದಾರೆ. ಚಿಕ್ಕವಯಸ್ಸಿನಿಂದ ಕಷ್ಟಗಳನ್ನೆ ನೋಡಿಕೊಂಡು ಬಂದ ಜಯದೀಪ ಅವರು ತಮ್ಮ ಸ್ವಂತ ದುಡಿಮೆಯಿಂದ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ.

ಅಲ್ಲದೇ ಎರಡು ಬಾರಿ ಎಂಪಿಎಸ್‌ಸಿ ಪರೀಕ್ಷೆಯನ್ನು ಸಹ ಪಾಸ್ ಮಾಡಿದ್ದಾರೆ. ಇನ್ನೂ ಒಂದು ಬಾರಿ ಪಿಎಸ್ಐ ಪದವಿ ಅವರಿಗೆ ಲಭಿಸಿದ್ದು ಮತ್ತೊಂದು ಬಾರಿ ಬೇರೆ ಯಾವುದೋ ಪೋಸ್ಟ್ ಅವರಿಗೆ ದೊರಕಿತ್ತು. ಆದರೆ ಕಾರಣಾಂತರಗಳಿಂದ ಅವರು ಈ ಉದ್ಯಗೆ ಹೋಗಲು ಸಾಧ್ಯವಾಗಲಿಲ್ಲ.

ತಮ್ಮ ಊರಿನಲ್ಲೇ ಹೋಂಡಾ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಜೈ ದೀಪ ತಮ್ಮ ಊರಿನ ಸರಪಂಚಾಗಿ ನೇಮಕಗೊಂಡರು. ಇನ್ನು ಜಯದೀಪ ಅವರು ಕಲ್ಯಾಣಿ ಎಂಬ ಹುಡುಗಿಯನ್ನು ಇಷ್ಟಪಟ್ಟು ಅವರ ಮನೆಗೆ ಮದುವೆಯಾಗಿ ಕೇಳಿದಾಗ ಅವರ ತಂದೆ ಜಯದೀಪ ಸರ್ಕಾರಿ ನೌಕರಿಯನ್ನು ತ್ಯಜಿಸಿರುವುದಕ್ಕೆ ಅವರಿಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳಿದ್ದರು.

ಆದರೆ ಜಯದೀಪ ಅವರ ಮಾವನಿಗೆ ಎರಡು ವರ್ಷಗಳಲ್ಲಿ ಪಿಎಸ್ಐ ಪದವಿ ಬರುವಂತೆ ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದರು. ಅದೇ ರೀತಿ ಕಲ್ಯಾಣಿ ಅವರನ್ನು ಮದುವೆಯಾಗಿ ಅವರ ಹೆಂಡತಿಗೆ ಸ್ವತಹ ಅವರೇ ಪಾಠ ಮಾಡಿ ಎರಡು ವರ್ಷಗಳಲ್ಲಿ ಕಲ್ಯಾಣಿ ಅವರನ್ನು ಪಿಎಸ್ಐ ಮಾಡಿಬಿಟ್ಟರು. ಇನ್ನು ಅವರ ಮಾವನಿಗೆ ಹಾಕಿದ ಹಾಕಿದ ಸವಾಲನ್ನು ಗೆದ್ದು, ಹೆಂಡತಿಯನ್ನು ಸಹ ಪಿಎಸ್ಐ ಆಗಿ ಮಾಡಿರುವ ಜಯದೀಪ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *