ಸ್ಯಾಂಡಲ್ವುಡ್ ನಲ್ಲಿ ಸದ್ಯ ಸಾಕಷ್ಟು ಚರ್ಚೆಯಾಗುತ್ತಿರುವ ಜೋಡಿ ಎಂದರೆ ಅದು ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ. ಈ ಇಬ್ಬರೂ ಮದುವೆಯಾಗುತ್ತಿದ್ದಾರೆ ಎನ್ನುವ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇದಕ್ಕೆ ಪೂರಕವೆಂಬಂತೆ ಇದೀಗ ಈ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಇಬ್ಬರ ಜೋಡಿ ಬಹಳ ಮುದ್ದಾಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಶುಭ ಕೊಡುತ್ತಿದ್ದಾರೆ. ಸದ್ಯ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ನಟ ವಶಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರ ನಿಶ್ಚಿತಾರ್ಥದ ವಿಚಾರ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ನಟ ವಶಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಇಬ್ಬರೂ ತಮ್ಮ ಪೋಷಕರು ಹಾಗೂ ಆಪ್ತರ ಸಮುಖದಲ್ಲಿ ತುಂಬಾ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಇನ್ನು ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಅವರಿಗೆ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದರು. ಇನ್ನು ಈ ಜೋಡಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿತ್ತು.
ಇನ್ನು ಇದೀಗ ಈ ವಿಡಿಯೋದಲ್ಲಿ ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಇಬ್ಬರೂ ಉಂಗುರ ಬದಲಾಯಿಸಿಕೊಂಡ ನಂತರ ನಟಿ ಹರಿಪ್ರಿಯಾ ಅವರು ವಶಿಷ್ಠ ಸಿಂಹ ಅವರನ್ನು ತಬಿಕೊಂಡಿದ್ದಾರೆ. ಇನ್ನು ಇದೆ ವೇಳೆ ನಟಿ ಹರಿಪ್ರಿಯಾ ಅವರು ತಮ್ಮ ಅಣ್ಣ ಹಾಗೂ ಅಮ್ಮನನ್ನು ನೋಡಿ ಕಣ್ಣೀರು ಹಾಕಿದ್ದಾರೆ.
ಹೌದು ನಟಿ ಹರಿಪ್ರಿಯಾ ಎಂಗೇಜ್ಮೆಂಟ್ ವೇಳೆ ತಮ್ಮ ಅಣ್ಣ ಹಾಗೂ ಅಮ್ಮನನ್ನು ನೋಡಿ ಭಾವುಕರಾಗಿದ್ದರು. ಇದನ್ನು ನೋಡಿದ ವಶಿಷ್ಠ ಸಿಂಹ ಅವರು ಹರಿಪ್ರಿಯಾ ಅವರಿಗೆ ಸಮಾಧಾನ ಮಾಡುತ್ತಾ, ಅವರ ಕಣ್ಣೀರು ವರೆಸಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು, ವಶಿಷ್ಠ ಸಿಂಹ ಒಳ್ಳೆಯ ಪತಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ.
ನಂತರ ಒಬ್ಬರಿಗೊಬ್ಬರು ಸಿಹಿ ತಿನಿಸಿಕೊಂಡಿದ್ದಾರೆ. ಇನ್ನು ಅಲ್ಲಿದ್ದ ಕೆಲವರು ನನ್ನ ತಂಗಿಯ ಮದುವೆ ಹಾಡನ್ನು ಹಾಡಿ ನಟಿ ಹರಿಪ್ರಿಯ ಅವರ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..