ಗಡಿ ವಿವಾದದ ಬಗ್ಗೆ ಮಾತನಾಡಿದ ಶಿವಣ್ಣ ಹೇಳಿದ್ದೇನು ಗೊತ್ತಾ ನೀವೇ ನೋಡಿ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ಗಡಿ ವಿವಾದವನ್ನು ಯಾರು ಸಹ ದೊಡ್ಡದು, ಮಾಡಬಾರದು ಅಂತಹ ಸಮಯ ಬಂದರೆ ಇಡೀ ಕನ್ನಡ ಚಿತ್ರರಂಗ ಒಟ್ಟಾಗಿ ನಿಂತು ಹೋರಾಟ ನಡೆಸುತ್ತಾರೆ. ನಮ್ಮ ಮಣ್ಣಿನ ಪರವಾಗಿ ಹೋರಾಟ ಎಂದರೆ ಸತ್ಯವಾಗಿಯೂ ಎಲ್ಲಾ ಕನ್ನಡ ನಟರು ಹೋರಾಟ ಮಾಡಲು ಬಂದೆ ಬರುತ್ತಾರೆ.

ಎಂದು ಶಿವ ರಾಜ್ ಕುಮಾರ್ ಅವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಇನ್ನು ಇತ್ತೀಚೆಗೆ ನಟ ಶಿವಣ್ಣ , ಜಗ್ಗೇಶ್ ಸೇರಿದಂತೆ ಕೆಲವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಇನ್ನು ಇದೆ ವೇಳೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯ ವಿಷಯದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಿವಣ್ಣ ಈ ರೀತಿ ಉತ್ತರಿಸಿದ್ದಾರೆ.

ನನಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿಯ ವಿಚಾರ ಕುರಿತು ಜಗಳದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ನಾನು ಹೇಳುವುದು ಇಷ್ಟೇ, ಮೊದಲು ನಾವು ಎಲ್ಲಿದ್ದೇವೆ, ಯಾವ ಜಾಗದಲ್ಲಿದ್ದೇವೆ ಅದಕ್ಕೆ ಗೌರವವನ್ನು ಕೊಡಬೇಕು. ಯಾರು ಏನೇ ಹೇಳಿದರೂ ಸಹ ನಾವು ಒಟ್ಟಾಗಿ ಇರಬೇಕು.

ಯಾರೇ ಆದರೂ ಯಾರೇ ನಮ್ಮ ಬಳಿ ಬಂದರೂ ಅವರನ್ನು ನಾವು ಪ್ರೀತಿಯಿಂದ ಸ್ವಾಗತಿಸೋಣ, ಎಲ್ಲರನ್ನು ನಾವು ಸೋದರ ಭಾವದಿಂದ ಕಾಣಬೇಕು ಎಂದು ನಟ ಡಾಕ್ಟರ್ ಶಿವರಾಜ ಕುಮಾರ್ ಅವರು ಎಲ್ಲರಿಗೂ ಸಹ ಸಲಹೆ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಇನ್ನು ಗಡಿ ವಿವಾದದ ಬಗ್ಗೆ ಮಾತನಾಡಿದ ಸಿ ಎಂ ಬೊಮ್ಮಾಯಿ ಅವರು ವಿಶ್ವದ ಹಾಗೂ ರಾಜ್ಯದ ಯಾವುದೇ ಮೂಲೆಯಲ್ಲಿ ಕನ್ನಡಿಗರು ಇದ್ದಾರೆ ಅವರನ್ನು ಕಾಪಾಡುವುದು ನಮ್ಮ ಸರ್ಕಾರದ ಜವಾಬ್ದಾರಿ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ನಿಲುವು ಸ್ಪಷ್ಟವಾಗಿದೆ

ಎಂದು ಸಿ ಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಅಲ್ಲದೆ ತಮಿಳುನಾಡು ಹಾಗೆ ಕೇರಳದ ಗಡಿ ಬಾಗದಲ್ಲಿ ಇರುವ ಜಿಲ್ಲೆಗಳ 1800 ಗ್ರಾಮಪಂಚಾಯತಿ ಅಭಿವೃದ್ದಿ, ಗಡಿ ಭಾಗದಲ್ಲಿ ಕನ್ನಡ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಹಲವು ಮಹತ್ವದ ಯೋಜನೆಗಳನ್ನು ಗೋಷಿಸಿದ್ದರು.

ಸದ್ಯ ಶಿವಣ್ಣ ಹಾಗೂ ಸಿ ಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *