ಅಪ್ಪು ಅಶ್ವಿನಿ ಮದುವೆಯ ದಿನದಂದು ವೈರಲ್ ಆಯ್ತು ಅವರ ಮದುವೆಯ ಆಮಂತ್ರಣ ಪತ್ರ! ಒಮ್ಮೆ ನೀವೇ ನೋಡಿ!…

ಸ್ಯಾಂಡಲವುಡ್

ಅಪ್ಪು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅಪ್ಪು ಅವರಿಗೆ ಸರಳವಾಗಿ ಬದುಕುವುದು ಎಂದರೆ ತುಂಬಾ ಇಷ್ಟ. ಇಂದಿಗೂ ಸಹ ಅಪ್ಪು ಅವರು ಆಡಂಬರದ ಬದುಕಿಗಾಗಿ ಆಸೆ ಪಟ್ಟವರು ಅಲ್ಲ. ಸದಾ ಸರಳ ವ್ಯಕ್ತಿತ್ವದ ಮೂಲಕ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅದೆಷ್ಟೋ ಮನೆ ಬೆಳಗಿದ್ದಾರೆ ಎಂದರೆ ತಪ್ಪಾಗಲಾರದು.

ಎಲ್ಲಾ ಹೆಣ್ಣು ಮಕ್ಕಳಿಗೂ ತಮ್ಮ ಮದುವೆಯ ದಿನ ಬಹಳ ವಿಶೇಷ. ಪತಿಯ ಜೊತೆಗೆ ತಮ್ಮ ಮದುವೆ ದಿನದಂದು ದೇವಸ್ಥಾನಕ್ಕೆ ಹೋಗಿ, ಕೊಂಚ ಸಮಯ ಪತಿಯ ಜೊತೆಗೆ ಕುಳಿತು ಮಾತನಾಡಿ ನಂತರ ಇಬ್ಬರೂ ಒಟ್ಟಿಗೆ ಊಟ ಮಾಡಿ ಆ ಇಡೀ ದಿನ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾರೆ.

ಅದರಂತೆ ಅಪ್ಪು ಹಾಗೂ ಅಶ್ವಿನಿ ಪುನೀತ್ ಅವರು ಸಹ ಪ್ರತಿ ವರ್ಷ ತಮ್ಮ ಮದುವೆ ವಾರ್ಷಿಕೋತ್ಸವದ ದಿನದಂದು ಯಾವುದೇ ಆಡಂಬರ ವಿಲ್ಲದೆ ಸರಳವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ, ಅರ್ಚನೆ ಮಾಡಿಸಿ ನಂತರ ಇಬ್ಬರೂ ಒಟ್ಟಾಗಿ ಕೂತು ಊಟ ಮಾಡಿ, ಸಾಕಷ್ಟು ಮಾತನಾಡುತ್ತಿದ್ದರಂತೆ.

ಆದರೆ ಈ ವರ್ಷ ಅಪ್ಪು ಅವರು ನಮ್ಮ ಜೊತೆಗಿಲ್ಲ, ಅಪ್ಪು ಅವರು ಇಲ್ಲದೆ ಇದೀಗ ಮೊದಲ ವರ್ಷ ಅಶ್ವಿನಿ ಅವರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ವಿಷಯ ನಿಜಕ್ಕೂ ಅದೆಷ್ಟೋ ಅಪ್ಪು ಅಭಿಮಾನಿಗಳಿಗೆ ಬಹಳ ಬೇಸರ ತಂದಿದೆ.

ಈ ಡಿಸೆಂಬರ್ 1 ಕ್ಕೆ ಅಪ್ಪು ಹಾಗೂ ಅಶ್ವಿನಿ ಅವರು ಮದುವೆಯಾಗಿ 23 ವರ್ಷಗಳು ಕಳೆಯುತ್ತವೆ. ಪ್ರತಿವರ್ಷ ಅಪ್ಪು ಅವರು ಅಶ್ವಿನಿ ಅವರಿಗೆ ಈ ದಿನ ದೊಡ್ಡ ಸರ್ಪ್ರೈಸ್ ನೀಡುತ್ತಿದ್ದರು. ಆದರೆ ಈ ವರ್ಷ ತಪ್ಪು ಇಲ್ಲದ ಈ ದಿನವನ್ನು ನೆನೆದು ಅಶ್ವಿನಿ ಅವರು ಕಣ್ಣೀರು ಹಾಕಿದ್ದಾರೆ.

ಇದೀಗ ಅಪ್ಪು ಹಾಗೂ ಅಶ್ವಿನಿಯವರ ಮದುವೆಯ ಆಮಂತ್ರಣ ಪತ್ರ ಸದ್ಯ ವೈರಲ್ ಆಗುತ್ತಿದೆ. ಅಪ್ಪು ಹಾಗೂ ಅಶ್ವಿನಿ ಅವರ ಮದುವೆ ಆಮಂತ್ರಣ ಪತ್ರ ನೋಡಲು ಬಹಳ ಸರಳವಾಗಿದ್ದು ಡಿಸೆಂಬರ್ 1 1999 ರಂದು ಅಶ್ವಿನಿ ಹಾಗೂ ಅಪ್ಪು ಗುರು ಹಿರಿಯರ ಸಮುಖದಲ್ಲಿ ಜೀವನಕ್ಕೆ ಕಾಲಿಟ್ಟಿದ್ದರು.

ಸದ್ಯ ಇವರ ಮದುವೆ ಆಮಂತ್ರಣ ಪತ್ರ ವೈರಲಾಗುತ್ತಿದ್ದು ಇದನ್ನು ನೋಡಿದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಸ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *