ಬಣ್ಣದ ಲೋಕದಲ್ಲಿ ತಮ್ಮ ತಂದೆ ತಾಯಿ ಹಾದಿಯನ್ನೇ ಮಕ್ಕಳು ಸಹ ಅನುಸರಿಸುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಇನ್ನು ತಂದೆ ತಾಯಿ ದೊಡ್ಡ ಕಲಾವಿದರಾಗಿದ್ದರೆ, ಅವರ ಮಕ್ಕಳು ಸಹ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟು, ಸಾಕಷ್ಟು ಜನಪ್ರಿಯತೆ ಪಡೆದುಕೊಂಡು, ತಮ್ಮ ಪೋಷಕರು ಹೆಸರನ್ನು ಉಳಿಸುವುದು ಸಹಜ.
ಇನ್ನು ಅದೇ ರೀತಿ ಇದೀಗ ಕನ್ನಡ ಚಿತ್ರರಂಗದ ಸ್ಟಾರ್ ಕಲಾವಿದರ ಮಕ್ಕಳು ಒಬ್ಬರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ತಂದೆ ಅಥವಾ ತಾಯಿ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರೆ, ಅದನ್ನು ಇದೀಗ ಅವರ ಮಕ್ಕಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಕನ್ನಡ ಚಿತ್ರರಂಗದ ಲವ್ಲಿ ಸ್ಟಾರ್ ಎಂದೇ ಕ್ಯಾತಿ ಪಡೆದಿರುವ ಪ್ರೇಮ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದ್ಭುತ ನಟ ಹಾಗೂ ಅದ್ಭುತ ತಂದೆ ಕೂಡ ಹೌದು. ಇದೀಗ ನಟ ಲವ್ಲಿ ಸ್ಟಾರ್ ಪ್ರೇಮ್ ಅವರ ಮಗಳು ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಪ್ರೇಮ್ ಅವರ ಮಗಳು ಅಮೃತಾ ಪ್ರೇಮ್ ಇತ್ತೀಚೆಗೆ ಕೆಲವು ಫೋಟೋ ಶೂಟ್ ಮಾಡಿಸಿ ಎಲ್ಲರ ಘಮನ ಸೆಳೆದಿದ್ದರು. ಇನ್ನು ಇದೀಗ ಅವರು ಡಾಲಿ ಧನಂಜಯ ಅವರ ಟಗರು ಪಾಲ್ಯ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾವನ್ನು ಉಮೇಶ್ ಕೆ ಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದು,
ಅಮೃತಾ ಅವರು ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾದ ಅವರ ಫರ್ಸ್ ಲುಕ್ ಸಹ ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಇನ್ನು ಇದೀಗ ಈ ಸಿನಿಮಾದ ಪ್ರೆಸ್ ಕಾನ್ಫರೆನ್ಸ್ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಅಮೃತಾ ಪ್ರೇಮ್ ಸಹ ಭಾಗಿಯಾಗಿದ್ದಾರೆ.
ಇನ್ನು ಈ ವೇಳೆ ಅಮೃತಾ ಅವರು ಸಿನಿಮಾದ ಶೂಟಿಂಗ್ ವೇಳೆ ತಮ್ಮ ಎಕ್ಸ್ಪೀರಿಯೆನ್ಸ್ ಶೇರ್ ಮಾಡಿಕೊಂಡಿದ್ದಾರೆ. ನಾನು ಯಾವತ್ತೂ ಸಿನಿಮಾರಂಗಕ್ಕೆ ಬರ್ತೀನಿ ಎಂದು ಕೊಂಡಿರಲಿಲ್ಲ. ಆದರೆ ನನಗೊಂದು ಚ್ಯನ್ಸ್ ಕೊಟ್ಟ ಧನಂಜಯ ಸರ್ ಗೆ ತುಂಬಾ ಥ್ಯಾಂಕ್ಸ್ ಎಂದಿದ್ದಾರೆ.
ಹಾಗೆ ಸಿನಿಮಾ ಸೆಟ್ ನಲ್ಲಿ ಮೊದಲ ದಿನದಿಂದಲೂ ನನಗೆ ಅದು ಮನೆ ರೀತಿಯೆ ಫೀಲ್ ಮಾಡಿಸಿದರು. ನನಗೆ ಯಾವುದೇ ರೀತಿ ಕಷ್ಟ ಆಗದೆ ಇರುವ ರೀತಿ ನೋಡಿಕೊಂಡರು ಎಂದಿದ್ದಾರೆ. ಇನ್ನು ನಟ ಡಾಲಿ ಧನಂಜಯ ಅವರು ಇದೇ ವೇಳೆ ಅಮೃತಾ ಅವರ ಕಿವಿಯಲ್ಲಿ ಏನೋ ಹೇಳಿದ್ದಾರೆ. ಇದೀಗ ಧನಂಜಯ ಹೇಳಿದ್ದೇನು ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ. ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..