ಲಕ್ ಎನ್ನುವುದು ಯಾರಿಗೆ ಯಾವ ರೀತಿ ಕೈ ಹಿಡಿಯುತ್ತದೆ, ಯಾರಿಗೆ ಯಾವ ರೀತಿ ಕೈ ಕೊಡುತ್ತದೋ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಇದೀಗ ಅದೇ ರೀತಿ ದಕ್ಷಿಣ ಸಿನಿಮಾ ರಂಗ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರ ಜೀವನದಲ್ಲಿ ಸಹ ನಡೆಯುತ್ತಿದೆ ಎಂದರೆ ತಪ್ಪಾಗುವುದಿಲ್ಲ.
ಹೌದು ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಅವರ ಲಕ್ ಅವರ ಕೈಬಿಟ್ಟಿದಂತಾಗಿದೆ. ನಟಿ ರಶ್ಮಿಕಾ ಮಂದಣ್ಣ ಒಂದಾದ ಮೇಲೆ ಒಂದು ಸೋಲುಗಳನ್ನು ತಮ್ಮ ಜೀವನದಲ್ಲಿ ಕಾಣುತ್ತಿದ್ದಾರೆ. ಕನ್ನಡ ಸಿನಿಮಾ ರಂಗದಿಂದ ತಮ್ಮ ಸಿನಿ ಜರ್ನಿ ಶುರು ಮಾಡಿ ರಶ್ಮಿಕಾ ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದರು.
ಆದರೆ ಇದೀಗ ನಟಿ ರಶ್ಮಿಕಾ ಅವರನ್ನು ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರಗಳಿಂದ ಬ್ಯಾನ್ ಮಾಡಲಾಗುತ್ತಿದೆ. ತನ್ನ ಸಿನಿ ಕೆರಿಯರ್ ಶುರು ಮಾಡಲು ಒಂದು ಚಾನ್ಸ್ ಕೊಟ್ಟ ನಟ ರಿಷಬ್ ಶೆಟ್ಟಿ ಅವರನ್ನು ಕಡೆಗಣಿಸಿದ ಕಾರಣ, ಇದೀಗ ನಟಿ ರಶ್ಮಿಕಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ತಾನು ಸಿನಿ ಜರ್ನಿ ಶುರು ಮಾಡಿದ, ಸಂಸ್ಥೆಯ ಹೆಸರನ್ನು ಹೇಳದಿರುವ ಕಾರಣ ನಟಿ ರಶ್ಮಿಕಾ ಮಂದಣ್ಣ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಟ್ರೊಲ್ ಮಾಡಲಾಗಿತ್ತು. ಅಲ್ಲದೆ ಅವರನ್ನು ಕನ್ನಡ ಸಿನಿಮಾಗಳಿಂದ ಶಾಶ್ವತವಾಗಿ ಬ್ಯಾನ್ ಮಾಡಲು ಕನ್ನಡಿಗರು ಮುಂದಾಗಿದ್ದರು.
ಈ ವಿಷಯ ವೈರಲ್ ಆಗುತ್ತಿದ್ದಂತೆ, ನಟಿ ರಶ್ಮಿಕಾ ಮಂದಣ್ಣ ಅವರನ್ನು ತೆಲುಗು ಹಾಗೂ ತಮಿಳು ಸಿನಿಮಾಗಳಿಂದ ಸಹ ಹೊರಹಾಕಲಾಗಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ವೈರಲಾಗುತ್ತಿದೆ. ಇನ್ನು ಇದೀಗ ಇದೇ ಕಾರಣದಿಂದ ಪ್ರತಿಷ್ಠಿತ ಕಂಪನಿಯರು ರಶ್ಮಿಕಾ ಅವರನ್ನು ನಿಂದ ತೆಗೆದುಹಾಕಿದ್ದಾರೆ ಎನ್ನಲಾಗುತ್ತಿದೆ.
ನಟಿ ರಶ್ಮಿಕಾ ಮಂದಣ್ಣ ಒಂದು ಪ್ರತಿಷ್ಠಿತ ಆಭರಣ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದರು, ಆದರೆ ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗದಿಂದ ಆಗುತ್ತಿದ್ದಾರೆ ಎನ್ನುವ ವಿಷಯ ವೈರಲ್ ಆಗುತ್ತಿದ್ದಂತೆ. ನಟಿ ರಶ್ಮಿಕಾ ಮಂದಣ್ಣ ಅವರನ್ನು ಆಭರಣ ಸಂಸ್ಥೆ ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಬದಲಿಗೆ ನಟಿ ತ್ರಿಶಾ ಅವರನ್ನು ಆಭರಣದ ಸಂಸ್ಥೆ ಬ್ರಾಂಡ್ ಅಂಬಾಸೆಡರ್ ಆಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.