ಕನ್ನಡ ಭಾಷೆಯ ಅಭಿಮಾನದಿಂದ 100 ಕೋಟಿ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! ರಶ್ಮಿಕಾಗೆ ನಾಚಿಕೆಯಾಗಬೇಕು ಎಂದ ಅಭಿಮಾನಿಗಳು! ನೀವೇ ನೋಡಿ!…

ಸ್ಯಾಂಡಲವುಡ್

ಕೆಲವರು ಸಿನಿಮಾರಂಗದಲ್ಲಿ ಕೊಂಚ ಹೆಸರು ಮಾಡಿದರೆ ಸಾಕು ಬೇರೆ ಭಾಷೆಗಳಿಗೆ ಹೋಗಿ ನಮ್ಮ ಭಾಷೆಯನ್ನು ಮರೆತು ಬಿಡುತ್ತಾರೆ. ಇನ್ನು ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶ ಗುರುತಿಸಿಕೊಂಡಿರುವ ರಾಜಮೌಳಿ ಅವರು ನಾನು 100 ಅಲ್ಲ 200 ಕೋಟಿ ಕೊಟ್ಟರು ಸಹ ಬೇರೆ ಭಾಷೆಗಳಿಗೆ ಸಿನಿಮಾ ಮಾಡುವುದಿಲ್ಲ ಎಂದು ಕಡಾಕಂಡಿತವಾಗಿ ಹೇಳಿದ್ದಾರೆ.

ಇನ್ನು ಕೇವಲ ತೆಲುಗು ಹಿರೋಗಳನ್ನೆ ಅಂದರೆ ಟಾಲಿವುಡ್ ನ ಸ್ಟಾರ್ ನಟರನ್ನು ಮಾತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪರಿಚಯಿಸಿದರು. ಇನ್ನು ನಮ್ಮ ಕನ್ನಡದಲ್ಲಿ ಬೆಳೆದು ನಂತರ ಬೇರೆ ಇಂಡಸ್ಟ್ರಿಗೆ ಹೋಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಸ್ಟಾರ್ ನಟರ ಉದಾಹರಣೆ ಕೂಡ ಇದೆ.

ಇನ್ನು ಇದೆ ರೀತಿ ನಟ ರಿಷಬ್ ಶೆಟ್ಟಿ ಅವರಿಗೂ ಸಹ ಒಂದು ದೊಡ್ಡ ಆಫರ್ ಅನ್ನೆ ಕೊಡಲಾಗಿತ್ತು. 100 ಕೋಟಿ ಕೊಡುತ್ತೇವೆ ಬೇರೆ ಭಾಷೆಗೆ ಸಿನಿಮಾ ಮಾಡಿ ಕೊಡ್ತೀರಾ ಎನ್ನುವ ಆಫರ್ ರಿಷಬ್ ಶೆಟ್ಟಿ ಅವರಿಗೆ ನೀಡಲಾಗಿತ್ತು. ಇದಕ್ಕೆ ರಿಷಬ್ ಶೆಟ್ಟಿ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ರಿಷಬ್ ಶೆಟ್ಟಿ ಅವರು ನೇರವಾಗಿ ಒಂದು ಮಾತನ್ನು ಹೇಳುತ್ತಾರೆ, ನಾನು ಕನ್ನಡಕ್ಕಾಗಿ ಸಿನಿಮಾವನ್ನು ಮಾಡಬೇಕು ಹಾಗೆ ಕನ್ನಡಿಗರಿಗಾಗಿ ಸಿನಿಮಾವನ್ನು ಮಾಡಬೇಕು. ನಾನು ಈ ಸ್ಥಾನದಲ್ಲಿ ಇದ್ದೀನಿ ಎಂದರೆ ಅದಕ್ಕೆ ಕಾರಣ ಕನ್ನಡಿಗರು ಮಾತ್ರ ಎಂದು ಹೇಳಿ ನಟ ರಿಷಬ್ ಶೆಟ್ಟಿ ಆಫರ ಅನ್ನು ರಿಜೆಕ್ಟ್ ಮಾಡುತ್ತಾರೆ.

ಇದಕ್ಕೆ ಮುಖ್ಯ ಕಾರಣ ರಿಷಬ್ ಶೆಟ್ಟಿ ಅವರಿಗೆ ಕನ್ನಡದ ಮೇಲಿರುವ ಅಭಿಮಾನ. ಆದರೆ ಕೆಲವು ಸ್ಟಾರ್ ಕಲಾವಿದರು ಕನ್ನಡದಿಂದಲೇ ತಮ್ಮ ಸಿನಿ ಕೆರಿಯರ್ ಶುರು ಮಾಡಿ ನಂತರ ಕನ್ನಡ ಭಾಷೆಗೆ ತಿರಸ್ಕಾರ ತೋರಿಸುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿ ನಂತರ ಬೇರೆ ಭಾಷೆಗಳಿಗೆ ಹೋಗಿ ಅಲ್ಲಿ ಸಹ ಸಾಕಷ್ಟು ಹೆಸರು ಮಾಡಿ, ಇದೀಗ ಕನ್ನಡ ಭಾಷೆಯ ವಿರುದ್ದ ಅವರು ತೋರಿಸುವ ಅಗೌರವ ಕನ್ನಡಿಗರಿಗೆ ಬಹಳ ಬೇಸರ ತರಿಸುತ್ತಿದೆ.

ಇನ್ನು ಇದೀಗ ನಟ ರಿಷಬ್ ಶೆಟ್ಟಿ ಅವರು ಮಾಡಿರುವ ಕೆಲಸ ನಿಜಕ್ಕೂ ನಟಿ ರಶ್ಮಿಕಾ ಅಂತಹ ನಟಿಯರಿಗೆ ಕಪಾಳ ಮೋಕ್ಷ ಎನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ಈ ಮಾಹಿತಿ ನನಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….

Leave a Reply

Your email address will not be published. Required fields are marked *