ಶಿವ ರಾಜ್ ಕುಮಾರ್ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಶಿವಣ್ಣ ಇಂದಿಗೂ ಸಹ ಯಾವ ಯಂಗ್ ಹೀರೋಗಳಿಗೆ ಕಡಿಮೆ ಇಲ್ಲದಂತೆ ನಟಿಸುತ್ತಾರೆ. ಇನ್ನು ಶಿವ ರಾಜ್ ಕುಮಾರ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ.
ಶಿವಣ್ಣ ಅವರು ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಮೊದಲು ಬಾಲನಟನಾಗಿ ನಟಿಸಿದ್ದರು. ನಂತರ ಶಿವಣ್ಣ ಅವರು ಆನಂದ್ ಸಿನಿಮಾದಲ್ಲಿ ಮೊದಲು ನಾಯಕನಟನಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದರು. ನಂತರ ಶಿವಣ್ಣ ತಿರುಗಿ ನೋಡಲೇ ಇಲ್ಲ.
ಜನುಮದ ಜೋಡಿ, ಜೋಗಿ, ಆನಂದ್, ಓಂ, ನಮ್ಮೂರ ಮಂದಾರ ಹೂವೆ, ಚಿಗುರಿದ ಕನಸು ನಂತರ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟ ಶಿವ ರಾಜ್ ಕುಮಾರು ಅವರು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಇಂದಿಗೂ ಸಹ ಈ ಸಿನಿಮಾಗಳನ್ನು ಅಭಿಮಾನಿಗಳು ಬಹಳ ಇಷ್ಟ ಪಟ್ಟು ನೋಡುತ್ತಾರೆ.
ಇನ್ನು ಇತ್ತೀಚೆಗೆ ಶಿವಣ್ಣ ಅವರು ತಮಿಳು ಸಿನಿಮಾರಂಗಕ್ಕೆ ಸಹ ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿತ್ತು. ಶಿವಣ್ಣ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇನ್ನು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರಕಿಲ್ಲ.
ಇನ್ನು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ಅವರ ವೇದ ಸಿನಿಮಾಸ್ ಬಗ್ಗೆ ಎಲ್ಲೆಡೆ ಚರ್ಚೆಗಳು ಕೇಳಿ ಬರುತ್ತಿದೆ. ಹೌದು ನಟ ಶಿವಣ್ಣ ಅವರ ವೇದ ಸಿನಿಮಾದ ಫರ್ಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡಿತ್ತು. ಇನ್ನು ಇದೀಗ ವೇದ ಸಿನಿಮಾ ಟೀ ಬಿಡುಗಡೆ ಮಾಡಲಾಗಿದೆ.
ವೇದ ಸಿನಿಮಾದಲ್ಲಿ ನಟ ಶಿವಣ್ಣ ಮತ್ತೆ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಕೂಡ ಓಂ ಸಿನಿಮಾ ರೀತಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿದೆ ಎನ್ನಲಾಗುತ್ತಿದೆ. ಇನ್ನು ನೆನ್ನೆ ಈ ಸಿನಿಮಾದ ಟೀ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ.
ಇನ್ನು ಈ ಕಾರ್ಯಕ್ರಮವನ್ನು ನಿರೂಪಕಿ ಅನುಶ್ರೀ ಅವರು ನೆರವೇರಿಸಿದ್ದು, ಅನುಶ್ರೀ ಕೋರಿಕೆಯ ಮೇಲೆ ಶಿವಣ್ಣ ವೇದಿಕೆ ಮೇಲೆ ಸಿನಿಮಾದ ಮಾಸ್ ಡೈಲಾಗ್ ಹೊಡೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..