ಹಿರಿಯ ನಟಿ ತಾರಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಟಿ ತಾರಾ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡಿಗೆ ಮಾತುಗಳಲ್ಲಿ ಹೇಳಲು ಸಾದ್ಯವಿಲ್ಲ. ಅದೆಷ್ಟೋ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿರುವ ನಟಿ ತಾರಾ ಇಂದಿಗೂ ಸಹ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿ ಎಂದರೆ ತಪ್ಪಾಗುವುದಿಲ್ಲ.
ನಟಿ ತಾರಾ ಅವರು ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಅದೆಷ್ಟೋ ಸ್ಟಾರ್ ಕಲಾವಿದರ ಜೊತೆಗೆ ನಟಿ ತಾರಾ ಅವರು ತೆರೆ ಹಂಚಿಕೊಂಡಿದ್ದಾರೆ.
ಇನ್ನು ಈಗಿನ ನಟ ಡಾಲಿ ಧನಂಜಯ, ಲವ್ಲಿ ಸ್ಟಾರ್ ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್, ಸೇರಿದಂತೆ ಹಲವಾರು ಯಂಗ್ ನಟರ ಜೊತೆಗೆ ಸಹ ನಟಿ ತಾರಾ ಅವರು ಅಮ್ಮನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಕಿರುತೆರೆ ಲೋಕದಲ್ಲಿ ಸಹ ನಟಿ ತಾರಾ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಹೌದು ನಟಿ ತಾರಾ ಅವರು ಹಿರಿತೆರೆ ಜೊತೆಗೆ ಕಿರುತೆರೆ ಲೋಕದಲ್ಲಿ ಸಹ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ನಟಿ ತಾರಾ ಅವರು ಸೃಜನ್ ಲೋಕೇಶ್ ಅವರ ಜೊತೆಗೆ ಸೇರಿ ಜಡ್ಜ್ ಆಗಿ ಸಹ ಕಾಣಿಸಿಕೊಂಡಿದ್ದಾರೆ.
ಇನ್ನು ಇದೀಗ ನಟಿ ತಾರಾ ಅವರು ಪ್ರೇಮ್ ಅವರ ಮಗಳು ನಟಿಸಿರುವ ಹಾಗೆ ಡಾಲಿ ಧನಂಜಯ ನಿರ್ಮಾಣದ ಜೊತೆಗೆ ಅಭಿನಯಿಸಿರುವ ಟಗರು ಪಲ್ಯ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಈ ಬಗ್ಗೆ ನಟಿ ತಾರಾ ಅವರು ಮಾತನಾಡಿದ್ದು, ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಟಗರು ಪಲ್ಯ ಎಂದರೆ ಏನು ಎಂದು ನಾನು ಕೇಳಿದಾಗ ಮಟನ್ ಚಾಪ್ಸ್ ಅನ್ನು ನಾವು ಟಗರು ಪಲ್ಯ ಎಂದು ಕನ್ನಡದಲ್ಲಿ ಕರೆಯುತ್ತೇವೆ ಎಂದಾಗ, ನಾನು ಹೌದಲ್ವಾ ಈಗೆಲ್ಲಾ ನಾವು ಈ ರೀತಿಯ ಹೆಸರುಗಳನ್ನು ಉಪಯೋಗಿಸುವುದಿಲ್ಲ ಎಂದು ಹಾಗೆ ಈ ಬಗ್ಗೆ ಹಾಸ್ಯ ಮಾಡಿದ್ದಾರೆ.
ಮೊದಲೆಲ್ಲಾ ನಾವು ಮನೆಯಲ್ಲಿ ಹೊರಗೆ ಹೋಗುತ್ತಿದ್ದೆವು, ಈಗೆಲ್ಲಾ ನಾವು ಹೋಟೆಲ್ ಗಳಲ್ಲಿ ತಿಂದು ಮನೆಗೆ ಬರುತ್ತೇವೆ ಎಂದು ನಕ್ಕಿದ್ದಾರೆ. ಇನ್ನು ಮಾತು ಮುಂದುವರೆಸಿದ ತಾರಾ ಅವರು ಧನಂಜಯ ನಿರ್ಮಾಣದಲ್ಲಿ ಹೀಗೆ ಇನ್ನಷ್ಟು ಸಿನಿಮಾಗಳು ಬರಲಿ, ಹಾಗೆ ಅವರು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಆಶೀರ್ವದಿಸಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…