ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ನಮ್ಮ ಜೊತೆಗಿಲ್ಲ, ಅಂತಹ ಅದ್ಭುತ ಮನುಷ್ಯ ಆ ದೇವರಿಗೆ ಕೂಡ ಬಹಳ ಪ್ರಿಯವಾಗಿದ್ದು, ಆತ ತನ್ನ ಜೊತೆಗೆ ಇರಬೇಕು ಎಂದು ಆ ದೇವರು ಅಪ್ಪು ಅವರನ್ನು ತನ್ನ ಬಳಿ ಇಷ್ಟು ಬೇಗ ಕರೆದುಕೊಂಡು ಹೋಗಿಬಿಟ್ಟ ಎಂದರೆ ತಪ್ಪಾಗುವುದಿಲ್ಲ.
ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಈಗಾಗಲೇ ಒಂದು ವರ್ಷ ಕಳೆದು ಹೋಗಿದೆ. ಇತ್ತೀಚೆಗೆ ಅಪು ಅವರ ವರ್ಷದ ಪುಣ್ಯ ತಿಥಿಯನ್ನು ಅದ್ದೂರಿಯಾಗಿ ಮಾಡಲಾಗಿತ್ತು. ಇನ್ನು ಈ ಪುಣ್ಯ ಕಾರ್ಯಕ್ರಮಕ್ಕೆ ಅದೆಷ್ಟೋ ಸಾವಿರಾರು ಜನರು ಅಪ್ಪು ಸ-ಮಾಧಿಗೆ ಭೇಟಿ ನೀಡಿದ್ದರು.
ಅಪ್ಪು ಅವರ ಜೊತೆಗೆ ನೂರು ಕಾಲ ಬಾಲಿಬದುಕಬೇಕು ಎನ್ನುವ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಅಶ್ವಿನಿ ಅವರು ಅಪ್ಪು ಅವರನ್ನು ಮದುವೆಯಾದರು. ಅಪ್ಪು ಅವರು ಅಶ್ವಿನಿ ಅವರ ಸಹಜ ಗುಣ ನೋಡಿ ಅವರನ್ನು ಮನಸಾರೆ ಪ್ರೀತಿಸಿದ್ದರು. ಇನ್ನು ಅಶ್ವಿನಿ ಅವರು ಸಹ ಅಪ್ಪು ಅವರನ್ನು ಅವರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರು.
ಅಪ್ಪು ಹಾಗೂ ಅಶ್ವಿನಿ ಅವರು ತಮ್ಮ ಪ್ರೀತಿಯನ್ನು ತಮ್ಮ ಮನೆಯವರಿಗೆ ಒಪ್ಪಿಸಿ, ಎಲ್ಲರ ಸಮುಖದಲ್ಲಿ ಬಹಳ ಅದ್ದೂರಿಯಾಗಿ ಮದುವೆಯಾದರು. ಇನ್ನು ಅಶ್ವಿನಿ ಹಾಗೂ ಅಪ್ಪು ಅವರು ಡಿಸೆಂಬರ್ 1 ರಂದು 1991 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಈ ಮದುವೆ ಸಮಾರಂಭಕ್ಕೆ ಸಾಕಷ್ಟು ಮಂದಿ ಭಾಗಿಯಾಗಿದ್ದರು.
ಇನ್ನು ನೆನ್ನೆ ಡಿಸೆಂಬರ್ 1 ಅಪ್ಪು ಹಾಗೂ ಅಶ್ವಿನಿ ಅವರ ಮದುವೆ ವಾರ್ಷಿಕೋತ್ಸವ, ಇನ್ನು ಅಪ್ಪು ಹಾಗೂ ಅಶ್ವಿನಿ ಅವರು ಮದುವೆಯಾಗಿ 31 ವರ್ಷಗಳೇ ಕಳೆದು ಹೋಗಿದೆ. ಪ್ರತಿ ವರ್ಷ ಅಪ್ಪು ಅವರು ಅಶ್ವಿನಿ ಅವರಿಗೆ ತಮ್ಮ ಮದುವೆ ವಾರ್ಷಿಕೋತ್ಸವದ ದಿನ ಸರ್ಪ್ರೈಸ್ ನೀಡಿ, ಅವರ ಜೊತೆಗೆ ಸಮಯ ಕಳೆಯುತ್ತಿದ್ದರು.
ಆದರೆ ಈ ವರ್ಷ ಅದು ಸಾಧ್ಯವಿಲ್ಲ. ಇನ್ನು ಅಪ್ಪು ಇಲ್ಲದೆ ಇರುವ ನೆನಪಿನಲ್ಲಿ ಇಂದಿಗೂ ಸಹ ಅಶ್ವಿನಿ ಅವರು ಕೊರಗುತ್ತಿದ್ದಾರೆ. ಇನ್ನು ಅಪ್ಪು ಹಾಗೂ ಅಶ್ವಿನಿ ಅವರು ಕಳೆದ ವರ್ಷ ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಕೆಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಇದೀಗ ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..