ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿ ಈಗಾಗಲೇ ಹತ್ತು ವಾರಗಳು ಕಳೆದು ಹೋಗಿದೆ. ಈ ಸೀಸನ್ ನಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಸ್ಪರ್ಧಿಗಳು ಎಂದರೆ ಅದು ಪ್ರಶಾಂತ್ ಹಾಗೂ ರೂಪೇಶ್ ರಾಜಣ್ಣ. ಯಾವುದಾದರೂ ಒಂದು ವಿಷಯಕ್ಕೆ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಸುದ್ದಿಯಲ್ಲಿರುತ್ತಾರೆ.
ಸದ್ಯ ಇದೀಗ ಪ್ರಶಾಂತ್ ಸಂಬರ್ಗಿ ಅವರ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಪ್ರಶಾಂತ್ ಸಂಬರ್ಗಿ ಅವರು ಇದೀಗ ಬಿಗ್ ಬಸ್ ಮನೆಯಲ್ಲಿ ಹೆಣ್ಣಿನಂತ ವೇಷ ಧರಿಸಿ ಎಲ್ಲರ ಘಮನ ಸೆಳೆದಿದ್ದಾರೆ. ಸದ್ಯ ಈ ಪ್ರೋಮೋ ಬಹಳ ವೈರಲ್ ಆಗುತ್ತಿದೆ.
ಹೌದು ಪ್ರಶಾಂತ್ ಸಂಬರ್ಗಿ ಇದೀಗ ಪ್ರಶಾಂತಿ ಆಗಿ ಬದಲಾಗಿದ್ದಾರೆ. ಸದ್ಯ ಪ್ರಶಾಂತ್ ಅವರ ಈ ಲುಕ್ ನೋಡಿ ಮನೆಯವರೆಲ್ಲಾ ನಕ್ಕಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರ ಹೊಸ ಲುಕ್ ನ ಹಿಂದಿನ ರಹಸ್ಯ ಏನು ಎನ್ನುವುದನ್ನು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಬಿಗ್ ಬಾಸ್ ಮನೆಯಲ್ಲಿ ಯಾವುದೇ ನಿಯಮ ಉಲ್ಲಂಗನೆ ಮಾಡಿದರು ಸಹ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಿಕ್ಷೆ ನೀಡುತ್ತಾರೆ. ಇನ್ನು ಇದೀಗ ಅನುಪಮಾ ಅವರು ಬಿಗ್ ಬಸ್ ಮನೆಯ ಪ್ರಾಪರ್ಟಿ ಹೊಡೆದು ಹಾಕಿದ್ದಾರೆ. ಹೌದು ನೀರು ಕುಡಿಯುವ ಗ್ಲಾಸ್ ಅನ್ನು ಅನುಪಮಾ ಹೊಡೆದು ಹಾಕಿದ್ದಾರೆ.
ಇದೀಗ ಬಿಗ್ ಬಾಸ್ ಅನುಪಮಾ ಅವರಿಗೆ ಶಿಕ್ಷೆ ನೀಡಿದ್ದಾರೆ. ಅನುಪಮಾ ಅವರು ನೀರು ಕುಡಿಯಬೇಕು ಎಂದರೆ ಪ್ರತಿ ಸಲ ಅವರು ಮನೆಯ ಪುರುಷ ಸದಸ್ಯರಿಗೆ ನೃತ್ಯ ಹೇಳಿಕೊಟ್ಟು ನಂತರ ನೀರು ಕುಡಿಯಬೇಕು. ಅನುಪಮಾ ಇದರ ಅನುಸಾರ ಮನೆಯ ಎಲ್ಲಾ ಪುರುಷ ಸದಸ್ಯರಿಗೆ ನೃತ್ಯ ಹೇಳಿಕೊಟ್ಟಿದ್ದಾರೆ.
ಇನ್ನು ಪ್ರಶಾಂತ್ ಸಂಬರ್ಗಿ ಅವರನ್ನು ಕರೆದುಕೊಂಡು ಹೋಗಿ ಅನುಪಮಾ ಅವರು ಫ್ರಾಕ್ ಹಾಕಿಸಿ, ಮೇಕ್ ಅಪ್ ಮಾಡಿ ಹೆಣ್ಣಿನ ರೀತಿ ಕಾಣುವಂತೆ ರೆಡಿ ಮಾಡಿದ್ದಾರೆ. ನಂತರ ಅದೇ ಅವತಾರದಲ್ಲಿ ಪ್ರಶಾಂತ್ ಮನೆಯವರ ಮುಂದೆ ಬಂದು ರ್ಯಾಂಪ್ ವಾಕ್ ಮಡಿದ್ದಾರೆ.
ನಂತರ ಅನುಪಮಾ ಅವರು ಪ್ರಶಾಂತ್ ಅವರಿಗೂ ಕೂಡ ನೃತ್ಯ ಹೇಳಿಕೊಟ್ಟಿದ್ದು, ಪ್ರಶಾಂತ್ ನೃತ್ಯ ನೋಡಿ ಮನೆಯವರೆಲ್ಲಾ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ಧಾರೆ. ಸದ್ಯ ಈ ಪ್ರೋಮೋ ಬಿದುಗ್ದೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಯಗಳನ್ನೂ ಕಾಮೆಂಟ್ ಮಾಡುವ ಮೂಲಕ ತಿಳಿಸಿ..
View this post on Instagram