ದೈವದ ಪಾತ್ರ ಮಾಡಿ ಕೋಟಿ ಕೋಟಿ ದುಡ್ಡು ಮಾಡಿಕೊಂಡ ನೀವು ಇದನ್ನು ಹೇಳಬಾರದು; ರಿಷಬ್‌ಗೆ ಚೇತನ್ ಟಾಂಗ್!

ಸ್ಯಾಂಡಲವುಡ್

ನಟ ಚೇತನ್ ಅಹಿಂಸಾ ಕನ್ನಡ ಚಿತ್ರರಂಗದ ಅದ್ಭುತ ನಟ ಮಾತ್ರವಲ್ಲ ಒಬ್ಬ ಸಾಮಾಜಿಕ ಕಾರ್ಯಕರ್ತ ಸಹ ಹೌದು. ಚೇತನ್ ಅವರು ಆಗಾಗ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸೋಶಿಯಲ್ ವಿಡಿಯಾದಲ್ಲಿ ಸಾಕಷ್ಟು ಸುದ್ದಿ ಆಗುತ್ತಿರುತ್ತಾರೆ. ಇನ್ನು ಕೆಲವರು ನಟನಿಗೆ ಬೆಂಬಲ ಕೊಟ್ಟರೆ ಇನ್ನು ಕೆಲವರು ಟೀಕಿಸಿರುವುದು ಸಹ ಉಂಟು.

ಇಡೀ ಭಾರತ ಚಿತ್ರರಂಗವೇ ಮೆಚ್ಚಿ ಸೈ ಎನಿಸಿಕೊಂಡಿರುವ ಕಾಂತಾರ ಸಿನಿಮಾದ ಬಗ್ಗೆ ನಟ ಚೇತನ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಇನ್ನು ಇದೀಗ ಮತ್ತೊಮ್ಮೆ ನಟ ಚೇತನ್ ಕುಮಾರ್ ನಟ ರಿಷಬ್ ಶೆಟ್ಟಿ ಹಾಗೂ ಕಾಂತಾರ ಸಿನಿಮಾ ಕುರಿತು ಟ್ವೀಟ್ ಮಾಡಿದ್ದಾರೆ.

ಹೌದು ಕಾಂತಾರ ಸಿನಿಮಾದಲ್ಲಿ ಭೂತಾರಾಧನೆಯನ್ನು ನಮ್ಮ ಹಿಂದೂ ಸಂಸ್ಕೃತಿ ಎಂದು ತೋರಿಸಲಾಗಿದೆ. ಇದರ ವಿರುದ್ಧ ನಟ ಚೇತನ್ ಕುಮಾರ್ ಧ್ವನಿ ಎತ್ತಿದರು. ಭೂತಾರಾಧನೆ ನಮ್ಮ ಹಿಂದೂ ಸಂಸ್ಕೃತಿಗೆ ಸೇರಿದಲ್ಲ. ಈ ರೀತಿ ಯಾವುದೇ ಒಂದು ವಿಷಯವನ್ನು ತಿಳಿಯದೆ ಅದರ ಬಗ್ಗೆ ತಪ್ಪು ತಪ್ಪಾಗಿ ಮಾತನಾಡಬೇಡಿ ಎಂದು ಚೇತನ್ ಟ್ವೀಟ್ ಮಾಡಿದ್ದರು.

ಈ ಮೂಲಕ ಅವರು ಕಾಂತಾರ ಸಿನಿಮಾ ಹಾಗೂ ರಿಷಬ್ ಶೆಟ್ಟಿ ವಿರುದ್ದ ಮಾತನಾಡಿದ್ದರು. ಇನ್ನು ನಟ ಚೇತನ್ ಕುಮಾರ್ ಅವರ ಟೈಟ್ ಗೆ ಕಾಂತಾರ ಅಭಿಮಾನಿಗಳಿಂದ ಬಾರಿ ಆಕ್ರೋಶ ಸಹ ವ್ಯಕ್ತವಾಗಿತ್ತು. ಇನ್ನು ಇದೀಗ ಚೇತನ್ ಕುಮಾರ್ ಅವರು ರಿಷಬ್ ಶೆಟ್ಟಿ ವಿರುದ್ದ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.

ಹೌದು ನಟ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ದೈವರಾಧನೆ ವೇಷ ಧರಿಸಿ ಯಾವುದೇ ರೀ ಮಾಡಬೇಡಿ ಎಂದಿದ್ದರು. ಇನ್ನು ಮಾತುಗಳನ್ನು ಕುರಿತು ನಟ ಚೇತನ್ ಅಹಿಂಸಾ ಅವರು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ನಟ ರಿಷಬ್ ಶೆಟ್ಟಿ ಅವರನ್ನು ಟೀಕಿಸಿದ್ದಾರೆ.

ಆದಿವಾಸಿಗಳ ಸಂಸ್ಕೃತಿಯನ್ನು ಕದ್ದು ಹಿಂದೂ ಧರ್ಮದ ಸಂಸ್ಕೃತಿ ಎಂದು ಸುಳ್ಳು ಹೇಳಿ ನೀವು ಅದನ್ನು ನಿಮ್ಮ ಸಿನಿಮಾದಲ್ಲಿ ತೋರಿಸಿ ಕೋಟಿ ಕೋಟಿ ಕೊಳ್ಳೆ ಹೊಡೆಯಬಹುದು. ಆದರೆ ಈ ರೀತಿ ಬೇರೆಯವರು ಮಾಡಿದರೆ ನಿಮಗೆ ಸಮಸ್ಯೆ ಎಂದು ಟೀಕಿಸುವ ರೀತಿ ನಟ ಚೇತನ್ ಅಹಿಂಸಾ ಟ್ವೀಟ್ ಮಾಡಿದ್ದಾರೆ.

ಸದ್ಯ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರ ಆಗುತ್ತಿದೆ. ಇನ್ನು ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ಶುರುವಾಗಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *