ಹಿರಿಯ ನಟ ಬಿ ಸಿ ಪಾಟೀಲ್ ಅವರು ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿದ್ದ ಬಿ ಸಿ ಪಾಟೀಲ್ ಅವರು ಅಲ್ಲಿಂದ ವಿಡಿಯೋ ಒಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ತಮ್ಮ ಅಭಿಮಾನಿಗಳಿಗೆ,
ಮಾಹಿತಿ ನೀಡಿದ್ದರು. ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಂಡಿ ನೋವಿನ ಕಾರಣದಿಂದ ಶಾಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದು, ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದದಿಂದ ಗುಣಮುಖನಾಗುತ್ತಿದ್ದೇನೆ, ದಯವಿಟ್ಟು ಎಲ್ಲರೂ ಕೆಲವು ದಿನಗಳ ಕಾಲ ಸಹಕರಿಸಬೇಕಾಗಿ ವಿನಂತಿ.
ಇಲಾಖೆ ಹಾಗೂ ಕ್ಷೇತ್ರದ ಅಭಿವೃದ್ದಿ ಕಾರ್ಯಕ್ರಮಗಳು ಸುಗಮವಾಗಿ ಸಾಗಲು ಅಧಿಕಾರಿಗಳ ಸಂಪರ್ಕದಲ್ಲಿದ್ದು, ಸೂಕ್ತ ಸೂಚನೆ ನೀಡುತ್ತಿದ್ದೇನೆ ಎಂದು ನಟ ಹಾಗೂ ಸಚಿವ ಬಿ ಸಿ ಪಾಟೀಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಸೂಚನೆ ನೀಡಿದ್ದರು.
ಇನ್ನು ಇದೀಗ ಆಸ್ಪತ್ರೆಯಿಂದ ಬಿ ಸಿ ಪಾಟೀಲ್ ಅವರು ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದು, ವೈದ್ಯರು ಬಿ ಸಿ ಪಾಟೀಲ್ ಅವರಿಗೆ ಕೆಲವು ದಿನಗಳ ಕಾಲ ಸಂಪೂರ್ಣ ರೆಸ್ಟ್ ತೆಗೆುಕೊಳ್ಳಲು ಹೇಳಿದ್ದಾರೆ. ಇನ್ನು ಬಿ ಸಿ ಪಾಟೀಲ್ ಅವರು ಡಿಸ್ಚಾರ್ಜ್ ಆಗಿ ಮನೆಗೆ ಬಂದ ತಕ್ಷಣ ಅವರನ್ನು ನೋಡಿ ಅದೆಷ್ಟೋ ಜನ ಅವರ ಮನೆಗೆ ಬಂದು,
ಅವರ ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಇದೀಗ ಸ್ಯಾಂಡಲ್ವುಡ್ ನಟ ಡಿ ಬಾಸ್ ದರ್ಶನ್ ಅವರು ಕೂಡ ಬಿ ಸಿ ಪಾಟೀಲ್ ಅವರ ಆರೋಗ್ಯದ ಬಗ್ಗೆ ತಿಳಿದು ಅವರನ್ನು ನೋಡಲು ಅವರ ಮನೆಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.
ಇನ್ನು ಬಿ ಸಿ ಪಾಟೀಲ್ ಅವರ ಮನೆಗೆ ಬಂದ ನಟ ದರ್ಶನ್ ಅವರು, ಅವರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ, ವೈದ್ಯರು ಹೇಳಿರುವ ಪ್ರತಿಯೊಂದು ಮಾತನ್ನು ಕೇಳಿ ಅದನ್ನು ಪಾಲಿಸಿಕೊಂಡು ಆದಷ್ಟು ಬೇಗ ಹುಷಾರಾಗಿ ಬನ್ನಿ.
ನಿಮ್ಮ ಜೊತೆಗೆ ನಾ ಸದಾ ಇರುತ್ತೇವೆ ಎಂದು ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಇನ್ನು ದರ್ಶನ್ ಹಾಗೂ ಬಿ ಸಿ ಪಾಟೀಲ್ ಇಬ್ಬರೂ ಚಿತ್ರರಂಗದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿ ಸಹ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇನ್ನು ದರ್ಶನ್ ಅವರು ಯಾರಿಗೆ ಕಷ್ಟ ಎಂದರು ಸಹ ಸ್ಪಂದಿಸುತ್ತಾರೆ. ಸದ್ಯ ದರ್ಶನ್ ಅವರ ಈ ಗುಣ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..