ಸಹಜವಾಗಿ ಸಿನಿಮಾ ರಂಗದಲ್ಲಿ ಸ್ಟಾರ್ ಕಲಾವಿದರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ನಂತರ ಅವರ ಮಕ್ಕಳನ್ನು ಸಿನಿ ಪ್ರಪಂಚಕ್ಕೆ ಪರಿಚಯಿಸುತ್ತಾರೆ. ಇನ್ನು ಅವರು ಯಾವ ರೀತಿ ಸಿನಿಮಾರಂಗದಲ್ಲಿ ಉಳಿಯುತ್ತಾರೆ ಎನ್ನುವುದು ಅವರ ಪ್ರತಿಭೆಯ ಮೇಲೆ ನಿಂತಿರುತ್ತದೆ.
ಸ್ಯಾಂಡಲ್ ವುಡ್ ನಲ್ಲಿ ಲವ್ಲಿ ಸ್ಟಾರ್ ಎಂದೆ ಕ್ಯಾತಿ ಪಡೆದಿರುವ ನಟ ಪ್ರೇಮ್. ತಮ್ಮ ಉತ್ತಮವಾದ ನಟನೆಯ ಮೂಲಕ ನಟ ಪ್ರೇಮ್ ಸ್ಯಾಂಡಲ್ವುಡ್ ನಲ್ಲಿ ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಪ್ರೇಮ್ ಅವರ ಮಗಳು ಕೂಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.
ಪ್ರೇಮ್ ಅವರ ಮಗಳು ಅಮೃತಾ ಪ್ರೇಮ್ ಇದೀಗ ಸಿನಿ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ವಿಷಯ ನಿಮ್ಮೆಲ್ಲರಿಗೂ ಗೊತ್ತಿದೆ. ಡಾಲಿ ಧನಂಜಯ ನಿರ್ಮಾಣ ಮಾಡುತ್ತಿರುವ ಟಗರು ಪಲ್ಯ ಸಿನಿಮಾದ ಮೂಲಕ ಅಮೃತಾ ಪ್ರೇಮ್ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಈ ಬಗ್ಗೆ ಸ್ವತಃ ನಟ ಪ್ರೇಮ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ನನ್ನ ಮಗಳನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಅವಳ ಮೇಲೆ ನಿಮ್ಮ ಆಶೀರ್ವಾದ ಪ್ರೋತ್ಸಾಹ ಸದಾ ಇರಲಿ ನಿಮ್ಮ ನೆನಪಿರಲಿ ಪ್ರೇಮ್ ಎಂದು ಬರೆದುಕೊಂಡಿದ್ದರು.
ಇನ್ನು ಅಮೃತ ಪ್ರೇಮ್ ಅವರಿಗೆ ಅಪ್ಪು ಎಂದರೆ ಬಹಳ ಇಷ್ಟ. ಅಮೃತ ಅವರು ಅಪ್ಪು ಅವರ ದೊಡ್ಡ ಅಭಿಮಾನಿ ಇನ್ನು ಇತ್ತೀಚೆಗೆ ಅಮೃತ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಹುಟ್ಟುಹಬ್ಬಕ್ಕೆ ವಿಶೇಷವಾದ ಫೋಟೋ ಹಂಚಿಕೊಂಡು ಶುಭ ಕೋರಿದ್ದರು.
ಅಪ್ಪು ಜೊತೆಗಿನ ಫೋಟೋವನ್ನು ಅಮೃತ ಅವರು ಹಂಚಿಕೊಂಡು, ಒಂದು ಊರಿನಲ್ಲಿ ಒಬ್ಬ ರಾಜಕುಮಾರ ಇದ್ದ, ರಾಜಕುಮಾರ ಯಾವುದೇ ಯುದ್ಧ ಮಾಡದೆ ಇಡೀ ರಾಜ್ಯವನ್ನೇ ಗೆದ್ದಿದ್ದ. ರಾಜಕುಮಾರನ ಹೆಸರು ಪುನೀತ್ ರಾಜಕುಮಾರ್ ಎಂದು ಫೋಟೋ ಶೇರ್ ಮಾಡಿ ಕ್ಯಾಪ್ಷನ್ ನೀಡಿದರು.
ಇನ್ನು ಅಮೃತ ಅವರು ಈ ಫೋಟೋದಲ್ಲಿ ಲಂಗ ದಾವಣಿ ಧರಿಸಿ ಅಪ್ಪು ಜೊತೆಗೆ ಪೋಸ್ ನೀಡಿದ್ದಾರೆ. ಸದ್ಯ ಈ ವಿಶೇಷವಾದ ಫೋಟೋ ಸೋಶಿಯಲ್ ವಿಡಿಯೋದಲ್ಲಿ ಸಕತ್ ವೈರಲ್ ಆಗುತ್ತದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…